newsfirstkannada.com

ವಿಶ್ವಕಪ್​ ಸನಿಹದಲ್ಲಿ ಭಯ ಹುಟ್ಟಿಸಿದ ಸ್ಟಾರ್ ಆಟಗಾರ: ಬ್ಯಾಡ್​​ಫಾರ್ಮ್​​ನಲ್ಲಿ ನಂಬಿಗಸ್ಥ ಆಟಗಾರ; ಯಾರವರು..?

Share :

17-09-2023

    ಮೊನಚಿಲ್ಲದ ಬೌಲಿಂಗ್​​​​​..ಸೌಂಡ್ ಮಾಡ್ತಿಲ್ಲ ಬ್ಯಾಟ್​​​..!

    ಬ್ಯಾಡ್​ಫಾರ್ಮ್​ ಕಂಟಿನ್ಯೂ ಆದ್ರೆ ಭಾರತದ ಕಥೆಯೇನು?

    ಪ್ರಸಕ್ತ ಏಷ್ಯಾಕಪ್​​ನಲ್ಲಿ ಅಟ್ಟರ್ ಪ್ಲಾಫ್​ ಶೋ

ಇಲ್ಲಿಯತನಕ ಎಲ್ಲವೂ ಸರಿಯಾಗಿತ್ತು. ಏಕದಿನ ವಿಶ್ವಕಪ್​​​ ಸಮೀಪಿಸಿದ್ದೇ ಬಂತು. ಸ್ಟಾರ್ ಆಲ್​ರೌಂಡರ್​ ರವೀಂದ್ರ ಜಡೇಜಾ ಪರ್ಫಾಮೆನ್ಸ್​ ಆತಂಕ ಹುಟ್ಟಿಸಿದೆ. ನಂಬಿಗಸ್ಥ ಆಟಗಾರನೇ ಬ್ಯಾಡ್​​ಫಾರ್ಮ್​ ಸುಳಿಗೆ ಸಿಲುಕಿದ್ರೆ ತಂಡದ ಗತಿಯೇನು ಅಂತ ಫ್ಯಾನ್ಸ್​ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ತವರಿನಲ್ಲಿ ನಡೆಯುವ ಒನ್ಡೇ ವಿಶ್ವಕಪ್​ಗೆ ಬಿಸಿಸಿಐ ಪರ್ಫೆಕ್ಟ್​​ ತಂಡವನ್ನೇನೋ ಸಜ್ಜುಗೊಳಿಸಿದೆ. ಪ್ಲೇಯರ್ಸ್​ ಪರ್ಫೆಕ್ಟ್ ಆಟವಾಡುವಲ್ಲಿ ಫೇಲಾಗಿದ್ದಾರೆ. ವಿಶ್ವಕಪ್​ ಫೆಸ್ಟಿವಲ್​ಗೆ ಕೌಂಟ್​ಡೌನ್​ ಶುರುವಾಗಿದೆ. ಇಂತಹ ಕ್ರೂಷಿಯಲ್ ಟೈಮಲ್ಲೆ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಬ್ಯಾಡ್​ಫಾರ್ಮ್​ ಸುಳಿಗೆ ಸಿಲುಕಿದ್ದಾರೆ. ಇದು ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್​ಕೋಚ್​ ರಾಹುಲ್ ದ್ರಾವಿಡ್ ಅವರಿಗೆ ದೊಡ್ಡ ಟೆನ್ಷನ್ ತಂದೊಡ್ಡಿದೆ.

ವಿಶ್ವಕಪ್​ ಸನಿಹದಲ್ಲಿ ಜಡೇಜಾ ಹಳೇ ಖದರ್ ಮಾಯ

ಕನ್ಸಿಸ್ಟನ್ಸಿ ಹಾಗೂ ನಂಬಿಕೆಗೆ ಇನ್ನೊಂದು ಹೆಸರೇ ರವೀಂದ್ರ ಜಡೇಜಾ. ಬ್ಯಾಟಿಂಗ್​​ ಹಾಗೂ ಬೌಲಿಂಗ್​​ನಲ್ಲಿ ಸದಾ ಮ್ಯಾಜಿಕ್​​ ಮಾಡಬಲ್ಲ ಕಿಲಾಡಿ. ಎಂತಹ ಟಫ್​​ ಸಿಚುವೇಶನ್ ಇರಲಿ, ಎಲ್ಲವನ್ನೂ ಮೀರಿ ನಿಲ್ಲುವ ಕೆಪಾಸಿಟಿ ಜಡ್ಡುಗಿದೆ. ಹಾಗಾಗಿನೇ ಟೀಮ್ ಇಂಡಿಯಾ ಪಾಲಿಗೆ ಜಡೇಜಾ ಆಪತ್ಬಾಂಧವ. ಬ್ಯಾಟ್​ ಹಿಡಿದ್ರೆ ಸಿಕ್ಸರ್​​​ ಬೌಂಡ್ರಿ ಮೊರೆತ, ಫೀಲ್ಡಿಂಗಿಳಿದ್ರೆ ಪಾದರಸದ ಚಲನೆ, ಇನ್ನೂ ಬೌಲಿಂಗ್​ಗಿಳಿದ್ರೆ ವಿಕೆಟ್​ ಹಂಟ್​ ಪಕ್ಕಾ.

ಇಂತಹ ರವೀಂದ್ರ ಜಡೇಜಾ ಹಳೇ ಟಚ್​ ಕಳೆದುಕೊಂಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ಮೊದಲಿನಂತೆ ಕಮಾಲ್ ಮಾಡ್ತಿಲ್ಲ. ಪ್ರಸಕ್ತ ಏಷ್ಯಾಕಪ್ ಟೂರ್ನಿಯಲ್ಲಿ ಜಡೇಜಾರ ಪರದಾಟ ಬಯಟಾಬಯಲಾಗಿದೆ. ಅದು ವಿಶ್ವಕಪ್​​​ ಸನಿಹದಲ್ಲಿ ಸೌರಾಷ್ಟ್ರ ಪುತ್ತರ್​​ ಬ್ಯಾಡ್​ಫಾರ್ಮ್​ ಸುಳಿಗೆ ಸಿಲುಕಿದ್ದು ಭಾರತಕ್ಕೆ ದೊಡ್ಡ ಸೆಟ್​ಬ್ಯಾಕ್ ಆಗಿದೆ.

ಪ್ರಸಕ್ತ ಏಷ್ಯಾಕಪ್​​ನಲ್ಲಿ ಜಡೇಜಾ ಸಾಧನೆ

ಪ್ರಸಕ್ತ ಏಷ್ಯಾಕಪ್​​ನಲ್ಲಿ 5 ಪಂದ್ಯಗಳನ್ನಾಡಿರೋ ರವೀಂದ್ರ ಜಡೇಜಾ ಬರೀ 25 ರನ್​​ ಕಲೆ ಹಾಕಿದ್ದಾರೆ. ಇನ್ನೂ ಬೌಲಿಂಗ್​​ದು ಅದೇ ಕಥೆ. 4.21ರ ಎಕಾನಮಿಯಲ್ಲಿ ಕೇವಲ 6 ವಿಕೆಟ್​​ ಬೇಟೆಯಾಡಿದ್ದಾರೆ. ಏನೋ ಒಂದು ಟೂರ್ನಿ ಫೇಲ್ಯೂರ್​​​. ಮತ್ತೆ ಸರಿಹೋಗ್ತಾರೆ ಅಂದುಕೊಂಡು ಸುಮ್ಮನಾಗಬಹುದಿತ್ತು. ಆದ್ರೆ ಜಡೇಜಾ ಬರೀ ಏಷ್ಯಾಕಪ್​​ ಮಾತ್ರವಲ್ಲ. ಕಳೆದ ಒಂದು ವರ್ಷದಿಂದ ಕಳಪೆ ಆಟವಾಡಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

2023 ರಲ್ಲಿ ರವೀಂದ್ರ ಜಡೇಜಾ ಪ್ರದರ್ಶನ

ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಈ ವರ್ಷ ಒಟ್ಟು 11 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆ ಪೈಕಿ 23.00 ರ ಎವರೇಜ್​​ನಲ್ಲಿ ಬರೀ 138 ರನ್​ ಗಳಿಸಿದ್ದಾರೆ. ಬೌಲಿಂಗ್​​ನಲ್ಲಿ 11 ವಿಕೆಟ್​​​ ಪಡೆದಿದ್ದಾರೆ.

ಆಸೀಸ್ ಸರಣಿಯಲ್ಲಾದ್ರೂ ಕಮ್​ಬ್ಯಾಕ್ ಮಾಡ್ತಾರಾ ಜಡ್ಡು?

ಸ್ಟಾರ್​ ಆಲ್​ರೌಂಡರ್​​​ ಪ್ರಸಕ್ತ ಏಷ್ಯಾಕಪ್ ಸೇರಿ 2023ರ ಏಕದಿನ ಕ್ರಿಕೆಟ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಫೇಲಾಗಿದ್ದಾರೆ. ನಿಜ! ಹಾಗೆಂದ ಮಾತ್ರಕ್ಕೆ ಇಲ್ಲಿಗೆ ಎಲ್ಲವೂ ಮುಗಿದು ಹೋಯ್ತು ಎಂದಲ್ಲ. ವಿಶ್ವಕಪ್​​​ಗೂ ಮುನ್ನ ಫಾರ್ಮ್​ಕಂಡುಕೊಳ್ಳಲು ಜಡ್ಡುಗೆ ಒಂದು ಅವಕಾಶವಿದೆ. ಸೆಪ್ಟೆಂಬರ್​ 22 ರಿಂದ ಇಂಡೋ-ಆಸೀಸ್​​ ಏಕದಿನ ಸರಣಿ ಆರಂಭಗೊಳ್ಳಲಿದೆ. ಲಯಕ್ಕೆ ಮರಳಲು ಜಡ್ಡುಗೆ ಇದು ಬೆಸ್ಟ್​ ಚಾನ್ಸ್​​. ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ದೇ ಆದ್ದಲ್ಲಿ ಭಾರತಕ್ಕೆ ಬಿಗ್ ಬೂಸ್ಟ್​​​ ಸಿಕ್ಕಂತಾಗಲಿದೆ. ಆತ್ಮವಿಶ್ವಾದಿಂದಲೇ ಏಕದಿನ ವಿಶ್ವಕಪ್​​ ಅಖಾಡಕ್ಕೆ ಧುಮುಕಬಹುದು. ಹಾಗಾಗಲಿ ಎಂಬುದು ಎಲ್ಲಾ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​ ಸನಿಹದಲ್ಲಿ ಭಯ ಹುಟ್ಟಿಸಿದ ಸ್ಟಾರ್ ಆಟಗಾರ: ಬ್ಯಾಡ್​​ಫಾರ್ಮ್​​ನಲ್ಲಿ ನಂಬಿಗಸ್ಥ ಆಟಗಾರ; ಯಾರವರು..?

https://newsfirstlive.com/wp-content/uploads/2023/09/JADEJA-3.jpg

Load More