newsfirstkannada.com

ನನಗೆ ಮದುವೆ ಆಗಿದೆ ಎಂದು ರಶ್ಮಿಕಾ ಶಾಕಿಂಗ್​​ ಹೇಳಿಕೆ; ಇಲ್ಲಿದೆ ಟಾಪ್​​ 5 ಸಿನಿಮಾ ಸುದ್ದಿ!

Share :

04-08-2023

  ಇದೇ ವರ್ಷದಲ್ಲಿ ಬರುತ್ತೆ ಕಿಚ್ಚ ಸುದೀಪ್ 46ನೇ ಸಿನಿಮಾ!

  'ಅಯೋಗ್ಯ' ಜೋಡಿಯ ಹೊಚ್ಚ ಹೊಸ ಸಾಂಗ್ ರಿಲೀಸ್​

  ಪ್ಯಾನ್ ಇಂಡಿಯಾ 'ವುಲ್ಪ್' ಚಿತ್ರದ ಟೀಸರ್ ಬಿಡುಗಡೆ

ಇದೇ ವರ್ಷದಲ್ಲಿ ಬರುತ್ತೆ ಸುದೀಪ್ ಸಿನಿಮಾ!

‘ವಿಕ್ರಾಂತ್ ರೋಣ’ ಬಳಿಕ ತಮಿಳು ನಿರ್ದೇಶಕನ ಜೊತೆ ಸುದೀಪ್ ತಮ್ಮ 46ನೇ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನ ಇದೇ ವರ್ಷ ಬಿಡುಗಡೆ ಮಾಡಬೇಕು ಅಂತ ಪಟ್ಟು ಹಿಡಿದಿದ್ದಾರಂತೆ. ಕಲೈಪುಲಿ ಎಸ್ ತನು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಚಿತ್ರೀಕರಣ ಆರಂಭವಾಗಿದೆ. 50 ದಿನಗಳ ಕಾಲ್​ಶೀಟ್​ ಕೊಟ್ಟಿರುವ ಕಿಚ್ಚ ಸುದೀಪ್ ಒಂದೇ ಹಂತದಲ್ಲಿ ಸಿನಿಮಾ ಮುಗಿಸಬೇಕು ಅಂತ ಒಪ್ಪಂದ ಮಾಡ್ಕೊಂಡು ಸಿನಿಮಾ ಮಾಡ್ತಿದ್ದಾರಂತೆ.

ತಂದೆ, ಸಹೋದರ ಜೊತೆ ದೇವರ ದರ್ಶನ ಪಡೆದ ಡಾಲಿ

ಶೂಟಿಂಗ್ ಬಿಡುವಿನಲ್ಲಿ ಹುಟ್ಟೂರಿಗೆ ಭೇಟಿ ನೀಡಿದ ಡಾಲಿ ಧನಂಜಯ ಅರಸಿಕೆರೆಯ ಯಾದಾಪುರದ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ತಂದೆ ಅಡವಿಸ್ವಾಮಿ ಹಾಗೂ ಸಹೋದರರ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಬಾಲ್ಯದ ದಿನಗಳ ನೆನಪು ಮಾಡಿಕೊಂಡಿದ್ದಾರೆ. ಸದ್ಯ ಪರಮೇಶ್ವರ್ ಗುಂಡ್ಕಲ್ ಚಿತ್ರದಲ್ಲಿ ಡಾಲಿ ನಟಿಸ್ತಿದ್ದು, ಮೈಸೂರಿನಲ್ಲಿ ಶೂಟಿಂಗ್ ಮಾಡ್ತಿದ್ದಾರೆ.

ವುಲ್ಫ್​ ಟೀಸರ್​.. ಸಖತ್ ಥ್ರಿಲ್ಲರ್

ಡಾನ್ಸಿಂಗ್ ಸ್ಟಾರ್ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ‘ವುಲ್ಪ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಥ್ರಿಲ್ಲಿಂಗ್ ಅನುಭವ ಕೊಡುತ್ತಿದೆ. ವಿನು ವೆಂಕಟೇಶ್ ಈ ಚಿತ್ರ ನಿರ್ದೇಶನ ಮಾಡಿದ್ದು, ಸಂದೇಶ್ ನಾಗರಾಜ್ ಸಂಸ್ಥೆ ನಿರ್ಮಾಣ ಮಾಡಿದೆ. ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿರುವ ಈ ಚಿತ್ರದಲ್ಲಿ ಅನುಸೂಯ ಭಾರದ್ವಾಜ್, ಲಕ್ಷ್ಮಿ ರೈ, ವಸಿಷ್ಠ ಸಿಂಹ, ಅಂಜು ಕುರಿಯನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನನ್ನ ಮನಸ್ಸಿನಲ್ಲಿರೋದು ಅವನೊಬ್ಬನೇ – ರಶ್ಮಿಕಾ

‘ನಾನು ಈಗಾಗಲೇ ಮದುವೆ ಆಗಿದ್ದೇನೆ’ ಅಂತ ಹೇಳಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಟೈಗರ್ ಶ್ರಾಫ್ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಶ್ಮಿಕಾಗೆ ನಿಮಗೆ ಮದುವೆ ಆಗಿರೋದು ನಿಜಾನಾ? ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರ ಕೊಟ್ಟ ರಶ್ಮಿಕಾ, ‘ಹೌದು, ನರುಟೊಗೆ ನನ್ನ ಹೃದಯ ಮೀಸಲು. ಅದು ನನ್ನ ನೆಚ್ಚಿನ ಪಾತ್ರ. ಆ ಪಾತ್ರವನ್ನು ನಾನು ಸಂಪೂರ್ಣವಾಗಿ ಮದುವೆಯಾಗಿದ್ದೇನೆ” ಎಂದಿದ್ದಾರೆ. ಹಾಗಾಗಿ ಈ ನರುಟೊ ಯಾರು ಅನ್ನೋದು ಈಗ ವೈರಲ್ ಆಗಿದೆ. ಅಂದ್ಹಾಗೆ, ನರುಟೊ ಕಾರ್ಟೂನ್ ಸರಣಿಯಲ್ಲಿ ಬರುವ ಒಂದು ಪಾತ್ರ. ಈ ಪಾತ್ರವನ್ನ ಮದುವೆ ಆಗಿದ್ದೇನೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

‘ಅಯೋಗ್ಯ’ ಜೋಡಿಯ ಹೊಸ ಸಾಂಗ್

‘ಅಯೋಗ್ಯ’ ಚಿತ್ರದಲ್ಲಿ ಮ್ಯಾಜಿಕ್ ಮಾಡಿದ್ದ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಈಗ ಮ್ಯಾಟ್ನಿ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಮನೋಹರ್ ಕಾಂಪಲ್ಲಿ ಈ ಚಿತ್ರ ನಿರ್ದೇಶನ ಮಾಡಿದ್ದು, ಈಗ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿರುವ ‘ಸಂಜೆ ಮೇಲೆ’ ಎನ್ನುವ ಹಾಡು ಸದ್ಯ ಗಮನ ಸೆಳೆಯುತ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನನಗೆ ಮದುವೆ ಆಗಿದೆ ಎಂದು ರಶ್ಮಿಕಾ ಶಾಕಿಂಗ್​​ ಹೇಳಿಕೆ; ಇಲ್ಲಿದೆ ಟಾಪ್​​ 5 ಸಿನಿಮಾ ಸುದ್ದಿ!

https://newsfirstlive.com/wp-content/uploads/2023/06/Rashmika-Mandanna.jpg

Load More