newsfirstkannada.com

ಅಶ್ವಿನ್ ಈ ವಿಚಾರದಲ್ಲಿ ಅನಿಲ್​ ಕುಂಬ್ಳೆ ರೆಕಾರ್ಡ್​ ಬ್ರೇಕ್ ಮಾಡಲ್ವಂತೆ.. ಕಾರಣ ಕೇಳಿದ್ರೆ ಆಶ್ಚರ್ಯವಾಗುತ್ತೆ..!

Share :

21-07-2023

    ಟೀಮ್ ಇಂಡಿಯಾದ ಮೋಸ್ಟ್​ ಸಕ್ಸಸ್​ ಫುಲ್​ ಆಟಗಾರ ಅಶ್ವಿನ್​

    ಅಶ್ವಿನ್​ ಇಲ್ಲಿವರೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ 486 ವಿಕೆಟ್ ಪಡೆದ ಸ್ಪಿನ್ನರ್

    ಈ ವಿಚಾರದಲ್ಲಿ ಅಶ್ವಿನ್​ಗೆ ಒಂದು ಸಲಾಂ ಹೇಳಲೇಬೇಕು ಏಕೆ.?

ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಉರುಳಿಸಿದ ಖ್ಯಾತಿ ಸಿಗುತ್ತೆ ಅಂದ್ರೆ, ಯಾರ್ ಬಿಡ್ತಾರೆ ಹೇಳಿ. ಆದ್ರೆ, ಈ ವಿಚಾರದಲ್ಲಿ ಅಶ್ವಿನ್ ನಿಜಕ್ಕೂ ವಿಭಿನ್ನ. ಅದ್ಯಾಕೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

ಆರ್.ಅಶ್ವಿನ್ ಟೀಮ್ ಇಂಡಿಯಾದ ಆಫ್ ಸ್ಪಿನ್ನರ್. ರೆಡ್ ಬಾಲ್ ಕ್ರಿಕೆಟ್​ನ ರಿಯಲ್ ಗೇಮ್ ಚೇಂಜರ್. ರಿಯಲ್ ವಿನ್ನರ್ ಆಗಿರೋ ಆರ್. ಅಶ್ವಿನ್, ದಿಗ್ಗಜ ಅನಿಲ್ ಕುಂಬ್ಳೆಯ ಕಟ್ಟಾಭಿಮಾನಿ. ಈಗಾಗಲೇ ಅನಿಲ್ ಕುಂಬ್ಳೆಯ ಹಲವು ದಾಖಲೆಗಳನ್ನ ಚಿಂದಿ ಮಾಡಿರೋ ಅಶ್ವಿನ್, ಫಾಸ್ಟೆಸ್ಟ್ 450 ವಿಕೆಟ್ ಗಳಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸದ್ಯ ಟೆಸ್ಟ್ ಕ್ರಿಕೆಟ್​ನಲ್ಲಿ 486 ವಿಕೆಟ್ ಉರುಳಿಸಿರುವ ಅಶ್ವಿನ್​ಗೆ ಅನಿಲ್ ಕುಂಬ್ಳೆಯ 619 ವಿಕೆಟ್ ರೆಕಾರ್ಡ್ ಬ್ರೇಕ್ ಮಾಡಲು 133 ವಿಕೆಟ್ ಬೇಕಾಗಿದೆ.

ಇದನ್ನು ಓದಿ: ಆಹ್ಹಾ.. ಚಗಳಿ ಗೊಜ್ಜು..! ಮಾವಿನ ಮರವೇರಿ.. ಕೆಂಪಿರುವೆ ತಂದು.. ಚೆಟ್ನಿ ಮಾಡಿ ರೊಟ್ಟಿ ಜೊತೆ ಸವಿದ ಡ್ಯಾನ್ಸರ್ ಕಿಶನ್..! ವಿಡಿಯೋ

ಅಶ್ವಿನ್ ಕನಿಷ್ಠ 20 ಟೆಸ್ಟ್ ಪಂದ್ಯಗಳನ್ನಾಡಿದರೆ, ಅನಿಲ್ ಕುಂಬ್ಳೆಯ ರೆಕಾರ್ಡ್ ಬ್ರೇಕ್ ಆಗುತ್ತೆ ಅನ್ನೋದು ಕ್ರಿಕೆಟ್ ಪಂಡಿತರ ಲೆಕ್ಕಚಾರ. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗ್ತಾರೆ. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ಅಶ್ವಿನ್, ಅನಿಲ್ ಕುಂಬ್ಳೆಯ ರೆಕಾರ್ಡ್ ದಾಖಲೆ ಬ್ರೇಕ್ ಮಾಡೋ ಅವಕಾಶ ಸಿಕ್ಕರೂ ಮಾಡಲ್ವಂತೆ. ದಿಗ್ಗಜ ಕುಂಬ್ಳೆ ಮೇಲಿನ ಅಭಿಮಾನದಿಂದ 618 ವಿಕೆಟ್ ಪಡೆದ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಪಡೆಯೋದಾಗಿ ಟೀಮ್ ಇಂಡಿಯಾದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹೇಳಿಕೊಂಡಿದ್ದಾರೆ.

ಈ ವಿಚಾರದಲ್ಲಿ ಅಶ್ವಿನ್​ಗೆ ಒಂದು ಸಲಾಂ ಹೇಳಲೇಬೇಕು. ಯಾಕಂದ್ರೆ, ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಮೈಲುಗಲ್ಲು ಬಹುತೇಕ ಆಟಗಾರರಿಗೆ ಹೆಮ್ಮೆಯ ವಿಷಯ. ಆದರೆ ಅಶ್ವಿನ್​ಗೆ ಮೈಲುಗಲ್ಲು ನಿರ್ಮಿಸುವುದಕ್ಕಿಂತ ಅಭಿಮಾನವೇ ಮುಖ್ಯ ಎಂಬ ಧೋರಣೆ ನಿಜಕ್ಕೂ ಮೆಚ್ಚುವಂತದ್ದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಶ್ವಿನ್ ಈ ವಿಚಾರದಲ್ಲಿ ಅನಿಲ್​ ಕುಂಬ್ಳೆ ರೆಕಾರ್ಡ್​ ಬ್ರೇಕ್ ಮಾಡಲ್ವಂತೆ.. ಕಾರಣ ಕೇಳಿದ್ರೆ ಆಶ್ಚರ್ಯವಾಗುತ್ತೆ..!

https://newsfirstlive.com/wp-content/uploads/2023/07/ASHWIN_ANIL_KUMBLE.jpg

Load More