newsfirstkannada.com

ಸ್ಪಿನ್ ಮಾಂತ್ರಿಕನಿಗೆ ತೆರೆದ ವಿಶ್ವಕಪ್ ಬಾಗಿಲು; ಆದರೆ..! ಕ್ಯಾಪ್ಟನ್ ರೋಹಿತ್ ಹೇಳಿಕೆ ಹಿಂದಿನ ಮರ್ಮವೇನು?

Share :

19-09-2023

    ವಿಶ್ವಕಪ್​​ ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ

    ಸುಂದರ್​​ಗೆ ಬುಲಾವ್​ ನೀಡಿದ್ದರೂ ಫಸ್ಟ್​ ಚಾಯ್ಸ್ ಅಶ್ವಿನ್

    6 ವರ್ಷದಲ್ಲಿ ಕೇವಲ 2 ಏಕದಿನ ಪಂದ್ಯ ಆಡಿರುವ ಅಶ್ವಿನ್

ಏಷ್ಯಾ ಮಿನಿ ಸಮರ ಗೆದ್ದಿರುವ ಟೀಮ್ ಇಂಡಿಯಾದ ನೆಕ್ಸ್ಟ್​ ಟಾರ್ಗೆಟ್​. ಏಕದಿನ ವಿಶ್ವಕಪ್​ ಮಹಾ ಸಮರ. ಈ ಮಹಾ ಸಮರದಲ್ಲಿ ಅಶ್ವಿನ್​ಗೆ ಚಾನ್ಸ್​ ಸಿಕ್ಕಿಲ್ಲ. ಆದ್ರೀಗ ಈ ಮೆಗಾ ಟೂರ್ನಿಯಲ್ಲಿ ಆಫ್ ಸ್ಪಿನ್ನರ್ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಅದ್ಹೇಗೆ ಏನು..?

ಏಷ್ಯಾಕಪ್ ಎತ್ತಿ ಹಿಡಿದಿರುವ ಟೀಮ್ ಇಂಡಿಯಾ ಚಿತ್ತ, ಇದೀಗ ವಿಶ್ವಕಪ್​ನತ್ತ ನೆಟ್ಟಿದೆ. ಭಾರತದಲ್ಲೇ ನಡೆಯುತ್ತಿರುವ ಈ ಮೆಗಾ ಟೂರ್ನಿಯನ್ನ ಗೆಲ್ಲಲೇಬೇಕಾದ ಹಠದಲ್ಲಿರುವ ಟೀಮ್ ಇಂಡಿಯಾ, ಈಗಾಗಲೇ 15 ಸದಸ್ಯರ ತಂಡವನ್ನ ಪ್ರಕಟಿಸಿ 15 ದಿನಗಳೇ ಕಳೆದಿವೆ. ಆದ್ರೀಗ ಇದೇ ತಂಡದಲ್ಲಿ ಬದಲಾವಣೆ ಆಗೋ ಸಾಧ್ಯತೆ ದಟ್ಟವಾಗಿದೆ.

ಏಕದಿನ ವಿಶ್ವಕಪ್​ ಆರಂಭಕ್ಕೆ ಜಸ್ಟ್​ 16 ದಿನಗಳಷ್ಟೇ ಬಾಕಿ ಉಳಿದಿದ್ದು, ಈ ನಡುವೆ ಟೀಮ್ ಇಂಡಿಯಾ, ಮತ್ತೆ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗುವ ಬಗ್ಗೆ ಸ್ವತಃ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾನೇ ಬಿಚ್ಚಿಟ್ಟಿದ್ದಾರೆ. ಏಷ್ಯಾಕಪ್‌ ಫೈನಲ್ ಬಳಿಕ ಇಂಥದ್ದೊಂದು ಹಿಂಟ್​ ಕೊಟ್ಟಿರುವ ರೋಹಿತ್, ಏಕದಿನ ವಿಶ್ವಕಪ್​​ ರೇಸ್​ನಲ್ಲಿರುವ ಆಟಗಾರನ ಬಗ್ಗೆ ಸುಳಿವು ನೀಡಿದ್ದಾರೆ.

ನೋಡಿ.. ಪ್ರತಿಯೊಬ್ಬ ಸ್ಪಿನ್ ಆಲ್​ರೌಂಡರ್​ಗಳು ರೇಸ್​ನಲ್ಲಿದ್ದಾರೆ. ಸ್ಪಿನ್​​ ಆಲ್​ರೌಂಡರ್​ ಆಗಿ ಅಶ್ವಿನ್ ಸಹ ಯೋಜನೆಯಲ್ಲಿದ್ದಾರೆ. ನಾನು ಫೋನ್‌ನಲ್ಲಿ ಮಾತನಾಡುತ್ತಿದ್ದೇನೆ. ಕೊನೆ ಕ್ಷಣದಲ್ಲಿ ಅಕ್ಷರ್ ಪಟೇಲ್​ ಗಾಯಗೊಂಡ್ರು. ತಡರಾತ್ರಿ ಇಂಜುರಿಗೆ ತುತ್ತಾಗಿದ್ದರು. ಕೆಲವರಿಗೆ ಫೋನ್ ಮಾಡಲಾಯ್ತು. ವಾಷಿಂಗ್ಟನ್ ಲಭ್ಯವಿದ್ದರು. ಹೀಗಾಗಿ ಆ ಸ್ಥಾನ ತುಂಬಿದರು. ಅದೃಷ್ಟವಶಾತ್​ ಏಷ್ಯನ್ ಗೇಮ್ಸ್ ತಂಡದಲ್ಲಿದ್ದ ಸುಂದರ್, ಬೆಂಗಳೂರಿನ ತರಬೇತಿ ಶಿಬಿರದ ಭಾಗವಾಗಿ ಫಿಟ್ ಆಗಿದ್ದರು. ಫೀಲ್ಡ್​ನಲ್ಲಿ ಟೈಮ್ ಸ್ಪೆಂಡ್ ಮಾಡಿದ್ದರು. ಹೀಗಾಗಿ ಆತನನ್ನ ಕರೆತಂದೆವು. ನಾನು ಆಟಗಾರರ ಬಗ್ಗೆ ಹಾಗೂ ಆಟಗಾರರ ರೋಲ್​​ಗಳ ಬಗ್ಗೆ ತುಂಬಾ ಸ್ಪಷ್ಟವಾಗಿದ್ದೇನೆ. ನಾನು ಎಲ್ಲರ ಬಗ್ಗೆಯೂ ಹೇಳುತ್ತಿದ್ದೇನೆ. ನಾನು ಹೆಸರುಗಳ ಬಗ್ಗೆ ಹೇಳಲ್ಲ. ಆದರೆ ಎಲ್ಲರೂ ಲೂಪ್​ನಲ್ಲಿದ್ದಾರೆ-ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್
ಹಿಟ್​ಮ್ಯಾನ್ ರೋಹಿತ್ ನೀಡಿರುವ ಈ ಒಂದು ಹೇಳಿಕೆಯೇ ವಿಶ್ವಕಪ್​​​ ತಂಡದಲ್ಲಿನ ಬದಲಾವಣೆಗೆ ಹಿಂಟ್​​ಗೆ ಕಾರಣವಾಗಿರುವುದು. ಇದಕ್ಕೆ ಕಾರಣವೂ ಇದೆ. ಅದು ಆಲ್​​ರೌಂಡರ್ ಅಕ್ಷರ್​ ಪಟೇಲ್ ಇಂಜುರಿ.

ಅಕ್ಷರ್​ ಇಂಜುರಿ.. ವಿಶ್ವಕಪ್​ ತಂಡದಲ್ಲಿ ಆಗುತ್ತಾ ಬದಲಾವಣೆ?

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿರುವ ಅಕ್ಷರ್ ಪಟೇಲ್, ಇಂಜುರಿಯಿಂದ ಚೇತರಿಸಿಕೊಳ್ಳಲು 7 ರಿಂದ 10 ದಿನಗಳು ಬೇಕಾಗಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅಕಸ್ಮಾತ್​​, ಏಕದಿನ ವಿಶ್ವಕಪ್​​ಗೂ ಮುನ್ನ ಸಂಪೂರ್ಣ ಚೇತರಿಸಿಕೊಳ್ಳದಿದ್ರೆ, ವಿಶ್ವಕಪ್​​ ತಂಡದಲ್ಲಿ ಬದಲಾವಣೆಯಾಗೋದು ಗ್ಯಾರಂಟಿ.

ಅಶ್ವಿನ್​​ಗೆ ಓಪನ್​ ಇದೆ ವಿಶ್ವಕಪ್​ ತಂಡದಲ್ಲಿ ಸ್ಥಾನ..!

ಹಿಟ್​ಮ್ಯಾನ್ ರೋಹಿತ್ ಶರ್ಮಾನೇ ಹೇಳಿದಂತೆ ವಿಶ್ವಕಪ್​ ತಂಡದಲ್ಲಿ ಸ್ಪಿನ್ ಆಲ್​ರೌಂಡರ್​ಗಳ ಬಾಗಿಲು ಓಪನ್ ಇದೆ. ಹೀಗಾಗಿ ಆಪ್​ ಸ್ಪಿನ್ನರ್ ಕೋಟಾದಲ್ಲಿ ಅಶ್ವಿನ್​ ಹಾಗೂ ವಾಷಿಂಗ್ಟನ್ ಸುಂದರ್​ಗೆ ನೇರ ಪೈಪೋಟಿ ನಡೆಯಲಿದೆ. ಈ ಪೈಪೋಟಿಯಲ್ಲಿ ರವಿಚಂದ್ರನ್ ಅಶ್ವಿನ್​ ಸ್ಥಾನ ಪಡೆಯೋ ಸಾಧ್ಯತೆ ಹೆಚ್ಚಿದೆ. ಅಕ್ಷರ್ ಇಂಜುರಿ ಬೆನ್ನಲ್ಲೇ ಟೀಮ್ ಮ್ಯಾನೇಜ್​ಮೆಂಟ್ ಮಾತುಕತೆ ನಡೆಸಿದ್ದು ಅಶ್ವಿನ್ ಜೊತೆ. ಅಶ್ವಿನ್ ಕ್ರಿಕೆಟ್​ನಿಂದ ದೂರ ಉಳಿದಿದ್ದ ಕಾರಣ, ಮ್ಯಾಚ್​​ಗೆ ರೆಡಿಯಾಗಿದ್ದ ವಾಷಿಂಗ್ಟನ್​​ಗೆ ಬುಲಾವ್ ನೀಡಲಾಯ್ತು. ಈ ಕಾರಣಕ್ಕೆ ವಿಶ್ವಕಪ್​​​​​​​​​​​​​​​​ನಲ್ಲಿ ಬದಲಾವಣೆಗೆ ಮುಂದಾದರೆ ಅಶ್ವಿನ್ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ.

6 ವರ್ಷದಿಂದ 2 ಏಕದಿನ ಪಂದ್ಯ..ಅಶ್ವಿನ್​ಗೆ ಯಾಕೆ ಚಾನ್ಸ್..?

6 ವರ್ಷಗಳಿಂದ ಕೇವಲ 2 ಏಕದಿನ ಪಂದ್ಯಗಳನ್ನಾಡಿದ ಅಶ್ವಿನ್​ಗೆ ಯಾಕೆ ಚಾನ್ಸ್​ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿರಬಹುದು. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿ ಶ್ರೇಷ್ಠ ಆಫ್ ಸ್ಪಿನ್ನರ್ ಎಂದಾಕ್ಷಣ ಕಾಣಿಸಿಕೊಳ್ಳುವುದು ಅಶ್ವಿನ್ ಮಾತ್ರ. ಭಾರತೀಯ ಕಂಡೀಷನ್ಸ್​ನ ಚೆನ್ನಾಗಿ ತಿಳಿದಿರುವ ಅನುಭವಿ ತಂಡದಲ್ಲಿದ್ರೆ, ಟೀಮ್ ಇಂಡಿಯಾಗೆ ಹೆಚ್ಚುವರಿ ಲಾಭ ಆಗೋದು ಗ್ಯಾರಂಟಿ. ಈ ನಿಟ್ಟಿನಲ್ಲೇ ರೋಹಿತ್, ರೆಗ್ಯುಲರ್ ಆಗಿ ಅಶ್ವಿನ್​ ಜೊತೆ ಮಾತುಕತೆಯೂ ನಡೆಸ್ತಿದ್ದಾರೆ. ಇದರ ಹಿಂದಿನ ಸ್ಪಷ್ಟ ಉದ್ದೇಶ ಅಕ್ಷರ್​ ಅಲಭ್ಯರಾದ್ರೆ ಅಶ್ವಿನ್​ಗೆ ಚಾನ್ಸ್ ನೀಡೋದು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ.

ಒಂದೆಡೆ ರೋಹಿತ್, ಅಶ್ವಿನ್ ಲಭ್ಯತೆಯ ಸುಳಿವನ್ನ ನೀಡಿದ್ರೆ, ಮತ್ತೊಂದೆಡೆ ಆರ್​.ಅಶ್ವಿನ್, ನಾಳೆ ಟೀಮ್ ಇಂಡಿಯಾಗೆ ನನ್ನ ಸೇವೆಬೇಕಿದ್ರೆ, ನೂರರಷ್ಟು ಎಫರ್ಟ್ ಹಾಕುತ್ತೇನೆ ಎಂಬ ಸಂದೇಶವನ್ನೂ ನೀಡಿದ್ದಾರೆ. ಇದೆಲ್ಲವೂ ಅಕ್ಷರ್ ಪಟೇಲ್ ಇಂಜುರಿ ರಿಕವರಿ ಮೇಲೆಯೇ ನಿರ್ಣಯವಾಗಲಿದೆ. ಒಟ್ಟಿನಲ್ಲಿ ತಂಡದಲ್ಲಿ ಬದಲಾವಣೆ ಮಾಡಲು ಸೆಪ್ಟೆಂಬರ್ 28 ರವರೆಗೆ ಅವಕಾಶ ಇದೆ. ಹೀಗಾಗಿ ಅಕ್ಷರ್​​ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳದಿದ್ರೆ ಸುಂದರ್ ಅಥವಾ ಅಶ್ವಿನ್ ತಂಡಕ್ಕೆ ಎಂಟ್ರಿ ನೀಡೋದು ಫಿಕ್ಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪಿನ್ ಮಾಂತ್ರಿಕನಿಗೆ ತೆರೆದ ವಿಶ್ವಕಪ್ ಬಾಗಿಲು; ಆದರೆ..! ಕ್ಯಾಪ್ಟನ್ ರೋಹಿತ್ ಹೇಳಿಕೆ ಹಿಂದಿನ ಮರ್ಮವೇನು?

https://newsfirstlive.com/wp-content/uploads/2023/09/ASHWIN.jpg

Load More