newsfirstkannada.com

80 ಲಕ್ಷ ರೂಪಾಯಿ ಕಿರಿಕ್‌ಗೆ ಹೊಸ ಟ್ವಿಸ್ಟ್; ಮ್ಯಾನೇಜರ್ ಮೋಸದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು..?

Share :

23-06-2023

    ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ 80 ಲಕ್ಷ ರೂಪಾಯಿ ಮೋಸ?

    ತನ್ನ ಮಾನೇಜರ್​ನಿಂದ ವಂಚನೆ ಆಗಿದೆ ಎಂಬ ವದಂತಿಗಳಿಗೆ ತೆರೆ ಎಳೆದ ನಟಿ ರಶ್ಮಿಕಾ

    ಮಹಾ ಮೋಸಕ್ಕೆ ಒಳಗಾದ ರಶ್ಮಿಕಾ ಮಂದಣ್ಣ ಈ ಕುರಿತು ಕೊಟ್ಟ ಪ್ರತಿಕ್ರಿಯೆ ಏನು..?

ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ಒಬ್ಬರು ಮೋಸ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು. ನಟಿ ರಶ್ಮಿಕಾ ಮಂದಣ್ಣ ಬಳಿ ಕೆಲಸ ಮಾಡಿಕೊಂಡಿದ್ದ ಮ್ಯಾನೇಜರ್ ಮೋಸದ ಲೆಕ್ಕಾಚಾರ ತೋರಿಸಿ ಸುಮಾರು 80 ಲಕ್ಷ ರೂಪಾಯಿ ವಂಚಿಸಿದ್ದಾರೆ. ಹೀಗೆ ಈ ವಂಚನೆ ವಿಷಯ ನಟಿ ರಶ್ಮಿಕಾ ಮಂದಣ್ಣ ಗಮನಕ್ಕೆ ಬಂದ ಕೂಡಲೇ ಮ್ಯಾನೇಜರ್​ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ವಂಚನೆ ಮಾಡಿದ್ದಾರೆ ಎನ್ನುವ ಸುದ್ದಿ ಸುಳ್ಳು. ಮ್ಯಾನೇಜರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಜಗಳವೂ ಆಗಿಲ್ಲ. ಅವರು ಪ್ರತ್ಯೇಕವಾಗಿ ಕೆಲಸ ಮಾಡುವ ನಿರ್ಧಾರ ತೆಗೆದುಕೊಂಡರು. ಅದನ್ನ ನಾನು ಕೂಡ ಸ್ವಾಗತಿಸುತ್ತೇನೆ. ಪರಸ್ಪರ ಒಪ್ಪಂದದೊಂದಿಗೆ ಈ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

80 ಲಕ್ಷ ರೂಪಾಯಿ ಕಿರಿಕ್‌ಗೆ ಹೊಸ ಟ್ವಿಸ್ಟ್; ಮ್ಯಾನೇಜರ್ ಮೋಸದ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು..?

https://newsfirstlive.com/wp-content/uploads/2023/06/rashmika-14.jpg

Load More