newsfirstkannada.com

ಟಾಸ್ ಗೆದ್ದು ತಪ್ಪು ನಿರ್ಣಯ ತೆಗೆದುಕೊಂಡ ರಶೀದ್ ಖಾನ್.. ಕೋಚ್ ಮುಂದೆ ಹೋಗಿ ಗಳಗಳನೇ ಕಣ್ಣೀರಿಟ್ಟ ನಾಯಕ..!

Share :

Published June 27, 2024 at 9:13am

    ಕೋಚ್​ ಬಳಿಗೆ ಹೋಗಿ ಕಣ್ಣೀರು ಹಾಕಿದ ನಾಯಕ ರಶೀದ್

    ಮೊದಲ ಬಾರಿಗೆ ಫೈನಲ್​ ಹೋಗುವ ಕನಸು ನುಚ್ಚು ನೂರು​

    ಮೈದಾನದಿಂದ ಹೊರ ಬರುವಾಗ ಅಳುತ್ತಾ ಬಂದ ಪ್ಲೇಯರ್ಸ್

T20 ವರ್ಲ್ಡ್​ಕಪ್​ ಸೆಮಿಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ತಂಡ ಹೀನಾಯವಾಗಿ ಸೋತು ಹೋಗಿದೆ. ಕೇವಲ 56 ರನ್​ಗೆ ಆಲೌಟ್ ಆಗುವ ಮೂಲಕ ಅಫ್ಘಾನ್ ಟೀಮ್​​ T20 ವರ್ಲ್ಡ್​ಕಪ್​ನಲ್ಲಿ ದೊಡ್ಡ ಆಘಾತಕ್ಕೆ ಒಳಗಾಗಿದೆ. ಸೌತ್ ಆಫ್ರಿಕಾ ಗೆಲುವು ಪಡೆಯುತ್ತಿದ್ದಂತೆ ಅಫ್ಘಾನ್ ಕ್ಯಾಪ್ಟನ್​ ರಶೀದ್ ಖಾನ್ ಸೇರಿದಂತೆ ಇತರೆ ಪ್ಲೇಯರ್ಸ್ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Kalki 2898 AD: ತೆರೆ ಮೇಲೆ ಗ್ರ್ಯಾಂಡ್ ಆಗಿ ಅಪ್ಪಳಿಸಿದ ಕಲ್ಕಿ.. ಸ್ಟಾರ್ ದಿಗ್ಗಜರ ಕಂಡು ಸಿನಿ ರಸಿಕರು ಫುಲ್ ಖುಷ್..!

ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ದೊಡ್ಡ ತಪ್ಪು ಎಂದು ಕೆಲವೇ ಕ್ಷಣದಲ್ಲಿ ಗೊತ್ತಾಯಿತು. ಏಕೆಂದರೆ ಮೊದಲ ಬ್ಯಾಟಿಂಗ್​ ಮಾಡಲು ಮೈದಾನ ಸಹಕರಿಸಲಿಲ್ಲ. ಬೌಲರ್ಸ್​ಗೆ ಹೆಚ್ಚು ಸಹಕಾರಿಯಾಯಿತು.

ಹೀಗಾಗಿ ತಂಡದ ಓಪನರ್ಸ್​ ಗುರ್ಬಾಜ್ ಹಾಗೂ ಜರ್ದಾನಿ ಹೀಗೆ ಬಂದು ಹಾಗೇ ಹೋದರು. ತಂಡದಲ್ಲಿ ಅಜ್ಮತುಲ್ಲಾ 10 ರನ್​ ಗಳಿಸಿದ್ದೆ ವೈಯಕ್ತಿಕ ಗರಿಷ್ಠ ರನ್​ ಆಗಿದೆ. ಮೂವರು ಡಕೌಟ್ ಆದ್ರೆ ನಾಲ್ವರು ಪ್ಲೇಯರ್ಸ್​ ಕೇವಲ 2 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಅಫ್ಘಾನ್​ ಕೇವಲ 11.5 ಓವರ್​​ಗಳಲ್ಲಿ 56 ರನ್​ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್​ ಅನ್ನು ಸೌತ್ ಆಫ್ರಿಕಾ ತಂಡ. 8.5 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 60 ಗಳಿಸಿ ಗೆಲುವನ್ನು ಸಂಭ್ರಮಿಸಿತು.

ಇದನ್ನೂ ಓದಿ: ಜಸ್ಟ್​ ಗುರಾಯಿಸಿದ್ಕೆ.. ಬಿಯರ್ ಬಾಟಲ್​ಗಳಿಂದ ತಲೆಗೆ ಹೊಡೆದು ವ್ಯಕ್ತಿಯ ಭೀಕರ ಕೊಲೆ

ಇದರಿಂದ ಭಾರೀ ಬೇಸರಕ್ಕೆ ಒಳಗಾಗಿದ್ದ ಕ್ಯಾಪ್ಟನ್ ರಶೀದ್ ಖಾನ್ ಬ್ಯಾಟಿಂಗ್ ಆಯ್ಕೆ ಮಾಡಿ ದೊಡ್ಡ ತಪ್ಪು ಮಾಡಿದೆನಲ್ಲ ಎಂದುಕೊಂಡರು. ಬಳಿಕ ಕೋಚ್ ಬಳಿಗೆ ಹೋಗಿ ಕ್ಯಾಪ್ಟನ್ ರಶೀದ್ ಕಣ್ಣೀರು ಹಾಕಿದ್ದಾರೆ. ಉಳಿದ ಪ್ಲೇಯರ್ಸ್ ಮೊಗದಲ್ಲೂ ಖುಷಿ ಮಾಯವಾಗಿತ್ತು. ಬಾಂಗ್ಲಾ ವಿರುದ್ಧ ಗೆದ್ದು ವಿಶ್ವಕಪ್​ ಗೆದ್ದಷ್ಟೇ ಸಂಭ್ರಮಿಸಿದ್ದ ಅಫ್ಘಾನ್​ ಪ್ಲೇಯರ್ಸ್ ಸೆಮಿಫೈನಲ್​ನಲ್ಲಿ ಸೋತು ಕಣ್ಣೀರು ಹಾಕಿದರು. ಮೈದಾನದಿಂದ ಹೊರ ಬರುವಾಗ ಎಲ್ಲ ಪ್ಲೇಯರ್ಸ್ ಅಳುತ್ತಾ ಬಂದರು. ಇದೇ ಮೊದಲ ಬಾರಿಗೆ ಸೆಮಿಫೈನಲ್​ಗೆ ಬಂದಿದ್ದ ರಶೀದ್​ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ಸದ್ಯ T20 ವರ್ಲ್ಡ್​ಕಪ್​ಗೆ ಅಫ್ಘಾನ್ ಸೋಲಿನ ವಿದಾಯ ಹೇಳಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟಾಸ್ ಗೆದ್ದು ತಪ್ಪು ನಿರ್ಣಯ ತೆಗೆದುಕೊಂಡ ರಶೀದ್ ಖಾನ್.. ಕೋಚ್ ಮುಂದೆ ಹೋಗಿ ಗಳಗಳನೇ ಕಣ್ಣೀರಿಟ್ಟ ನಾಯಕ..!

https://newsfirstlive.com/wp-content/uploads/2024/06/RASHID_AFG_SA_.jpg

Load More