newsfirstkannada.com

VIDEO: ವಿಜಯ್​ ದೇವರಕೊಂಡಗೆ ಲೈವ್​ನಲ್ಲೇ ಕರೆ ಮಾಡಿದ ನ್ಯಾಷನಲ್​ ಕ್ರಶ್​.. ನಾಚಿ ನೀರಾದ ರಶ್ಮಿಕಾ ಮಂದಣ್ಣ

Share :

18-11-2023

  'ಅನ್‌ಸ್ಟಾಪಬಲ್ ವಿತ್​ ಎನ್​​ಬಿಕೆ ಸೀಸನ್ 3' ಶೋನಲ್ಲಿ ರಶ್ಮಿಕಾ ಮಂದಣ್ಣ

  ಲೈವ್​​ ಶೋನಲ್ಲೇ ವಿಜಯ್‌ ದೇವರಕೊಂಡ ಜೊತೆ ಫೋನ್​ನಲ್ಲೇ ಮಾತುಕತೆ

  ಮಾತಿನ ಮೂಲಕವೇ ನ್ಯಾಷನಲ್ ಕ್ರಶ್​ ರಶ್ಮಿಕಾ ಮಂದಣ್ಣ ಕಾಲೆಳೆದ ಬಾಲಯ್ಯ!

ನಂದಮೂರಿ ಬಾಲಕೃಷ್ಣ ಅವರ ‘ಅನ್‌ಸ್ಟಾಫೇಬಲ್ ವಿತ್​ ಎನ್​​ಬಿಕೆ ಸೀಸನ್ 3’ ಶೋನಲ್ಲಿ ಬಾಲಿವುಡ್​ ನಟ ರಣಬೀರ್ ಕಪೂರ್, ನಟಿ ರಶ್ಮಿಕಾ ಮಂದಣ್ಣ ಮತ್ತು ಸಂದೀಪ್ ರೆಡ್ಡಿ ವಂಗಾ ಅತಿಥಿಯಾಗಿ ಭಾಗಿಯಾಗಿದ್ದಾರೆ. ʻಅನಿಮಲ್ʼ ಸಿನಿಮಾ ಪ್ರಚಾರದ ನಿಮಿತ್ತ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದ ನಟಿ ರಶ್ಮಿಕಾ ಮಂದಣ್ಣರನ್ನು ಬಾಲಯ್ಯ ಅವರು ಮಾತಿನ ಮೂಲಕವೇ ಕಾಲೆಳೆದಿದ್ದಾರೆ.

ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಟಾಲಿವುಡ್‌, ಕಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ. ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಇದರ ನಡು ನಡುವೆ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ‘ಅನ್‌ಸ್ಟಾಪಬಲ್ ವಿತ್​ ಎನ್​​ಬಿಕೆ ಸೀಸನ್ 3’ ಶೋನ ಮೊದಲ ಸಂಚಿಕೆಯ ವಿಡಿಯೋ ಸಖತ್​ ವೈರಲ್​ ಆಗುತ್ತಿವೆ.

ವೈರಲ್​ ಆದ ವಿಡಿಯೋದಲ್ಲಿ ಏನಿದೆ..?

ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಶೇರ್​ ಮಾಡಿಕೊಂಡ ಪ್ರೋಮೊದಲ್ಲಿ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಶೋನಲ್ಲಿ ವಿಜಯ್‌ ದೇವರಕೊಂಡ ಬಗ್ಗೆ ಸಖತ್‌ ಆಗಿ ಕಾಲೆಳೆದಿದ್ದಾರೆ ಬಾಲಯ್ಯ. ಮಾತ್ರವಲ್ಲ ವಿಜಯ್‌ ದೇವರಕೊಂಡಗೆ ರಶ್ಮಿಕಾರಿಂದ ಕಾಲ್‌ ಕೂಡ ಮಾಡಿಸಿದ್ದಾರೆ. ವಿಜಯ್‌ ದೇವರಕೊಂಡ ಕೂಡ ಕಾಲ್‌ ರಿಸೀವ್‌ ಮಾಡಿ ವಾಟ್ಸ್‌ ಅಪ್‌ ಕ್ರಶ್‌? ಎಂದು ಕೇಳಿದ್ದಾರೆ. ವಿಜಯ್‌ ದೇವರಕೊಂಡ ಧ್ವನಿ ಕೇಳುತ್ತಿದ್ದಂತೆ ನಟಿ ನಾಚಿ ನೀರಾಗಿದ್ದಾರೆ. ಇನ್ನು ಸ್ಕ್ರೀನ್‌ನಲ್ಲಿ ವಿಜಯ್‌ ದೇವರಕೊಂಡ ಹಾಗೂ ರಣಬೀರ್‌ ಫೋಟೊ ಬಂದಾಗ, ರಣಬೀರ್‌ ಅವರು ಬಾಲಯ್ಯ ಅವರಿಗೆ ರಶ್ಮಿಕಾ ಅವರನ್ನು ಕೇಳಿ, ಅವರಿಬ್ಬರಲ್ಲಿ ಯಾರು ಬೆಟರ್‌ ಹೀರೊ ಅಂತಾ ಎಂದು ಹೇಳುತ್ತಾ ಮತ್ತೆ ನಟಿಯ ಕಾಲೆಳೆದಿದ್ದಾರೆ. ಇದನ್ನು ನೋಡುತ್ತಿದ್ದ ಪ್ರೇಕ್ಷಕರು ಕೂಡ ಖುಷಿಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಿಜಯ್​ ದೇವರಕೊಂಡಗೆ ಲೈವ್​ನಲ್ಲೇ ಕರೆ ಮಾಡಿದ ನ್ಯಾಷನಲ್​ ಕ್ರಶ್​.. ನಾಚಿ ನೀರಾದ ರಶ್ಮಿಕಾ ಮಂದಣ್ಣ

https://newsfirstlive.com/wp-content/uploads/2023/11/rashmika-3.jpg

Load More