newsfirstkannada.com

ಸರ್ಕಾರಿ ಆಸ್ಪತ್ರೆಯ ಕ್ಯಾಂಟೀನ್​ ಆಹಾರದಲ್ಲಿ ಇಲಿ! ದೃಶ್ಯ ವೈರಲ್​ ಆದಂತೆ ಕ್ಯಾಂಟೀನ್​ ಕ್ಲೋಸ್​

Share :

14-11-2023

    ಕ್ಯಾಂಟೀನ್​ನಲ್ಲಿ ಇಟ್ಟಿದ್ದ ಆಹಾರದಲ್ಲಿ ಅತ್ತಿಂದಿತ್ತ ಓಡಿದ ಇಲಿ

    ಕ್ಯಾಂಟೀನ್​ ಹೋಗಿದ್ದ ರೋಗಿಯ ಸಂಬಂಧಿಕರಿಗೆ ನೋಡಿ ಶಾಕ್​

    ಪ್ರಶ್ನಿಸಿದ ಗ್ರಾಹಕನಿಗೆ ಇದು ಹಳಸಿದ ಆಹಾರ ಎಂದ ಕ್ಯಾಂಟೀನ್​ ಸಿಬ್ಬಂದಿ

ಚೆನ್ನೈ: ಸರ್ಕಾರಿ ಆಸ್ಪತ್ರೆಯ ಕ್ಯಾಂಟೀನ್​ ಆಹಾರದಲ್ಲಿ ಇಲಿ ಓಡಾಡುತ್ತಿರುವ ದೃಶ್ಯವೊಂದು ಕಂಡುಬಂದಿದೆ. ಚೆನ್ನೈನ ಸ್ಟಾನ್ಲಿ ವೈದ್ಯಕೀಯ ಕಾಲೇಜಿನ ಕ್ಯಾಂಟೀನ್​ನ ಆಹಾರದಲ್ಲಿ ಇಲಿ ಇರುವುದನ್ನು ರೋಗಿಯೊಬ್ಬರ ಸಂಬಂಧಿಕರು ವಿಡಿಯೋದ ಮೂಲಕ ಸೆರೆ ಹಿಡಿದಿದ್ದಾರೆ. ಈ ದೃಶ್ಯ ವೈರಲ್​ ಆದ ಬೆನ್ನಲ್ಲೇ ಕ್ಯಾಂಟೀನನ್ನ ಮುಚ್ಚಲಾಗಿದೆ.

ರೋಗಿಯೊಬ್ಬನ ಸಂಬಂಧಿಕರು ಹಸಿವಾಗುತ್ತಿದೆ ಎಂದು ಆಹಾರವನ್ನು ಸೇವಿಸಲು ಆಸ್ಪತ್ರೆಯ ಕ್ಯಾಂಟೀನ್​ಗೆ ತೆರಳುತ್ತಾರೆ. ಈ ವೇಳೆ ಗಾಜಿನ ಪೆಟ್ಟಿಯ ಒಳಗಿದ್ದ ಆಹಾರ ಮೇಲೆ ಇಲಿಯೊಂದು ಓಡಾಡುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಗ್ರಾಹಕರೊಬ್ಬರು ಈ ಬಗ್ಗೆ ಕ್ಯಾಂಟೀನ್​ ಸಿಬ್ಬಂದಿ ಬಳಿ ಪ್ರಶ್ನಿಸಿದಾಗ, ಆಹಾರ ಹಳಸಿದೆ ಇದನ್ನು ಜನರಿಗೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ಘಟನೆ ವೈರಲ್​ ಆಗುತ್ತಿದ್ದಂತೆ ಆಸ್ಪತ್ರೆಯ ಡೀನ್​ ಡಾ.ಪಿ.ಬಾಲಾಜಿ ಕ್ಯಾಂಟೀನ್​​ ಮುಚ್ಚುವಂತೆ ಹೇಳಿದ್ದಾರೆ. ಸದ್ಯ ಕ್ಯಾಂಟಿನ್​​ನನ್ನು ಮುಚ್ಚಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಆಸ್ಪತ್ರೆಯ ಕ್ಯಾಂಟೀನ್​ ಆಹಾರದಲ್ಲಿ ಇಲಿ! ದೃಶ್ಯ ವೈರಲ್​ ಆದಂತೆ ಕ್ಯಾಂಟೀನ್​ ಕ್ಲೋಸ್​

https://newsfirstlive.com/wp-content/uploads/2023/11/Rat-1.jpg

Load More