/newsfirstlive-kannada/media/post_attachments/wp-content/uploads/2024/10/RATAN-TATA-3-1.jpg)
ರತನ್ ಟಾಟಾ ಇಂದು ನಮ್ಮೊಂದಿಗಿಲ್ಲವಾದರೂ ಅವರ ನೆನಪು ದೇಶದ 140 ಕೋಟಿ ಜನರ ಹೃದಯದಲ್ಲಿ ಜೀವಂತವಾಗಿದೆ. ರತನ್ ಟಾಟಾ ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರು. ಆದರೂ ಅವರು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅವರು ಆರು ಖಂಡಗಳಲ್ಲಿ 100 ಕ್ಕೂ ಹೆಚ್ಚು ದೇಶಗಳಲ್ಲಿ 30ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದಾರೆ. ಹೀಗಿದ್ದೂ ಸಹಜ ಜೀವನ ನಡೆಸುತ್ತಿದ್ದರು. ಟಾಟಾ ಸರಳ ವ್ಯಕ್ತಿತ್ವದ ಕಾರ್ಪೊರೇಟ್ ದೈತ್ಯ. ಅವರು ತಮ್ಮ ಸೌಜನ್ಯ ಮತ್ತು ಪ್ರಾಮಾಣಿಕತೆಯ ಆಧಾರದ ಮೇಲೆ ವಿಶಿಷ್ಟವಾದ ವ್ಯಕ್ತಿತ್ವವನ್ನು ಪಡೆದುಕೊಂಡಿದ್ದಾರೆ.
ರತನ್ ಟಾಟಾ 1962 ರಲ್ಲಿ ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದುಕೊಂಡರು. ಆಗ ಅವರಿಗೆ ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದಾದ IBMನಲ್ಲಿ ಉದ್ಯೋಗದ ಆಫರ್ ಸಿಕ್ಕಿತ್ತು. ಆದರೆ ಅವರು ತಮ್ಮ ಚಿಕ್ಕಪ್ಪ ಜೆಆರ್‌ಡಿ ಟಾಟಾರ ಒತ್ತಡದಿಂದ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ನಂತರ ಚಿಕ್ಕಪ್ಪ ಮತ್ತು ಅವರ ಕುಟುಂಬದ ವ್ಯವಹಾರವನ್ನು ಅರ್ಥಮಾಡಿಕೊಂಡರು. ಕೊನೆಗೆ ಆ ಜವಾಬ್ದಾರಿಯನ್ನು ರತನ್ ಟಾಟಾ ತೆಗೆದುಕೊಂಡರು. ಚಿಕ್ಕಪ್ಪನ ಸಲಹೆಯಂತೆ ಭಾರತಕ್ಕೆ ಬಂದು ಟಾಟಾ ಗ್ರೂಪ್ ಸೇರಿದರು.
ಇದನ್ನೂ ಓದಿ:ರತನ್ ಟಾಟಾ ಬ್ರಹ್ಮಚಾರಿ.. TATA ಸನ್ಸ್​ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು..?
/newsfirstlive-kannada/media/post_attachments/wp-content/uploads/2024/10/Ratan-Tata-14.jpg)
ಟಾಟಾ ಗ್ರೂಪ್‌ನಲ್ಲಿ ಪ್ರಯಾಣ ಶುರುವಾಗಿದ್ದು ಹೀಗೆ..
ರತನ್ ಟಾಟಾ ಆರಂಭದಲ್ಲಿ ಕಂಪನಿ ಒಂದರ ಸಹಾಯಕರಾಗಿ ಕೆಲಸ ಮಾಡಿದರು. ಟಾಟಾ ಗ್ರೂಪ್ ವಿವಿಧ ವ್ಯವಹಾರಗಳಲ್ಲಿ ಅನುಭವವನ್ನು ಗಳಿಸಿದರು. 1971ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಯ ಉಸ್ತುವಾರಿ ನಿರ್ದೇಶಕರಾಗಿ ನೇಮಕಗೊಂಡರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. ಟಾಟಾ ಸಮೂಹದ ಹಲವಾರು ಕಂಪನಿಗಳಲ್ಲಿ ಬೆಳವಣಿಗೆಯಲ್ಲಿ ಇವರದ್ದೇ ಪಾರುಪತ್ಯವಾಗಿದೆ.
ಪ್ರತಿಭಾವಂತ ಯುವಕರನ್ನು ಕರೆತರುವ ಮೂಲಕ ವ್ಯಾಪಾರದ ವೇಗವನ್ನು ತೀವ್ರಗೊಳಿಸಿದರು. ಅಲ್ಪಾವಧಿಯಲ್ಲಿಯೇ ಗ್ರೂಪ್​​ನಲ್ಲಿರುವ ಅನೇಕ ಕಂಪನಿಗಳು ಯಶಸ್ಸಿನ ಕಥೆಗಳನ್ನು ಬರೆಯಲು ಪ್ರಾರಂಭಿಸಿದವು. ಒಂದು ದಶಕದ ನಂತರ ಅವರು ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾದರು. 1991ರಲ್ಲಿ ಚಿಕ್ಕಪ್ಪವರಿಂದ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಜೆಆರ್‌ಡಿ ಟಾಟಾ ಐದು ದಶಕಗಳಿಗೂ ಹೆಚ್ಚು ಕಾಲ ಈ ಹುದ್ದೆಯಲ್ಲಿದ್ದರು.
ಇದನ್ನೂ ಓದಿ:ರತನ್ ಟಾಟಾಗೆ ಅಂದು ಆಗಿತ್ತು ದೊಡ್ಡ ಅವಮಾನ.. 9 ವರ್ಷಗಳ ನಂತರ ರೋಚಕವಾಗಿ ಸೇಡು ತೀರಿಸಿಕೊಂಡಿದ್ದರು..
/newsfirstlive-kannada/media/post_attachments/wp-content/uploads/2024/10/RATAN-TATA-1-1.jpg)
1868ರಲ್ಲಿ ಸಣ್ಣ ಜವಳಿ ವ್ಯಾಪಾರವಾಗಿ ಪ್ರಾರಂಭವಾದ ಟಾಟಾ ಗ್ರೂಪ್, ಉಪ್ಪಿನಿಂದ ಉಕ್ಕಿನಿಂದ ಹಿಡಿದು ಕಾರುಗಳವರೆಗೆ ವ್ಯಾಪಿಸಿರುವ ಕಾರ್ಯಾಚರಣೆಗಳೊಂದಿಗೆ ತ್ವರಿತವಾಗಿ ಜಾಗತಿಕ ದೈತ್ಯವಾಗಿ ರೂಪಾಂತರಗೊಂಡಿತು. ಸಾಫ್ಟ್​ವೇರ್, ವಿದ್ಯುತ್ ಸ್ಥಾವರಗಳು, ವಿಮಾನಯಾನ ಸಂಸ್ಥೆಗಳಲ್ಲಿ ಚಾಪು ಮೂಡಿಸಿತು. ರತನ್ ಟಾಟಾ ನೇತೃತ್ವದಲ್ಲಿ ಟಾಟಾ ಗ್ರೂಪ್ ಅನೇಕ ಇತಿಹಾಸಗಳನ್ನು ಸೃಷ್ಟಿಸಿತು. ಟಾಟಾ ಸಮೂಹದ ಆದಾಯ ಮತ್ತು ಲಾಭವು ಉತ್ತುಂಗಕ್ಕೆ ತಲುಪಿತ್ತು.
ಜಾಗತಿಕ ಕಂಪನಿಗಳ ಸ್ವಾಧೀನದ ಪ್ರಾರಂಭ
ರತನ್ ಟಾಟಾ ಎರಡು ದಶಕಗಳ ಕಾಲ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಟಾಟಾ ಗ್ರೂಪ್​ನ ಚಟುವಟಿಕೆ ವೇಗವಾಗಿ ವಿಸ್ತರಣೆ ಆಯಿತು. 2000ರಲ್ಲಿ ಲಂಡನ್‌ನ ಟೆಟ್ಲಿ ಟೀ (Tetley Tea)ಯನ್ನು, 2004ರಲ್ಲಿ ದಕ್ಷಿಣ ಕೊರಿಯಾದ ಡೇವೂ (Daewoo)ಅನ್ನು ಖರೀದಿಸಿತು. ಅಮೆರಿಕದಲ್ಲಿ ಮೋಟಾರ್ಸ್, ಆಂಗ್ಲೋ-ಡಚ್ ಸ್ಟೀಲ್ ಮೇಕರ್ ಕೋರಸ್ ಗ್ರೂಪ್ ಅನ್ನೂ ಖರೀದಿ ಮಾಡಿದ್ದರು. ಪ್ರಸಿದ್ಧ ಬ್ರಿಟಿಷ್ ಕಾರ್ ಬ್ರ್ಯಾಂಡ್‌ಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್​ಗಳನ್ನು ಖರೀದಿ ಮಾಡಿದ ಕೀರ್ತಿ ಇವರಿಗೆ ಇದೆ.
ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಲ್ಲದೆ, ಅವರು ತಮ್ಮ ಲೋಕೋಪಕಾರಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದರು. 1970ರ ದಶಕದಲ್ಲಿ ಅಗಾ ಖಾನ್ ಆಸ್ಪತ್ರೆ (Aga Khan Hospital) ಮತ್ತು ವೈದ್ಯಕೀಯ ಕಾಲೇಜು ಪ್ರಾರಂಭಿಸಿದರು. ಇದು ದೇಶದ ಪ್ರಮುಖ ಆರೋಗ್ಯ ಸಂಸ್ಥೆಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿತು.
ಇದನ್ನೂ ಓದಿ:Ratan Tata: 1962ರಲ್ಲಿ ಯುದ್ಧ ನಡೆಯದಿದ್ದರೆ ರತನ್ ಟಾಟಾ ಮದುವೆಯಾಗಿರುತ್ತಿದ್ದರು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us