newsfirstkannada.com

VIDEO: ಸೆನ್ಸೇಷನ್​​ ಕ್ರಿಯೇಟ್​ ಮಾಡಿದ ನ್ಯಾಷನಲ್​​ ಕ್ರಶ್​​ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ವಿಡಿಯೋ!

Share :

25-06-2023

  'ಗೀತಾಗೋವಿಂದಂ' ಡೇಟಿಂಗ್ ಸ್ಟೋರಿಗೆ ಸಿಕ್ತು ಬಿಗ್​​ ಟ್ವಿಸ್ಟ್​

  ವೈರಲ್ ಆಗಿರೋ ವಿಡಿಯೋದ ಅಸಲಿ ಸತ್ಯಾಂಶ ಏನು..?

  ನ್ಯಾಷನಲ್​ ಕ್ರಶ್​ ರಶ್ಮಿಕಾ-ವಿಜಯ್ ದೇವರಕೊಂಡ ವಿಡಿಯೋ

ನ್ಯಾಷನಲ್​​ ಕ್ರಶ್​​​ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಗೂಗಲ್​ ದೇವಿಗಿಂತ ನಮ್ಮ ಗಾಸಿಪ್ ಮಾಸ್ಟರ್​ಗಳು ತುಂಬಾ ಬುದ್ದಿವಂತರು ಆಗಿದ್ದಾರೆ. ಅದಕ್ಕೆ ಗೂಗಲ್​ನಲ್ಲಿ ಹುಡುಕಿದ್ರು ಸಿಗದಂತ ವಿಚಾರಗಳನ್ನ ಈ ಗಾಸಿಪ್​ ಮಾಸ್ಟರ್ಸ್​ಗಳ ಹುಡುಕಿ ತಂದು ಸೋಶಿಯಲ್ ಮೀಡಿಯಾಗೆ ತೇಲಿ ಬಿಡ್ತಾರೆ. ಈಗಿನ ಜಮಾನದಲ್ಲಿ ಸೋಶಿಯಲ್ ಮೀಡಿಯಾಗೆ ಇಂಥಾ ಸರುಕು ಸಿಕ್ಕರೆ ಸಾಕಲ್ಲವೇ. ದೊಡ್ಡ ಸೆನ್ಸೇಷನ್ ಆಗಿಬಿಡುತ್ತೆ. ಈಗ ಇಂಥದ್ದೇ ವಿಷಯವೊಂದಕ್ಕೆ ಗೀತಾ ಮತ್ತು ಗೋವಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

ಹೌದು, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೊಸ ವಿಷಯವೊಂದು ಗಮನ ಸೆಳೆಯುತ್ತಿದೆ. ಈ ವಿಷಯವನ್ನ ಕಣ್ಣಾರೆ ಕಂಡ ನೆಟ್ಟಿಗರು ಅರೇ ಈ ಏನಾಗ್ತಿದೆ ಅಂತ ಬೆರಗಾಗಿ ನೋಡ್ತಾ ಇದ್ದಾರೆ. ‘ಗೀತಾಗೋವಿಂದಂ’ ಸಿನಿಮಾದಿಂದಲೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಫ್ರೆಂಡ್​ಶಿಪ್​, ರಿಲೇಶನ್​ಷಿಪ್​ ಬಗ್ಗೆ ಬಗೆ ಬಗೆಯ ಕಥೆ-ಕಾದಂಬರಿಗಳು ಹರಿದಾಡ್ತಾನೇ ಇದೆ. ಆದ್ರೆ, ಇಲ್ಲಿವರೆಗೂ ಇವರ ವಿಚಾರದಲ್ಲಿ ಕ್ಲಾರಿಟಿನೇ ಸಿಕ್ಕಿಲ್ಲ. ರಶ್ಮಿಕಾ-ವಿಜಯ್ ದೇವರಕೊಂಡ ಅವರ ರಿಲೇಶನ್​ ಸ್ಟೇಟಸ್ ಏನು ಅಂತ ಕೇಳಿದ್ರೆ ‘ವೀ ಆರ್ ಜಸ್ಟ್ ಫ್ರೆಂಡ್ಸ್’ ಅಂತಾನೇ ಹೇಳ್ತಾರೆ. ಆದ್ರೆ ಇದನ್ನ ಯಾರೂ ನಂಬೋಕೆ ತಯಾರಿಲ್ಲ. ಯಾಕಂದ್ರೆ, ರಶ್ಮಿಕಾ ಮತ್ತು ದೇವರಕೊಂಡ ಹೇಳೋದೊಂದು, ಮಾಡೋದಂದಾಗಿದೆ.

ಗೀತಾ ಗೋವಿಂದಂ ಸಮಯದಿಂದಲೂ ರಶ್ಮಿಕಾ ಮತ್ತು ದೇವರಕೊಂಡ ಒಳ್ಳೆ ಫ್ರೆಂಡ್ಸ್​, ಹಿತೈಷಿಗಳು, ಒಬ್ಬರಿಗೊಬ್ಬರು ಸಪೋರ್ಟ್ ಮಾಡ್ತಾ ಕೆರಿಯರ್​ ಬಿಲ್ಡ್​ ಮಾಡ್ಕೊಳ್ತಿದ್ದಾರೆ ಅನ್ನೋದು ಸತ್ಯ ಸಂಗತಿ. ಆದರೆ ಈ ಸ್ನೇಹದೊಳಗೊಂದು ಪ್ರೀತಿ ಇದೆ, ಅದು ಇವರಿಬ್ಬರನ್ನ ಲೈಫ್​ ಪಾರ್ಟ್ನರ್ ಮಾಡಿದ್ರು ಮಾಡಬಹುದು ಅನ್ನೋದು ಅತ್ಯಾಪ್ತರ ಅಭಿಪ್ರಾಯ. ಅದಕ್ಕೆ ಪುಷ್ಠಿ ಕೊಡುವಂತ ಸಾಕಷ್ಟು ವಿಚಾರಗಳು ಉದಾಹರಣೆಗಳಾಗಿವೆ ನಮ್ಮ ಮುಂದೆ ಇವೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಅದಕ್ಕೆ ಕಾರಣ ಈ ಹಿಂದೆ ರಶ್ಮಿಕಾ ಇನ್​​ಸ್ಟಾಗ್ರಾಮ್​​​ ಲೈವ್ ಮಾಡಿದಾಗ ಬ್ಯಾಕ್ರೌಂಡ್​ನಲ್ಲಿ ದೇವರಕೊಂಡ ವಾಯ್ಸ್​ ಕೇಳಿ ಬಂದಿದ್ದು. ಅದಾದ ಮೇಲೆ ಮಾಲ್ಡೀವ್ಸ್​ಗೆ ಇಬ್ಬರು ಒಟ್ಟಿಗೆ ವೆಕೇಶನ್​ಗೆ ಹೋಗಿದ್ದರು ಎನ್ನಲಾಯ್ತು. ಮಾಲ್ಡೀವ್ಸ್​ಗೆ ಇಬ್ಬರು ಒಟ್ಟಿಗೆ ಹೋಗಿ ಬಂದ ಫೋಟೋಗಳು ಇಲ್ಲವಾದರೂ ಒಂದೇ ದಿನ ಇಬ್ಬರು ಮಾಲ್ಡೀವ್ಸ್​ಗೆ ಹೋಗಿದ್ದರು ಎನ್ನುವುದಕ್ಕೆ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ವಿಡಿಯೋಗಳೇ ಸಾಕ್ಷಿ. ಒಟ್ಟಿಗೆ ನ್ಯೂ ಇಯರ್​ ಸೆಲೆಬ್ರೆಟ್ ಮಾಡಿದ್ರು ಅಂತಾನೂ ಸಮಾಚಾರ ಹಬ್ಬಿತ್ತು. ಹೀಗೆ ಬಿಡುವು ಸಿಕ್ಕಾಗೆಲ್ಲ ಇಬ್ಬರು ಮೀಟ್ ಮಾಡ್ತಾರೆ, ಡೇಟ್ ಮಾಡ್ತಾರೆ ಅನ್ನೋದು ಸಿನಿಮಾರಂಗದ ಹಾಟ್ ಟಾಪಿಕ್.

ರಶ್ಮಿಕಾ-ವಿಜಯ್ ದೇವರಕೊಂಡ ನಡುವೆ ಬ್ರೇಕ್ ಅಪ್ ಆಯ್ತಾ?

ಆದ್ರೆ ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮತ್ತು ದೇವರಕೊಂಡ ನಡುವೆ ಎಲ್ಲವೂ ಸರಿಯಲ್ಲ ಎನ್ನಲಾಗ್ತಿತ್ತು. ಇಬ್ಬರು ಬ್ರೇಕ್ ಅಪ್ ಮಾಡ್ಕೊಂಡಿದ್ದಾರೆ ಅನ್ನೋ ಸರ್ಪ್ರೈಸ್​ ಅಂಡ್ ಶಾಕಿಂಗ್ ಸುದ್ದಿನೂ ಚಾಲ್ತಿಗೆ ಬಂತು. ಸಿನಿಮಾ, ಶೂಟಿಂಗ್ ಅಂತ ಹೈದರಾಬಾದ್​, ಮುಂಬೈಗೆ ಸಾಕಷ್ಟು ಓಡಾಡುತ್ತಿದ್ದರು ಇಬ್ಬರು ಎಲ್ಲೂ ಬೇಟಿಯಾಗಿಲ್ಲ, ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದನ್ನೆಲ್ಲ ಗಮನಿಸಿದ ನೆಟ್ಟಿಗರು ಬಹುಶಃ ರಶ್ಮಿಕಾ ಮತ್ತು ದೇವರಕೊಂಡ ನಡುವೆ ಬ್ರೇಕ್ ಅಪ್ ಆಗಿದೆ ಅಂತಾನೇ ಬಿಂಬಿಸಿದ್ದರು.

ಹೊಸ ಬಾಯ್​ಫ್ರೆಂಡ್​ ವಿಷ್ಯದಲ್ಲೂ ಸುದ್ದಿಯಾಗಿದ್ದ ರಶ್ಮಿಕಾ!

ಈ ನಡುವೆ ಮುಂಬೈನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ ನಟಿಗೆ ಹೊಸ ಬಾಯ್​ಫ್ರೆಂಡ್ ಇದ್ದಾರೆ ಎನ್ನುವ ಸುದ್ದಿಯೂ ಕುತೂಹಲ ಮೂಡಿಸಿತ್ತು. ಇದೇ ವೇಳೆ ತೆಲುಗು ನಟ ಬೆಲ್ಲಮಕೊಂಡ ಶ್ರೀನಿವಾಸ್ ಜೊತೆ ನಟಿ ರಶ್ಮಿಕಾ ಒಂದೆರಡು ಸಲ ಏರ್​ಪೋರ್ಟ್​ನಲ್ಲಿ ಬೇರೆ ಕಾಣಿಸಿಕೊಂಡಿದ್ದರು. ರಶ್ಮಿಕಾ ಹೊಸ ಬಾಯ್​ಫ್ರೆಂಡ್ ಯಾರು ಅನ್ನೋ ವಿಷ್ಯದಲ್ಲಿ ಬಕ ಪಕ್ಷಿಯಂತೆ ಕಾಯ್ತಿದ್ದ ನೆಟ್ಟಿಗರಿಗೆ ಇಷ್ಟು ಸಾಕಾಗಿತ್ತು. ಶ್ರೀವಲ್ಲಿಯ ಹೊಸ ಬಾಯ್​ಫ್ರೆಂಡ್​ ಬೆಲ್ಲಮಕೊಂಡ ಶ್ರೀನಿವಾಸ್ ಅಂತ ಡಂಗುರ ಸಾರಿಯೇ ಬಿಟ್ಟರು. ಆದ್ರೆ ಈ ಪಿಚ್ಚರ್ ತುಂಬಾ ದಿನ ಪ್ರದರ್ಶನ ಕಾಣಲಿಲ್ಲ. ಖುದ್ದು ಬೆಲ್ಲಮಕೊಂಡ ಅವರೇ ಈ ಸಿನಿಮಾಗೆ ಬ್ರೇಕ್ ಹಾಕಿ, ವಿ ಆರ್​ ಜಸ್ಟ್​ ಫ್ರೆಂಡ್ಸ್​ ಅಂತ ದಿ ಎಂಡ್​ ಬೋರ್ಡ್ ಹಾಕಿಬಿಟ್ರು. ಒಂದ್ಕಡೆ ದೇವರಕೊಂಡ ಜೊತೆಗಿನ ಬ್ರೇಕ್ ಅಪ್, ಮತ್ತೊಂದ್ಕಡೆ ಹೊಸ ಬಾಯ್​ಪ್ರೆಂಡ್​ ಅಂತ ಕನ್​ಫ್ಯೂಶನಲ್ಲಿದ್ದ ಮಂದಿಗೆ ಈಗ ವೈರಲ್ ವಿಡಿಯೋವೊಂದು ಟ್ವಿಸ್ಟ್​ ಕೊಟ್ಟಿದೆ.

ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ಗೆಟ್​ ಟು ಗೆದರ್!
ಸೆನ್ಸೇಷನ್ ಕ್ರಿಯೆಟ್ ಮಾಡ್ತಿದೆ ಹೊಚ್ಚ ಹೊಸ ವಿಡಿಯೋ!

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದ ಹೊಸ ಸೆನ್ಸೇಷನ್ ಆಗಿದೆ. ವೈರಲ್​ ಆದ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಷ್ಟೇ ಅಲ್ಲ ದೇವರಕೊಂಡ ಸಹೋದರ ಆನಂದ್ ಹಾಗೂ ಇನ್ನೊಂದಿಷ್ಟು ಫ್ರೆಂಡ್ಸ್​ ಕೂಡ ಜೊತೆಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದೀಗ ಆಲ್​ ಈಸ್​ ವೆಲ್​, ಇಬ್ಬರು ಚೆನ್ನಾಗಿದ್ದಾರೆ, ಬ್ರೇಕ್ ಅಪ್ ಆಗಿಲ್ಲ ಅಂತಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಯಾವಾಗಿಂದು, ಯಾವ ಸಂದರ್ಭದ್ದು ಅಂತಾ ಗೊತ್ತಾಗ್ತಿಲ್ಲ. ಆದ್ರೆ, ಇವರಿಬ್ಬರನ್ನ ಒಟ್ಟಿಗೆ ನೋಡಿದ್ದೇ ಹಾಲು ಕುಡಿದಷ್ಟು ಸಂತೋಷ ಆಯ್ತು ಅನ್ನೋ ಲೆವೆಲ್​ಗೆ ಅವ್ರ ಫ್ಯಾನ್ಸ್​ ಸಂಭ್ರಮಿಸ್ತಿದ್ದಾರೆ.

View this post on Instagram

A post shared by myloves 🧸’ (@viroshxoxo)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

VIDEO: ಸೆನ್ಸೇಷನ್​​ ಕ್ರಿಯೇಟ್​ ಮಾಡಿದ ನ್ಯಾಷನಲ್​​ ಕ್ರಶ್​​ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ವಿಡಿಯೋ!

https://newsfirstlive.com/wp-content/uploads/2023/06/rashmika-6.jpg

Load More