newsfirstkannada.com

ಏಕದಿನ ವಿಶ್ವಕಪ್​ ಗೆಲ್ಲಲು 3L ಫಾರ್ಮುಲಾ ಕೊಟ್ಟ ರವಿ ಶಾಸ್ತ್ರಿ; ಏನಿದು ಹೊಸ ಸೂತ್ರ..!?

Share :

20-08-2023

    2011ರ ವಿಶ್ವಕಪ್​​ ಗೆಲುವಿನ ಹಿಂದಿತ್ತು 3L ಫಾರ್ಮುಲಾ

    ಟೀಮ್ ಇಂಡಿಯಾ ವೀಕ್ನೆಸ್​​​​​​ಗೂ 3L ಫಾರ್ಮುಲಾ ಮದ್ದು

    ಏಕದಿನ ವಿಶ್ವಕಪ್​ಗೆ ಕೇವಲ 46 ದಿನಗಷ್ಟೇ ಬಾಕಿ

ಏಕದಿನ ವಿಶ್ವಕಪ್ ಕಿಕ್​ಸ್ಟಾರ್ಟ್​ಗೆ ಜಸ್ಟ್​ 46 ದಿನಗಳಷ್ಟೇ ಬಾಕಿ ಇದೆ. ಪ್ರತಿಷ್ಠಿತ ವಿಶ್ವಕಪ್​ ಗೆಲ್ಲೋಕೆ ಟೀಮ್ ಇಂಡಿಯಾ, ತನ್ನದೇ ಆದ ಗೇಮ್​​​ಪ್ಲಾನ್ ಸ್ಟ್ರಾಟರ್ಜಿ ರೂಪಿಸ್ತಿದೆ. ಆದರೆ ಈ ನಡುವೆ ಮಾಜಿ ಕೋಚ್ ಒಬ್ಬರು, ಟೀಮ್ ಇಂಡಿಯಾ ವಿಶ್ವಕಪ್​ ಗೆಲುವಿಗಾಗಿ 3L ಫಾರ್ಮುಲಾದ ಸಲಹೆ ನೀಡಿದ್ದಾರೆ.

2023ರ ಏಕದಿನ ಮೆಗಾ ಟೂರ್ನಿಗೆ ಕೌಂಟ್​ಡೌನ್​ ಶುರುವಾಗಿದೆ. ವಿಶ್ವಕಪ್​ ಗೆಲುವಿಗಾಗಿ ಭಾರೀ ಪ್ರಿಪರೇಷನ್​ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್​ಮೆಂಟ್​ ಸಿಕ್ರೇಟ್​ ಗೇಮ್​​ಪ್ಲಾನ್​​ ನಡೆಸ್ತಿದೆ. ಆದರೆ ಈ ನಡುವೆ ಎಡಗೈ ಬ್ಯಾಟ್ಸ್​ಮನ್​​​​ಗಳೇ ಹಾಟ್​ ಟಾಪಿಕ್..

ಭಾರತದ ಅತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​​ ಹತ್ತಿರವಾಗ್ತಿದ್ದು, ಯಾರ್​ ಗೆಲ್ತಾರೆ ಎಂಬ ಚರ್ಚೆಗಳೂ ಜೋರಾಗಿವೆ. ಆದರೆ, ಈ ಮೆಗಾ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್​ ಆಗಿ ಮೆರೆಯಬೇಕಾದ್ರೆ ಹಿಟ್​ಮ್ಯಾನ್ ರೋಹಿತ್ ಶರ್ಮಾ 3L ಫಾರ್ಮುಲಾ ಅನುಸರಿಸಲೇಬೇಕಿದೆ. ಅಂದ್ಹಾಗೆ ಈ ಫಾರ್ಮುಲಾ ಐಡಿಯಾ ಕೊಟ್ಟಿರೋದು ಬೇಱರು ಅಲ್ಲ.. ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ..

ಏನಿದು 3L ಫಾರ್ಮುಲಾ..?

ಅಂದ್ಹಾಗೆ ಈಗ 3L ಫಾರ್ಮುಲಾ ಅಂದ್ರೆ ಟೀಮ್ ಇಂಡಿಯಾದಲ್ಲಿ ಮೂವರು ಲೆಫ್ಟಿ ಬ್ಯಾಟ್ಸ್​ಮನ್​ಗಳಿಗೆ ಅವಕಾಶ ಕಲ್ಪಿಸುವುದು. ಇದಕ್ಕೆ ಕಾರಣ ಲೆಫ್ಟಿ ಬ್ಯಾಟ್ಸ್​ಮನ್​​ಗಳಿಂದ ಆಗುವ ಲಾಭ. ಟೀಮ್ ಇಂಡಿಯಾದ ಕಾಂಬಿನೇಷನ್ ನೋಡಿದ್ರೆ ಲೆಫ್ಟಿ ಬ್ಯಾಟ್ಸ್​ಮನ್​​​​ಗಳೇ ತಂಡದಲ್ಲಿ ಇಲ್ಲದಂತಾಗಿದೆ. ಇದು ಸಹಜವಾಗೇ ಎದುರಾಳಿಗಳಿಗೆ ಅಡ್ವಾಂಟೇಜ್​. ಹೀಗಾಗಿ ತಂಡದಲ್ಲಿ ಲೆಫ್ಟಿ ಬ್ಯಾಟ್ಸ್​ಮನ್ಸ್​ಗೆ ಅವಕಾಶ ಕಲ್ಪಿಸಿದ್ರೆ, ಎದುರಾಳಿಗಳ ಗೇಮ್​​ಪ್ಲಾನ್​​​​​​​​​​​​ಗಳನ್ನು ಉಲ್ಟಾ ಮಾಡಬಹುದು. ಅಷ್ಟೇ ಅಲ್ಲ.. ರೈಟ್​ ಆ್ಯಂಡ್ ಲೆಫ್ಟ್ ಹ್ಯಾಂಡ್ ಕಾಂಬಿನೇಷನ್​ನಿಂದ​ ಎದುರಾಳಿಗಳನ್ನ ಒತ್ತಡಕ್ಕೆ ಸಿಲುಕಿಸುವುದರ ಜೊತೆಗೆ ಸರಾಗವಾಗಿ ರನ್ ಪೇರಿಸಬಹುದು. ಇದು ಸಹಜವಾಗೇ ಟೀಮ್ ಇಂಡಿಯಾಗೆ ಮೇಲುಗೈ ಸಾದಿಸಲು ನೆರವಾಗೋದ್ರಲ್ಲಿ ಅನುಮಾನವೇ ಇಲ್ಲ.​

ಎಡಗೈ ವೇಗಿಗಳ ವಿಕ್ನೇಸ್​​​​ಗೂ 3L ಫಾರ್ಮುಲಾ ಮದ್ದು..!

ಸದ್ಯ ಟೀಮ್ ಇಂಡಿಯಾದ ವಿಕ್ನೇಸ್​​, ಎಡಗೈ ವೇಗಿಗಳು ಅನ್ನೋದು ಓಪನ್ ಸಿಕ್ರೇಟ್​. ಸದ್ಯ ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸಿರುವ ಎಲ್ಲಾ ತಂಡಗಳಲ್ಲೂ ಈ ಎಡಗೈ ವೇಗಿಗಳದ್ದೇ ಪಾರುಪತ್ಯ. ಹೀಗಾಗಿ ಇವರು ಟೀಮ್ ಇಂಡಿಯಾಗೆ ಮುಳ್ಳಾಗುವ ಅನುಮಾನವೇ ಇಲ್ಲ. ಈ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯುವಂತೆ, ಎಡಗೈ ವಿಕ್ನೇಸ್​​ಗೆ ಎಡಗೈ ಬ್ಯಾಟ್ಸ್​ಮನ್​ಗಳನ್ನೇ ಬಳಸಿಕೊಂಡು ಟಕ್ಕರ್ ನೀಡಬಹುದು. ಆ ಮೂಲಕ ಟೀಮ್ ಇಂಡಿಯಾ ಲೆಫ್ಟಿ ಬ್ಯಾಟ್ಸ್​ಮನ್​ಗಳೇ ವಿಕ್ನೇಸ್​ಗೆ ಮದ್ದಾಗಬಹುದು.

2011ರ ವಿಶ್ವಕಪ್​​ ಗೆಲುವಿನ ಹಿಂದೆ ಎಡಗೈ ಬ್ಯಾಟ್ಸ್​​ಮನ್ಸ್​..!

2011ರ ಏಕದಿನ ವಿಶ್ವಕಪ್​ ಗೆಲುವಿನಲ್ಲಿ ಎಡಗೈ ಬ್ಯಾಟ್ಸ್​ಮನ್​​ಗಳ ಕೊಡುಗೆ ನಿಜಕ್ಕೂ ಅಪಾರ. ಅಂದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿದ್ದ ಗೌತಮ್ ಗಂಬೀರ್, ಆಲ್​ರೌಂಡರ್ ಯುವರಾಜ್ ಸಿಂಗ್, ಸುರೇಶ್​ ರೈನಾ ಪಾಲು ಬಹು ದೊಡ್ಡದಿದೆ. ಈ ತ್ರಿವಳಿ ಲೆಫ್ಟಿ ಬ್ಯಾಟ್ಸ್​ಮನ್​​ಗಳು ಟೀಮ್ ಇಂಡಿಯಾಗೆ ಬಿಗ್ ಅಡ್ವಾಂಟೇಜ್ ಆಗಿ ಮಾರ್ಪಟ್ಟಿದರು. ಹೀಗಾಗಿ ಈ ಬಾರಿಯ ಏಕದಿನ ವಿಶ್ವಕಪ್​​ನಲ್ಲಿ 3L ಫಾರ್ಮುಲಾ ಅನುಸರಿಸಬೇಕಾಗಿದೆ.

3L ಫಾರ್ಮುಲಾದಲ್ಲಿ ಯಾರನ್ನ ಬಳಸಿಕೊಳ್ಳುತ್ತೆ..?

ಏಕದಿನ ವಿಶ್ವಕಪ್​ನಲ್ಲಿ ಚಾನ್ಸ್​ ಗಿಟ್ಟಿಸುವ ಎಡಗೈ ಫ್ರಂಟ್ ರನ್ನರ್​​​ಗಳು ಅಂದ್ರೆ ಅದು ಇಶಾನ್ ಕಿಶನ್ ಆ್ಯಂಡ್ ರವೀಂದ್ರ ಜಡೇಜಾ. ಈ ಇಬ್ಬರ ಜೊತೆ ಜೊತೆಗೆ ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮಾ, ಸದ್ಯ ವಿಶ್ವಕಪ್​ ರೇಸ್​ನಲ್ಲಿ ಕಾಣಿಸಿಕೊಳ್ತಿರೋ ಆಟಗಾರರು. ಇದಕ್ಕೆ ಕಾರಣ ಟೀಮ್ ಇಂಡಿಯಾ ಕಾಂಬಿನೇಷನ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಟೀಮ್ ಇಂಡಿಯಾ ಟಾಪ್​​-4ನಲ್ಲಿ ಒಬ್ಬೇ ಒಬ್ಬ ಲೆಫ್ಟಿ ಬ್ಯಾಟರ್ ಇಲ್ಲ. ಹೀಗಾಗಿ ಇಬ್ಬರು ಎಡಗೈ ಬ್ಯಾಟ್ಸ್​ಮನ್​ಗಳಿಗೆ ಚಾನ್ಸ್​ ನೀಡಬೇಕಿದೆ. ಆಲ್​ರೌಂಡರ್​ ರವೀಂದ್ರ ಜಡೇಜಾರನ್ನ ಅಸ್ತ್ರವನ್ನಾಗಿ ಪರಿಸ್ಥಿತಿಗೆ ತಕ್ಕಂತೆ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದೇ ಇದೆ. ಒಟ್ನಲ್ಲಿ, ವಿಶ್ವಕಪ್​ ಗೆಲ್ಲಲು ಟೀಮ್ ಇಂಡಿಯಾಗೆ ಎಡಗೈ ಬ್ಯಾಟ್ಸ್​ಮನ್​​ಗಳ ಅನಿವಾರ್ಯತೇ ಇದ್ದೇ ಇದ್ದು, ಈ 3L ಫಾರ್ಮುಲಾ ಬಳಸಿಕೊಳ್ಳುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಕದಿನ ವಿಶ್ವಕಪ್​ ಗೆಲ್ಲಲು 3L ಫಾರ್ಮುಲಾ ಕೊಟ್ಟ ರವಿ ಶಾಸ್ತ್ರಿ; ಏನಿದು ಹೊಸ ಸೂತ್ರ..!?

https://newsfirstlive.com/wp-content/uploads/2023/08/Ravi-1.jpg

Load More