ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ 42ನೇ ಹುಟ್ಟುಹಬ್ಬದ ಸಂಭ್ರಮ
ಪುಷ್ಪ 2 ಟೀಸರ್ನಲ್ಲಿ ಮಹಾಕಾಳಿ ಅವತಾರದಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ರಶ್ಮಿಕಾ ಮಾಡಿದ ಪೋಸ್ಟ್
ಟಾಲಿವುಡ್‌ನ ಐಕಾನ್ ಸ್ಟಾರ್, ಜನಪ್ರಿಯ ನಟ ಅಲ್ಲು ಅರ್ಜುನ್ ಅವರು 42ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿದ್ದ ಅಲ್ಲು ಅರ್ಜುನ್ ಹಾಗೂ ಅಭಿಮಾನಿಗಳಿಗೆ ಪುಷ್ಪ ಚಿತ್ರತಂಡ ಪುಷ್ಪ 2 ದಿ ರೂಲ್ ಟೀಸರ್ ಬಿಡುಗಡೆ ಮಾಡಿದೆ. ಇದರ ಜೊತೆಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟ ಅಲ್ಲು ಅರ್ಜುನ್ ಅವರ ಹೊಸ ಫೋಟೋವನ್ನು ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: ಅಬ್ಬಾ..! ಮಹಾಕಾಳಿ ಅವತಾರದಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್.. ಪುಷ್ಪ-2 ಸಿನಿಮಾದ ಟೀಸರ್ ಔಟ್
ನಟಿ ರಶ್ಮಿಕಾ ಮಂದಣ್ಣ ಅವರು ನಟ ಅಲ್ಲು ಅರ್ಜುನ್ ಅವರ ಹುಟ್ಟು ಹಬ್ಬಕ್ಕೆ ಅಪರೂಪದ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಇನ್ನು ಅಲ್ಲು ಅರ್ಜುನ್ ಅವರು ಆ ಫೋಟೋದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಟನ ಪಕ್ಕದಲ್ಲಿ ಸಿಂಹದ ಮೂರ್ತಿ ಕೂಡ ಇದ್ದು, ಆ ಫೋಟೋಗೆ ಇನ್ನೂ ಅದ್ಭುತ ಕಳೆ ಬಂದಿದೆ. ಈ ಫೋಟೋ ‘ಪುಷ್ಪ 2’ ಸೆಟ್‌ನಲ್ಲಿ ಕುಳಿತುಕೊಂಡ ಅಪರೂಪದ ಚಿತ್ರವಾಗಿದೆ.
ಸದ್ಯ, ನಟ ಅಲ್ಲು ಅರ್ಜುನ್ ಅವರ ಹುಟ್ಟು ಹಬ್ಬದ ನಿಮಿತ್ತ ಬಹುನೀರಿಕ್ಷಿತ ಪುಷ್ಪ 2 ಸಿನಿಮಾ ಟೀಸರ್ ಬೆಳಗ್ಗೆ 11.07ಕ್ಕೆ ರಿಲೀಸ್ ಆಗಿದೆ. ರಿಲೀಸ್ ಆದ ಟೀಸರ್ನಲ್ಲಿ ನಟ ಅಲ್ಲು ಅರ್ಜುನ್ ಸೀರೆಯುಟ್ಟು ಮಹಾಕಾಳಿ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇದೀಗ ಟೀಸರ್ ನೋಡಿದ ಅಭಿಮಾನಿಗಳಿಗೆ ಪುಷ್ಪ 2 ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ದೊಡ್ಡ ಪರದೆ ಮೇಲೆ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪುಷ್ಪ 2 ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ