newsfirstkannada.com

ರಶ್ಮಿಕಾ ಮಂದಣ್ಣ ರೀತಿ ಡೀಪ್ ​ಫೇಕ್ ವಿಡಿಯೋ ಮಾಡಿದ್ರೆ ಇನ್ಮುಂದೆ ಕಠಿಣ ಶಿಕ್ಷೆ; ಎಷ್ಟು ವರ್ಷ ಜೈಲು ಗೊತ್ತಾ?

Share :

07-11-2023

  ಎಡಿಟ್ ಮಾಡಿದ ವಿಡಿಯೋ ಶೇರ್ ಮಾಡಬೇಕಾದರೆ ಎಚ್ಚರ

  ಭಾರೀ ಮೊತ್ತದ ದಂಡದ ಜೊತೆಗೆ ಆರೋಪಿಗೆ ಕಠಿಣ ಶಿಕ್ಷೆ

  ವೈರಲ್ ಮಾಡಿದ್ರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಏನ್ ಹೇಳುತ್ತೆ?

ನವದೆಹಲಿ: ನ್ಯಾಷನಲ್​ ಕ್ರಶ್​ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್ ವಿಡಿಯೋವನ್ನು 24 ಗಂಟೆಯಲ್ಲಿ ತೆಗೆದು ಹಾಕುವಂತೆ ಸೋಷಿಯಲ್​ ಮೀಡಿಯಾ ಫ್ಲಾಟ್​ ಫಾರ್ಮ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಇಂತಹ ಡೀಪ್‌ ಫೇಕ್ ವಿಡಿಯೋಗಳನ್ನು ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ದಂಡ ಜೊತೆಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ರೂಲ್ಸ್ ಜಾರಿ ಮಾಡಲಾಗುತ್ತಿದೆ.

ವೈಯಕ್ತಿಕವಾಗಿ ತೇಜೋವಧೆ ಮಾಡಲೆಂದು ಸೋಷಿಯಲ್​ ಮೀಡಿಯಾಗಳಲ್ಲಿ ವಿಡಿಯೋವನ್ನು ವೈರಲ್ ಮಾಡಿದ್ರೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಸೆಕ್ಷನ್​ 66ರಡಿ ಆರೋಪಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿವರೆಗೆ ದಂಡವನ್ನು ವಿಧಿಸಲಾಗುತ್ತದೆ. ಹೀಗಾಗಿ ಯಾರೇ ಆಗಲಿ ಟ್ವಿಟ್ಟರ್​, ಫೇಸ್​ಬುಕ್​, ಇನ್​ಸ್ಟಾ ಹಾಗೂ ಯುಟ್ಯೂಬ್​​ನಲ್ಲಿ ವಿಡಿಯೋ ಶೇರ್ ಮಾಡುವ ಮುನ್ನ ಕಾನೂನು ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಒಬ್ಬರ ವೈಯಕ್ತಿಕ ಜೀವನಕ್ಕೆ ಕುಂದು ತರುವ ರೀತಿಯಲ್ಲಿ ವಿಡಿಯೋ ಶೇರ್ ಮಾಡಿದ್ರೆ ಅಂತವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಲಾಗಿದೆ.

ರಶ್ಮಿಕಾ ಮಂದಣ್ಣ ಅವರ ಫೇಕ್ ಫೋಟೋ

ಇನ್​ಸ್ಟಾ, ಟ್ವಿಟ್ಟರ್​, ಫೇಸ್​ಬುಕ್​ ಹಾಗೂ ಯು ಟ್ಯೂಬ್ ಸೇರಿದಂತೆ ಎಲ್ಲ ಸೋಷಿಯಲ್​ ಮೀಡಿಯಾಗಳು ಕಾನೂನು ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಇದನ್ನು ಪಾಲಿಸದಿದ್ದರೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾಹಿತಿ ತಂತ್ರಜ್ಞಾನದ ನಿಯಮ 3(2) (ಬಿ) ಪ್ರಕಾರದಡಿ ಸೋಷಿಯಲ್ ಮೀಡಿಯಾಗಳಲ್ಲಿ ವೈಯಕ್ತಿವಾಗಿ ತೇಜೋವಧೆ ಮಾಡುವ ರೀತಿಯಲ್ಲಿ ಅಪ್​ಲೋಡ್​ ಮಾಡಲಾದ ವಿಡಿಯೋವನ್ನು 24 ಗಂಟೆಯಲ್ಲಿ ತೆಗೆದು ಹಾಕಲಾಗುತ್ತದೆ. ಸದ್ಯ ಇದೇ ನಿಯಮದಂತೆ ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋವನ್ನು ತೆಗೆದು ಹಾಕಲಾಗುತ್ತದೆ. ಇನ್ನು ಸಂತ್ರಸ್ತರು ಕೂಡ ಈ ಬಗ್ಗೆ ದೂರು ದಾಖಲು ಮಾಡಬಹುದು ಎಂದು ಕಾಯ್ದೆ ಹೇಳುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಶ್ಮಿಕಾ ಮಂದಣ್ಣ ರೀತಿ ಡೀಪ್ ​ಫೇಕ್ ವಿಡಿಯೋ ಮಾಡಿದ್ರೆ ಇನ್ಮುಂದೆ ಕಠಿಣ ಶಿಕ್ಷೆ; ಎಷ್ಟು ವರ್ಷ ಜೈಲು ಗೊತ್ತಾ?

https://newsfirstlive.com/wp-content/uploads/2023/11/RASHMIKA_MANDANNA-5.jpg

Load More