newsfirstkannada.com

ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ರಿಲೀಸ್ ಯಾವಾಗ? ಪ್ಲಾನ್ ಏನು? ಇಲ್ಲಿದೆ ಅಪ್​ಡೇಟ್​!

Share :

24-10-2023

    ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍ನಿಂದ ನಿರ್ಮಾಣ ಆಗಿರುವ ಮೊದಲ ಸಿನಿಮಾ

    ಊಟಿ, ಮೈಸೂರು, ಕುದುರೆಮುಖ ಮುಂತಾದ ಕಡೆ ಸಿನಿಮಾ ಶೂಟಿಂಗ್

    ರಾಜ್​.ಬಿ ಶೆಟ್ಟಿ ನಿರ್ದೇಶನ ಮಾಡಿರುವ ಜತೆಗೆ ಹೀರೋ ಕೂಡ ಆಗಿದ್ದಾರೆ

ಸ್ಯಾಂಡಲ್‍ವುಡ್‍ ಮೋಹಕ ತಾರೆ ರಮ್ಯಾ ಅವರ ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍ನಿಂದ ನಿರ್ಮಾಣ ಆಗುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ನವೆಂಬರ್‌ 24ರಂದು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಸಿನಿಮಾವನ್ನು ರಾಜ್​.ಬಿ ಶೆಟ್ಟಿ ನಿರ್ದೇಶನ ಮಾಡಿದ್ದು ಇವರೇ ಕಥೆಯ ನಾಯಕನಾಗಿದ್ದಾರೆ. ಇನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್‍ ನೇತೃತ್ವದ KRJ ಸ್ಟುಡಿಯೋಸ್‍ ವಿತರಣೆ ಮಾಡುತ್ತಿದೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾವು ಕಳೆದ ವರ್ಷ ವಿಜಯದಶಮಿಯ ದಿನದಂದು ಅಧಿಕೃತವಾಗಿ ಘೋಷಣೆಯಾಗಿತ್ತು. ಸದ್ಯ ಈ ವರ್ಷ ಅದೇ ದಿನದಂದು ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಇದೊಂದು ರೊಮ್ಯಾಂಟಿಕ್‍ ಚಿತ್ರವಾಗಿದ್ದು, ಊಟಿ, ಮೈಸೂರು, ಕುದುರೆಮುಖ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಇದು ರಾಜ್‍ ಬಿ ಶೆಟ್ಟಿ ನಿರ್ದೇಶನದ 3ನೇ ಚಿತ್ರವಾಗಿದ್ದು, ಹಿಂದಿನ 2 ಚಿತ್ರಗಳಿಗಿಂತ ವಿಷಯ ಮತ್ತು ಮೇಕಿಂಗ್‍ನಲ್ಲಿ ಅತ್ಯಂತ ವಿಭಿನ್ನವಾಗಿದೆ.

ನಟಿ ರಮ್ಯಾ (ಬಲಗಡೆ ಇರುವ ಫೋಟೋ)

ಈ ಸಿನಿಮಾ ಒಂದು ಕಾವ್ಯಾತ್ಮಕ ಪ್ರೇಮ ಕಥೆಯಾಗಿದ್ದು, ರಾಜ್‍ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್‌ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರೇಖಾ ಕೂಡ್ಲಿಗಿ, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ಜೆಪಿ ತುಮ್ಮಿನಾಡು, ಸ್ನೇಹಾ ಶರ್ಮ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಪ್ರವೀಣ್‍ ಶ್ರೀಯಾನ್‍ ಅವರ ಛಾಯಾಗ್ರಹಣ ಮತ್ತು ಮಿಥುನ್‍ ಮುಕುಂದನ್‍ ಅವರ ಸಂಗೀತವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ರಿಲೀಸ್ ಯಾವಾಗ? ಪ್ಲಾನ್ ಏನು? ಇಲ್ಲಿದೆ ಅಪ್​ಡೇಟ್​!

https://newsfirstlive.com/wp-content/uploads/2023/10/RAMYA_CINEMA.jpg

Load More