ಅಲ್ಲು ಅರ್ಜುನ್ಗೆ 69ನೇ ನ್ಯಾಷನಲ್ ಫಿಲ್ಮ್ ಅವಾರ್ಡ್
ಚಿತ್ರದ ಮ್ಯೂಜಿಕ್ ಡೈರೆಕ್ಟರ್ಗೂ ಸಿಕ್ಕಿದೆ ರಾಷ್ಟ್ರೀಯ ಪ್ರಶಸ್ತಿ
ಟ್ವೀಟ್ ಮಾಡಿ ‘ಪಾರ್ಟಿ ಟೈಂ’ ಎಂದ ಪುಷ್ಪಾ ನಟಿ ರಶ್ಮಿಕಾ
‘ಪುಷ್ಪಾ’ ಚಿತ್ರದ ಅಭಿನಯಕ್ಕಾಗಿ ಅಲ್ಲು ಅರ್ಜುನ್ಗೆ 69ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ನ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ತೆಲುಗು ಸ್ಟಾರ್ ಒಬ್ಬರು ನ್ಯಾಷನಲ್ ಫಿಲ್ಮ್ ಅವಾರ್ಡ್ನಲ್ಲಿ ಬೆಸ್ಟ್ ಆ್ಯಕ್ಟರ್ ವಿಭಾಗದಲ್ಲಿ ಪ್ರಶಸ್ತಿ ಪಡೆದ ಏಕೈಕ ನಟ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
‘ಪುಷ್ಪ’ ಚಿತ್ರಕ್ಕೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ, ಸಿನಿಮಾದಲ್ಲಿ ನಟಿಸಿದ್ದ ಕಲಾವಿದರು ಫುಲ್ ಖುಷ್ ಆಗಿದ್ದಾರೆ. ಅದರಲ್ಲೂ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಸಖತ್ ಎಕ್ಸೈಟ್ ಆಗಿದ್ದಾರೆ. ಶುಭ ಸುದ್ದಿ ತಿಳಿಯುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ವಿಡಿಯೋ ಒಂದನ್ನು ರೀಟ್ವೀಟ್ ಮಾಡಿರುವ ರಶ್ಮಿಕಾ, ಅಲ್ಲು ಅರ್ಜುನ್ ಬೆಸ್ಟ್ ಆ್ಯಕ್ಟರ್ ಎಂದು ಘೋಷಣೆ ಆಗುತ್ತಿದ್ದಂತೆಯೇ ಇಡೀ ಚಿತ್ರ ತಂಡ ಖುಷಿಯಲ್ಲಿ ಮುಳುಗಿತ್ತು. ಮಾತ್ರವಲ್ಲ, ಚಿತ್ರದ ಡೈರೆಕ್ಟರ್ ಸುಕುಮಾರ್ ಮತ್ತು ಅಲ್ಲು ಅರ್ಜುನ್ ತಬ್ಬಿಕೊಂಡು ಸಂತೋಷ ಪಡುತ್ತಿದ್ದ ವಿಡಿಯೋ ರೀ-ಟ್ವೀಟ್ ಮಾಡಿ, ‘Pushpa Rajjjjjjj.. asal #ThaggedheLe.. ಅಲ್ಲು ಅರ್ಜುನ್ಗೆ ಶುಭಾಶಯಗಳು. ಇದು ಪಾರ್ಟಿ ಟೈಂ ಎಂದು ಅಭಿನಂದಿಸಿದ್ದಾರೆ. ಚಿತ್ರದಲ್ಲಿ ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ.
Pushpa Rajjjjjjj.. 🔥 asal #ThaggedheLe.. 💃🏻💃🏻🥳 congratulationsssssss @alluarjun .. party timeeeeee.. 💃🏻😁 https://t.co/2nODMSYuYb
— Rashmika Mandanna (@iamRashmika) August 24, 2023
ಅಲ್ಲು ಅರ್ಜುನ್ಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಸಿಕ್ಕರೆ, ಪುಷ್ಪ ಚಿತ್ರಕ್ಕೆ ಮತ್ತೊಂದು ಅವಾರ್ಡ್ ಕೂಡ ದಕ್ಕಿದೆ. ಚಿತ್ರದ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀಪ್ರಸಾದ್ಗೆ ಬೆಸ್ಟ್ ಮ್ಯೂಜಿಕ್ (ಸಾಂಗ್) ಡೈರೆಕ್ಟರ್ ಪ್ರಶಸ್ತಿ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ