newsfirstkannada.com

ನಂಬಿದವರಿಂದಲೇ ಮಹಾ ಮೋಸಕ್ಕೆ ಒಳಗಾದ ರಶ್ಮಿಕಾ ಮಂದಣ್ಣ; ಯಾರಪ್ಪಾ ಅದು ಹೊಸ ಕಿರಿಕ್ ಪಾರ್ಟಿ?

Share :

19-06-2023

    ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ 80 ಲಕ್ಷ ರೂಪಾಯಿ ಮೋಸ

    ಬಾಲಿವುಡ್‌, ಟಾಲಿವುಡ್‌ನಲ್ಲಿ ಸಖತ್ ಬ್ಯುಸಿ ಆಗಿರುವ ನ್ಯಾಷನಲ್​​ ಕ್ರಶ್​ಗೆ ಬಿಗ್ ಶಾಕ್

    ಲಕ್ಷಾಂತರ ರೂಪಾಯಿ ವಂಚನೆಗೆ ಒಳಗಾದ್ರೂ ರಶ್ಮಿಕಾ ಮೌನಕ್ಕೆ ಜಾರಿರೋದು ಯಾಕೆ?

ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ಒಬ್ಬರು ಮೋಸ ಮಾಡಿದ್ದಾರೆ ಎಂದು ಹೇಳಲಾಗಿದೆ. ನಟಿ ರಶ್ಮಿಕಾ ಮಂದಣ್ಣ ಬಳಿ ಕೆಲಸ ಮಾಡಿಕೊಂಡಿದ್ದ ಮ್ಯಾನೇಜರ್ ಮೋಸದ ಲೆಕ್ಕಾಚಾರ ತೋರಿಸಿ ಸುಮಾರು 80 ಲಕ್ಷ ರೂಪಾಯಿ ವಂಚಿಸಿದ್ದಾರಂತೆ. ಈ ವಂಚನೆ ರಶ್ಮಿಕಾ ಗಮನಕ್ಕೆ ಬಂದ ಕೂಡಲೇ ಆ ಮ್ಯಾನೇಜರ್​ನ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

ಇನ್ನು, ನ್ಯಾಷನಲ್​​ ಕ್ರಶ್​ ರಶ್ಮಿಕಾ ಮಂದಣ್ಣ ಅವರ ಎಲ್ಲ ವ್ಯವಹಾರಗಳನ್ನು ಅದೇ ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರಂತೆ. ನಟಿ ರಶ್ಮಿಕಾ ಅವರ ಪ್ರವಾಸ, ಶೂಟಿಂಗ್ ಡೇಟ್, ಸಂಭಾವನೆ ಹೀಗೆ ಹತ್ತು ಹಲವಾರು ಕೆಲಸಗಳು ಈ ಮ್ಯಾನೇಜರ್ ಮುಖಾಂತರವೇ ಆಗುತ್ತಿತ್ತು. ಮ್ಯಾನೇಜರ್ ಬರೋಬ್ಬರಿ 80 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನು ಈ ಸಂಬಂಧ ನಟಿ ರಶ್ಮಿಕಾ ಮಂದಣ್ಣ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಮಿಷನ್ ಮಜ್ನು ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಬಾಲಿವುಡ್​ ಬಿಗ್​ ಬಿ ಅಮಿತಾಭ್ ಬಚ್ಚನ್ ಅವರೊಂದಿಗೆ ಗುಡ್​ಬೈ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ರಣಬೀರ್ ಕಪೂರ್ ನಟನೆಯ ‘ಅನಿಮಲ್’ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನಂಬಿದವರಿಂದಲೇ ಮಹಾ ಮೋಸಕ್ಕೆ ಒಳಗಾದ ರಶ್ಮಿಕಾ ಮಂದಣ್ಣ; ಯಾರಪ್ಪಾ ಅದು ಹೊಸ ಕಿರಿಕ್ ಪಾರ್ಟಿ?

https://newsfirstlive.com/wp-content/uploads/2023/06/rashmika-11.jpg

Load More