newsfirstkannada.com

ಸಿದ್ದು ಸರ್ಕಾರದ ಆದೇಶದ ವಿರುದ್ಧವೇ ಕೋರ್ಟ್​​ಗೆ ​​ಹೋದ IPS ಅಧಿಕಾರಿ ರವಿ.ಡಿ ಚನ್ನಣ್ಣನವರ್; ಕಾರಣವೇನು?

Share :

12-06-2023

    ಬಿಜೆಪಿ ಸರ್ಕಾರದಲ್ಲಿ ರವಿ ಡಿ. ಚನ್ನಣ್ಣನವರಿ​ಗೆ ಎಂಡಿ ಹುದ್ದೆ

    ಸಿದ್ದರಾಮಯ್ಯ​ ಸರ್ಕಾರದ ವಿರುದ್ಧ ಕಾನೂನು ಹೋರಾಟ​

    ರವಿ ಡಿ ಚನ್ನಣ್ಣನವರ್ ಮನವಿಗೆ ಕೋರ್ಟ್​ ಹೇಳಿದ್ದೇನು?

ಬೆಂಗಳೂರು: ಐಪಿಎಸ್ ಅಧಿಕಾರಿ, ಸದ್ಯ ಕಿಯೋನಿಕ್ಸ್ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಡಿ ಚನ್ನಣ್ಣನವರ್ ಅವರು ರಾಜ್ಯ ಸರ್ಕಾರದ ವರ್ಗಾವಣೆ ಆದೇಶವನ್ನು ಪ್ರಶ್ನಿಸಿದ್ದಾರೆ. ರವಿ ಡಿ ಚನ್ನಣ್ಣನವರ್ ಮನವಿ ಪುರಸ್ಕರಿಸಿರೋ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯೂ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.

ರವಿ ಡಿ ಚನ್ನಣ್ಣನವರ್ ಅವರನ್ನು ಹಿಂದಿನ ಬಿಜೆಪಿ ಸರ್ಕಾರ 2022ರ ನವೆಂಬರ್ 14 ರಂದು ಕಿಯೋನಿಕ್ಸ್ ಎಂಡಿಯಾಗಿ ವರ್ಗಾಯಿಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜೂನ್ 7 ರಂದು ವರ್ಗಾವಣೆ ಮಾಡಿ ಆದೇಶಿಸಿದೆ. ಕಿಯೋನಿಕ್ಸ್ ಎಂಡಿಯಾಗಿದ್ದ ರವಿ ಡಿ ಚನ್ನಣ್ಣನವರ್ ಅವರನ್ನ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಎಂಡಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.

ವರ್ಗಾವಣೆ ಆದೇಶವನ್ನು ಆಕ್ಷೇಪಿಸಿದ್ದ ರವಿ ಡಿ ಚನ್ನಣ್ಣನವರ್, ಕಿಯೋನಿಕ್ಸ್ ಎಂಡಿಯಾಗಿ ಈ ಹುದ್ದೆಗೆ ಬಂದು 6 ತಿಂಗಳಾಗಿದೆ. ಕಾರಣ ನೀಡದೆ ವರ್ಗಾವಣೆ ಮಾಡಿದ್ದು, ಸರಿಯಲ್ಲ ಎಂದು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದ್ದರು.

ಅಖಿಲ ಭಾರತ ನಿಯಮ 1968ರ ಪ್ರಕಾರ ನಿಯಮ ಉಲ್ಲಂಘನೆಯಾಗಿದೆ. ಒಬ್ಬ ಅಧಿಕಾರಿ ಕನಿಷ್ಠ 2 ವರ್ಷ ಹುದ್ದೆಯಲ್ಲಿ ಇರಬೇಕು ಎಂದಿದೆ. ಆದರೆ ಇಲ್ಲಿ ಈ ನಿಯಮ ಪಾಲನೆ ಮಾಡದೇ ವರ್ಗಾಯಿಸಲಾಗಿದೆ. ತಕ್ಷಣ ವರ್ಗಾವಣೆ ಆದೇಶ ರದ್ದುಪಡಿಸಿ ಹಿಂದಿನ ಆದೇಶ ಜಾರಿಗೆ ಮನವಿ ಮಾಡಿದ್ದರು. ಅಲ್ಲದೇ ಅರ್ಜಿ ಇತ್ಯರ್ಥ ತನಕ ವರ್ಗಾವಣೆ ಸ್ಟೇಗೆ ಮನವಿ ಮಾಡಿದ್ರು. ರವಿ ಡಿ. ಚನ್ನಣ್ಣನವರ್ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ವಾದಿಸಿದರು. ವರ್ಗಾವಣೆ ತತ್ವಗಳನ್ನು ಪ್ರತಿವಾದಿಗಳು ಗಾಳಿಗೆ ತೂರಿ ಟ್ರಾನ್ಸ್‌ಫರ್ ಮಾಡಿದೆ. ನನಗೆ ಅಡ್ಡಿಪಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದ ಸಿಎಟಿ ನ್ಯಾ. ಎಸ್ ಸುಜಾತಾ & ರಾಕೇಶ್ ಕುಮಾರ್ ಗುಪ್ತಾ ಅವರ ಪೀಠ ಮುಂದಿನ ಆದೇಶದವರೆಗೆ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಮನವಿ ಪುರಸ್ಕರಿಸಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದು ಸರ್ಕಾರದ ಆದೇಶದ ವಿರುದ್ಧವೇ ಕೋರ್ಟ್​​ಗೆ ​​ಹೋದ IPS ಅಧಿಕಾರಿ ರವಿ.ಡಿ ಚನ್ನಣ್ಣನವರ್; ಕಾರಣವೇನು?

https://newsfirstlive.com/wp-content/uploads/2023/06/Ravi-D-Channavar.jpg

Load More