newsfirstkannada.com

ನಾನು ಮಾತ್ರ ಹೀಗೇನಾ! ನೀವು ನನ್ನಂತೇನಾ?- ಫ್ಯಾನ್ಸ್​​ಗೆ ಅಚ್ಚರಿ ಪ್ರಶ್ನೆ ಕೇಳಿದ ರಶ್ಮಿಕಾ ಮಂದಣ್ಣ

Share :

28-06-2023

  ಪ್ಯಾನ್​ ಇಂಡಿಯಾ ಹೀರೋಯಿನ್​​​ ರಶ್ಮಿಕಾ ಮಂದಣ್ಣಗೆ ಭಾರೀ ಬೇಡಿಕೆ

  ಸದಾ ಒಂದಲ್ಲ, ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿರೋ ನಟಿ ರಶ್ಮಿಕಾ

  ನಾನು ಮಾತ್ರ ಹೀಗೇನಾ! ನೀವು ನನ್ನಂತೇನಾ? ಎಂದ ರಶ್ಮಿಕಾ ಮಂದಣ್ಣ

ಖ್ಯಾತ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ ಭಾರೀ ಡಿಮ್ಯಾಂಡ್​​. ಸ್ಯಾಂಡಲ್​ವುಂಡ್​ನಿಂದ ತನ್ನ ಸಿನಿ ಜರ್ನಿ ಶುರು ಮಾಡಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​​, ಕಾಲಿವುಡ್​​, ಟಾಲಿವುಡ್​​ ಎನ್ನದೇ ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಅತೀ ಹೆಚ್ಚು ಫ್ಯಾನ್ಸ್​ ಹೊಂದಿರೋ ಇವರು ಒಂದಲ್ಲ ಮತ್ತೊಂದು ವಿಚಾರಕ್ಕೆ ಸದಾ ಸುದ್ದಿಯಾಗುತ್ತಲೇ ಇರುತ್ತಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮ್ಯಾನೇಜರ್ ತನ್ನ ಗಮನಕ್ಕೂ ತರದೆ 80 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದರು. ಹೀಗಾಗಿ ತಮ್ಮ ಮ್ಯಾನೇಜರ್​​ ಅವರನ್ನು ರಶ್ಮಿಕಾ ಕೆಲಸದಿಂದಲೇ ಕಿತ್ತು ಹಾಕಿದ್ದರು ಎಂದು ವರದಿಯಾಗಿತ್ತು. ಈ ಕೂಡಲೇ ಎಚ್ಚೆತ್ತ ರಶ್ಮಿಕಾ ಮಂದಣ್ಣ, ನಾವು ಮಾತಾಡಿ ದೂರ ಆಗಿದ್ದೆವು ಎಂದು ಸ್ಪಷ್ಟನೆ ನೀಡಿದ್ದರು.

ಇಂದು ತನ್ನ ಮುಂದಿನ ಪ್ಯಾನ್-ಇಂಡಿಯಾ ಚಿತ್ರ ‘ಪುಷ್ಪ: ದಿ ರೂಲ್’ ಚಿತ್ರೀಕರಣದ ತುಣುಕು ಒಂದು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದ ರಶ್ಮಿಕಾ ಮಂದಣ್ಣ ಮತ್ತೊಂದು ಪೋಸ್ಟ್​ ಹಾಕಿ ಸುದ್ದಿಯಾಗಿದ್ದಾರೆ.

ನಾನು ಪಾಸ್ಟಿಂಗ್​​ ಮಾಡಿದ ಬಳಿಕ ಊಟ ಮಾಡುವ ಮೊದಲು ನನಗೊಂದು ಅಭ್ಯಾಸ ಇದೆ. ಮೈನ್​​ ಮೀಲ್​​ ತಿನ್ನುವ ಮೊದಲು ನಾನು ಡೆಸರ್ಟ್ಸ್​​​ ಆರ್ಡರ್​ ಮಾಡುತ್ತೇನೆ. ಇದು ನನ್ನ ಸ್ನೇಹಿತರಿಗೆ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ನಾನು ಮಾತ್ರ ಹೀಗೇನಾ? ನನ್ನಂತೆ ನಿಮ್ಮಲ್ಲಿ ಯಾರಾದರೂ ಇದ್ದೀರಾ ಎಂದು ರಶ್ಮಿಕಾ ಪೋಸ್ಟ್​ ಹಾಕಿದ್ದಾರೆ. ಇದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಮಾತ್ರ ಹೀಗೇನಾ! ನೀವು ನನ್ನಂತೇನಾ?- ಫ್ಯಾನ್ಸ್​​ಗೆ ಅಚ್ಚರಿ ಪ್ರಶ್ನೆ ಕೇಳಿದ ರಶ್ಮಿಕಾ ಮಂದಣ್ಣ

https://newsfirstlive.com/wp-content/uploads/2023/06/Rashmika-Mandanna.jpg

Load More