newsfirstkannada.com

ನ್ಯಾಷನಲ್​​ ಕ್ರಶ್ ರಶ್ಮಿಕಾ ಮಂದಣ್ಣ ಡೀಪ್​ ಫೇಕ್​​ ವಿಡಿಯೋ ವೈರಲ್​​; ಇದರ ಅಸಲಿ ಕಥೆಯೇನು?

Share :

07-11-2023

    ಕಿಡಿಗೇಡಿಗಳು ಬಳಸಿಕೊಂಡು ರಶ್ಮಿಕಾಗೆ ಮಾನಹಾನಿ ಮಾಡುವ ಕೃತ್ಯ

    ರಶ್ಮಿಕಾಗೆ ಇರುಸು ಮುರುಸು ಉಂಟು ಮಾಡಿದ ಫೇಕ್ ವಿಡಿಯೋ

    ಝಾರಾ ಪಟೇಲ್ ಅನ್ನೋರ ವಿಡಿಯೋಗೆ ರಶ್ಮಿಕಾ ಮುಖದ ಮಾಸ್ಕ್

ಕಿರಿಕ್ ಹುಡುಗಿ ರಶ್ಮಿಕಾ ಏನ್ ಮಾಡಿದ್ರೂ ಟ್ರೆಂಡ್ ಆಗೋದು ಪಕ್ಕಾ. ಇದನ್ನೇ ಕೆಲ ಕಿಡಿಗೇಡಿಗಳು ಲಾಭವಾಗಿ ಮಾಡ್ಕೊಂಡು ರಶ್ಮಿಕಾ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡಿದ್ದಾರೆ. ಶ್ರೀವಲ್ಲಿ ಫೇಕ್ ವಿಡಿಯೋ ಒಂದನ್ನ ಹರಿಬಿಟ್ಟು ರಶ್ಮಿಕಾಗೆ ಇರುಸು ಮುರುಸು ಉಂಟು ಮಾಡುವಂತೆ ಮಾಡಿದ್ದಾರೆ. ಖುದ್ದು ಬಿಗ್​ ಬಿ ಅಮಿತಾಬ್ ಬಚ್ಚನ್ ಕೂಡ ಕಿಡಿಗೇಡಿಗಳ ಈ ಕೃತ್ಯಕ್ಕೆ ಕೆಂಡಮಂಡಲವಾಗಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಈಗ ಟಾಲಿವುಡ್​ನಿಂದ ಬಾಲಿವುಡ್​​ವರೆಗೂ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ನಟಿ. ಅದೆಷ್ಟು ಅಭಿಮಾನಿಗಳ ಪಾಲಿಗೆ ರಶ್ಮಿಕಾ ನ್ಯಾಷನಲ್ ಕ್ರಶ್. ರಶ್ಮಿಕಾ ಒಂದು ಪೋಸ್ಟ್ ಹಾಕಿದ್ರೂ ಅದು ದೊಡ್ಡ ಮಟ್ಟಿಗೆ ಸದ್ದು ಮಾಡುತ್ತೆ. ಎಲ್ಲ ಕಡೆ ಟ್ರೆಂಡ್​ ಆಗುತ್ತೆ. ಇದನ್ನ ಕೆಲ ಕಿಡಿಗೇಡಿಗಳು ಲಾಭವಾಗಿ ಬಳಸಿಕೊಂಡು ರಶ್ಮಿಕಾಗೆ ಮಾನಹಾನಿ ಉಂಟು ಮಾಡುವ ಕೃತ್ಯ ಎಸಗಿದ್ದಾರೆ.

ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ

ವಿಡಿಯೋ ಬಗ್ಗೆ ಬಿಗ್​ ಬಿ ಅಮಿತಾಬ್ ಬಚ್ಚನ್​ ಕೆಂಡಾಮಂಡಲ

ಲಿಫ್ಟ್​​ ಒಳಗೆ ರಶ್ಮಿಕಾ ಓಡೋಡಿ ಬರುವ ವಿಡಿಯೋ ಸಖತ್​ ಸುದ್ದಿಯಲ್ಲಿದೆ. ಕಪ್ಪು ಬಣ್ಣದ ಔಟ್ ಫಿಟ್​ ಹಾಕಿರುವ ರಶ್ಮಿಕಾಳ ಇದೊಂದು ವಿಡಿಯೋ ಫುಲ್ ವೈರಲ್ ಆಗಿದೆ. ಈ ವಿಡಿಯೋ ನೋಡಿ ಕಿರಿಕ್ ಹುಡುಗಿಯ ಅಭಿಮಾನಿಗಳಂತು ಅಕ್ಷರಶಃ ಶಾಕ್ ಆಗಿದ್ದಾರೆ. ಅರೆ ಇದು ರಶ್ಮಿಕನಾ, ಶ್ರೀವಲ್ಲಿ ಹೀಗೆಲ್ಲ ಬಟ್ಟೆ ಹಾಕ್ತಾರಾ ಅಂತ ಬೇಸರಗೊಂಡಿದ್ದಾರೆ.

ಈ ವಿಡಿಯೋ ನೋಡಿ ಜನ ಮಾತ್ರವಲ್ಲ ಸಿನಿಮಾದವರು ದಂಗಾಗಿದ್ರು. ಅರೆ ಇದೇನಿದು ಅಂತ ಗಾಬರಿಯಾಗಿದ್ರು. ಆದ್ರೆ ಈ ವಿಡಿಯೋ ಅಸಲಿಯಲ್ಲ ಅನ್ನೋ ವಿಚಾರ ತಿಳಿದಾಗ ನಿರಾಳಾಗಿದ್ರು. ವಿಚಾರ ಏನಂದ್ರೆ ಯಾರೋ ಕಿಡಿಗೇಡಿಗಳು ಡೀಪ್ ಫೇಕ್‌ ತಂತ್ರಜ್ಞಾನದ ಮೂಲಕ ಯಾರದ್ದೋ ಮುಖಕ್ಕೆ ರಶ್ಮಿಕಾ ಮುಖ ಹಾಕಿ ರಶ್ಮಿಕಾಗೆ ಇರುಸು ಮುರುಸು ಉಂಟು ಮಾಡೋದಕ್ಕೆ ಈ ವಿಡಿಯೋ ಹರಿ ಬಿಟ್ಟಿದ್ರು. ಸದ್ಯ ಈ ವಿಡಿಯೋ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಅಭಿಷೇಕ್ ಅನ್ನೋರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಶ್ಮಿಕಾರ ಈ ಫೇಕ್ ವಿಡಿಯೋ ಪೋಸ್ಟ್ ಮಾಡಿ ಈ ತರಹದ ವಿಡಿಯೋಗಳಿಗೆ ಕಡಿವಾಣ ಹಾಕೋದು ಅವಶ್ಯಕ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಅಂತ ಬರೆದಿದ್ದಾರೆ. ಅಸಲಿಗೆ ಇದು ಝಾರಾ ಪಟೇಲ್ ಅನ್ನೋರ ವಿಡಿಯೋ ಆ ವಿಡಿಯೋಗೆ ರಶ್ಮಿಕಾ ಮುಖವನ್ನು ಮಾಸ್ಕ್ ಮಾಡಿ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ರಶ್ಮಿಕಾ ಫೇಕ್ ವಿಡಿಯೋ ಬಗ್ಗೆ ಅಮಿತಾಬ್ ಬಚ್ಚನ್​ ಕಿಡಿ

ರಶ್ಮಿಕಾ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದಂತೆ ಈ ಬಗ್ಗೆ ಅಮಿತಾಬ್​ ಬಚ್ಚನ್ ಕೂಡ ಕಿಡಿ ಕಾರಿದ್ದಾರೆ. ವಿಡಿಯೋ ಶೇರ್ ಮಾಡಿ ಇದರ ಬಗ್ಗೆ ಕಠಿಣ ಕಾನೂನೂ ಕ್ರಮ ಅಗತ್ಯವಿದೆ ಕಿಡಿಗೇಡಿಗಳಿಗೆ ಪಾಠ ಕಲಿಸುವಂತೆ ಬರೆದಿದ್ದಾರೆ.

ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಕೂಡ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕೃತ್ಯ ಎಸಗಿದವರಿಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಡಿಜಿಟಲ್ ಜಮಾನದಲ್ಲಿ ಸುಳ್ಳು ಮಾಹಿತಿಗಳನ್ನು ಹಬ್ಬಿಸಿದರೆ ಜೈಲು ಸೇರಬೇಕಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

ಇದು ತುಂಬಾ ನೋವಾಗುತ್ತೆ.. ರಶ್ಮಿಕಾ ಮಂದಣ್ಣ ಭಾವುಕ ಪೋಸ್ಟ್

ತಮ್ಮ ಫೇಕ್ ವಿಡಿಯೋ ವೈರಲ್ ಆಗ್ತಿದ್ದಂತೆ ರಶ್ಮಿಕಾ ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಈ ಬಗ್ಗೆ ಮಾತನಾಡುವುದಕ್ಕೆ ತುಂಬಾ ನೋವಾಗುತ್ತೆ ತಂತ್ರಜ್ಞಾನವನ್ನು ಈ ರೀತಿಯ ಕೆಟ್ಟ ಚಟುವಟಿಕೆಗಳಿಗೆ ಬಳಸೋದು ತುಂಬಾ ವಿಷಾದನೀಯ ಅಂತ ಬರೆದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ

ಇದು ತುಂಬಾ ಬೇಸರದ ಸಂಗತಿ

ನನ್ನ ಡೀಪ್ ಫೇಕ್ ವಿಡಿಯೋ ಬಗ್ಗೆ ನಿಮ್ಮ ಜೊತೆ ಮಾತನಾಡುವುದಕ್ಕೆ ತುಂಬಾ ನೋವಾಗ್ತಿದೆ. ಪ್ರಾಮಾಣಿಕವಾಗಿ ಹೇಳ್ಬೇಕಂದ್ರೆ ಇಂತಾ ವಿಚಾರಗಳು ತುಂಬಾ ಭಯಾನಕ. ನನಗೆ ಮಾತ್ರವಲ್ಲ ಪ್ರತಿಯೊಬ್ಬರಿಗೆ ಈ ತಂತ್ರಜ್ಞಾನದ ದುರಪಯೋಗ ತುಂಬಾ ಹಾನಿಯುಂಟು ಮಾಡುತ್ತೆ. ನಾನೊಬ್ಬ ನಟಿಯಾಗಿ ಮತ್ತು ಮಹಿಳೆಯಾಗಿ ನನ್ನ ಬೆಂಬಲಕ್ಕೆ ನಿಂತಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಧನ್ಯವಾದ ಹೇಳುತ್ತೇನೆ. ಆದ್ರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಈ ತರಹದ ಘಟನೆ ನಡೆದಿದ್ರೆ ಇದನ್ನು ಹೇಗೆ ನಿಭಾಯಿಸುತ್ತಿದ್ದೆನೋ ಅನ್ನೋದು ಉಹಿಸಲು ಸಾಧ್ಯವಿಲ್ಲ. ಇನ್ನಷ್ಟು ಜನರಿಗೆ ಇದು ಹಾನಿಯುಂಟು ಮಾಡುವು ಮೊದಲು ನಾವು ಎಚ್ಚರಗೊಂಡು ಕ್ರಮ ಕೈಗೊಳ್ಳಬೇಕಾಗಿದೆ.

ರಶ್ಮಿಕಾ ಮಂದಣ್ಣ, ನಟಿ

ತಂತ್ರಜ್ಞಾನ ಅನ್ನೋದು ಮನುಷ್ಯನ ಉನ್ನತೀಕರಣಕ್ಕಾಗಿಯೇ ಹೊರತು ವಿನಾಶಕ್ಕಾಗಿ ಅಲ್ಲ. ಆದ್ರೆ ಕೆಲ ಕಿಡಿಗೇಡಿಗಳು ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಇಂತಾ ಕೃತ್ಯಗಳು ಎಸಗಿದಾಗ ನಿಜಕ್ಕೂ ತಂತ್ರಜ್ಞಾನದ ಬಗ್ಗೆ ಆತಂಕ ಹುಟ್ಟುತ್ತೆ. ಸದ್ಯ ರಶ್ಮಿಕಾ ಫೇಕ್ ವಿಡಿಯೋ ಬಗ್ಗೆ ವಿರೋಧ ವ್ಯಕ್ತವಾಗಿದ್ದು ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳು ವಿರುದ್ಧ ಕಾನೂನಿನ ಕ್ರಮದ ಕೂಗು ಜೋರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯಾಷನಲ್​​ ಕ್ರಶ್ ರಶ್ಮಿಕಾ ಮಂದಣ್ಣ ಡೀಪ್​ ಫೇಕ್​​ ವಿಡಿಯೋ ವೈರಲ್​​; ಇದರ ಅಸಲಿ ಕಥೆಯೇನು?

https://newsfirstlive.com/wp-content/uploads/2023/11/RASHMIKA_MANDANNA-3.jpg

Load More