/newsfirstlive-kannada/media/post_attachments/wp-content/uploads/2024/11/rashmika4.jpg)
ಕೊಡಗಿನ ಕುವರಿ, ನ್ಯಾಷನಲ್​​ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಸ್ಯಾಂಡಲ್​ವುಡ್​ನಿಂದ ಟಾಲಿವುಡ್, ಟಾಲಿವುಡ್​ನಿಂದ ಬಾಲಿವುಡ್.. ಹೀಗೆ ಒಂದಾದ ಬಳಿಕ ಒಂದರಂತೆ ಬಹುಭಾಷೆಗಳಲ್ಲಿ ಸರಣಿ ಸಿನಿಮಾಗಳನ್ನು ಮಾಡುತ್ತಾ ತಮ್ಮ ವೃತ್ತಿಜೀವನದಲ್ಲಿ ಸಖತ್​​ ಬ್ಯುಸಿಯಾಗಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿರೋ ನಟಿ. ಅತಿ ಹೆಚ್ಚು ಫ್ಯಾನ್ಸ್​ ಬೇಸ್​ ಕೂಡ ಹೊಂದಿರೋ ನಟಿ ಬಗ್ಗೆ ಅಚ್ಚರಿ ವಿಚಾರವೊಂದು ಹೊರ ಬಿದ್ದಿದೆ.
/newsfirstlive-kannada/media/post_attachments/wp-content/uploads/2024/11/rashmika2.jpg)
ಸದ್ಯಕ್ಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅಂದ್ರೆ ಅದು ರಶ್ಮಿಕಾ ಮಂದಣ್ಣ ಅಂತೆ. ಹೌದು, ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿಯಾಗಿದ್ದಾರೆ ಎಂದು ಚರ್ಚೆ ಶುರುವಾಗಿದೆ. ಪುಷ್ಪ 1ಕ್ಕೆ 2 ಕೋಟಿ ಸಂಭಾವನೆ ಪಡೆದುಕೊಂಡಿದ್ದ ನಟಿ, ‘ಪುಷ್ಪ -2’ ಚಿತ್ರಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಚಾರವಾಗಿ ಗೋವಾದಲ್ಲಿ ನಡೆದ IFFYನಲ್ಲಿ ಮಾತಾಡಿದ ನಟಿ ನಾನು ಅದನ್ನು ಒಪ್ಪುವುದಿಲ್ಲ, ಅದು ನಿಜವಲ್ಲ ಅಂತ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/11/rashmika3.jpg)
ಈಗಾಗಲೇ ನಟಿ ಬೆಂಗಳೂರು, ಮುಂಬೈ, ಗೋವಾ, ಹೈದರಾಬಾದ್​​​ನಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಭಾರತದಾದ್ಯಂತ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಟಿಯ ಮನೆ ಮೌಲ್ಯ ಅಂದಾಜು 8 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆಡಿ ಕ್ಯೂ3, ರೇಂಜ್ ರೋವರ್ ಸ್ಪೋರ್ಟ್, ಹ್ಯುಂಡೈ ಕ್ರೆಟಾ, ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್, ಟೊಯೊಟಾ ಇನ್ನೋವಾ ಕಾರುಗಳಿವೆ. ರಶ್ಮಿಕಾ ನಿವ್ವಳ ಮೌಲ್ಯ ಸುಮಾರು ₹45 ಕೋಟಿ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/11/rashmika.jpg)
ಇನ್ನೂ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ದಿ ರೂಲ್ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಲು ಈಗಾಗಲೇ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸ್ಟಾರ್ ನಿರ್ದೇಶಕ​ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಪುಷ್ಪ 2 ದಿ ರೂಲ್ ಡಿಸೆಂಬರ್ 5, 2024ರಂದು ತೆರೆಗೆ ಬರಲು ಸಜ್ಜಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us