newsfirstkannada.com

×

ಒಂದೇ ದಿನ 35 ಲಕ್ಷ ಪ್ರಕರಣ ಇತ್ಯರ್ಥ.. ಈ ಬಾರಿ ರಾಷ್ಟ್ರೀಯ ಲೋಕ್ ಅದಾಲತ್ ಸಂಪೂರ್ಣ ಯಶಸ್ವಿ

Share :

Published September 20, 2024 at 7:46pm

Update September 20, 2024 at 7:47pm

    1008 ಮಧ್ಯಸ್ಥಿಕೆ ಪೀಠಗಳಲ್ಲಿ 34 ಲಕ್ಷ ಪ್ರಕರಣಗಳು ಇತ್ಯರ್ಥ ಆಗಿವೆ

    248 ದಂಪತಿಗಳನ್ನು ರಾಜಿ ಮೂಲಕ ಒಂದುಗೂಡಿಸಿದ ಕೋರ್ಟ್‌

    26 ವರ್ಷಗಳ ಹಳೆಯ ಪ್ರಕರಣವೂ ರಾಜೀ ಸಂದಾಯದಲ್ಲಿ ಇತ್ಯರ್ಥ

ಬೆಂಗಳೂರು: ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್ ಸಂಪೂರ್ಣ ಯಶಸ್ವಿಯಾಗಿದೆ. ಕಳೆದ ಸೆಪ್ಟೆಂಬರ್ 14ರಂದು ನಡೆದಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಂದೇ ದಿನ ಬರೋಬ್ಬರಿ 35.84 ಲಕ್ಷ ಪ್ರಕರಣಗಳು ಇತ್ಯರ್ಥ ಆಗಿದೆ.

ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ವಿ. ಕಾಮೇಶ್ವರ್ ರಾವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 1008 ಮಧ್ಯಸ್ಥಿಕೆ ಪೀಠಗಳಲ್ಲಿ 34 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. 34 ಲಕ್ಷ ಕೇಸ್‌ಗಳಲ್ಲಿ ಒಟ್ಟು 2.402 ಕೋಟಿ ರೂ. ಪರಿಹಾರ ಮೊತ್ತ ನೀಡಲಾಗಿದೆ.

ಬರೋಬ್ಬರಿ 1669 ವೈವಾಹಿಕ ಪ್ರಕರಣಗಳು, 1669ರ ಪೈಕಿ 248 ದಂಪತಿಗಳನ್ನು ರಾಜಿ ಸಂಧಾನ ಮೂಲಕ ಒಂದು ಮಾಡಲಾಗಿದೆ. 2696 ಆಸ್ತಿ ಪಾಲುದಾರಿಕೆ ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ.

ಇನ್ನು, 3621 ಮೋಟಾರು ವೆಹಿಕಲ್ ಪ್ರಕರಣಗಳು, 8517 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಗಿದೆ. 389 ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, 196 ಕೋಟಿ ಪರಿಹಾರ ಸಂದಾಯ ಮಾಡಲಾಗಿದೆ.

623 ಎಂ.ವಿ.ಸಿ ಅಮಲ್ಜಾರಿ ಕೇಸ್‌ಗಳು, 2598 ಇತರೆ ಅಮಲ್ಜಾರಿ ಕೇಸ್‌ಗಳನ್ನು ಇತ್ಯರ್ಥ ಮಾಡಲಾಗಿದೆ. ಒಂದೇ ಪ್ರಕರಣದಲ್ಲಿ 20 ಕೋಟಿ ರೂಪಾಯಿಗೆ ಇತ್ಯರ್ಥ ಆಗಿದೆ. ರಿಲಯನ್ಸ್ ಹೋಮ್ಸ್ ಫೈನಾನ್ಸ್ v/s ಸೈಕಾನ್ ಕಂಸ್ಟ್ರಕ್ಷನ್ ನಡುವಿನ 26 ವರ್ಷಗಳ ಹಳೆಯ ಪ್ರಕರಣ ರಾಜೀ ಸಂದಾಯದಲ್ಲಿ ಇತ್ಯರ್ಥ ಆಗಿದೆ. 1022 ಕೇಸ್ 5 ವರ್ಷಕ್ಕಿಂತ ಹಳೆಯ & 277 ಕೇಸ್‌ಗಳು 10 ವರ್ಷಕ್ಕಿಂತ ಹಳೆ ಕೇಸ್‌ಗಳಾಗಿವೆ. 144 ಕೇಸ್‌ಗಳು 15 ವರ್ಷಕ್ಕಿಂತ ಹಳೆಯ ಕೇಸ್‌ಗಳು ಇತ್ಯರ್ಥ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ದಿನ 35 ಲಕ್ಷ ಪ್ರಕರಣ ಇತ್ಯರ್ಥ.. ಈ ಬಾರಿ ರಾಷ್ಟ್ರೀಯ ಲೋಕ್ ಅದಾಲತ್ ಸಂಪೂರ್ಣ ಯಶಸ್ವಿ

https://newsfirstlive.com/wp-content/uploads/2024/09/Karnataka-loka-Adalath.jpg

Load More