newsfirstkannada.com

ಆಸ್ಟ್ರೇಲಿಯಾ ವಿರುದ್ಧ WTC ಫೈನಲ್​​.. ಹೊಸ ದಾಖಲೆ ಮುರಿದ ರವೀಂದ್ರ ಜಡೇಜಾ

Share :

10-06-2023

    ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಪಟ್ಟಕ್ಕಾಗಿ ಪೈಪೋಟಿ

    ಫೈನಲ್​​ನಲ್ಲಿ ಆಸೀಸ್​​, ಟೀಂ ಇಂಡಿಯಾ ಸೆಣಸಾಟ..!

    ಹೊಸ ದಾಖಲೆ ಬರೆದ ಸ್ಟಾರ್​​ ಆಲ್​ರೌಂಡರ್ ಜಡೇಜಾ

ಲಂಡನ್​​: ಸದ್ಯ ನಡೆಯುತ್ತಿರೋ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​​​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಸ್ಟಾರ್​​ ಆಲ್‌ರೌಂಡರ್ ರವೀಂದ್ರ ಜಡೇಜಾ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಬಿಷನ್ ಸಿಂಗ್ ಬೇಡಿ ದಾಖಲೆಯನ್ನು ಮುರಿದಿದ್ದಾರೆ.

ಆಸ್ಟ್ರೇಲಿಯಾದ 2ನೇ ಇನ್ನಿಂಗ್ಸ್‌ನಲ್ಲಿ ಜಡೇಜಾ ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್​​​ ವಿಕೆಟ್​ ಪಡೆದರು. ಇದರೊಂದಿಗೆ ಜಡೇಜಾ 65 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 267 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ 67 ಪಂದ್ಯಗಳಲ್ಲಿ 266 ವಿಕೆಟ್‌ ಪಡೆದಿದ್ದ ದಾಖಲೆಯನ್ನು ಬ್ರೇಕ್​​ ಮಾಡಿದ್ದಾರೆ.

ಶ್ರೀಲಂಕಾದ ರಂಗನಾ ಹೆರಾತ್ 93 ಪಂದ್ಯಗಳಲ್ಲಿ 433 ವಿಕೆಟ್, ಡೇನಿಯಲ್ ವೆಟ್ಟೋರಿ 113 ಪಂದ್ಯಗಳಲ್ಲಿ 362 ವಿಕೆಟ್ ಮತ್ತು ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್ 86 ಪಂದ್ಯಗಳಲ್ಲಿ 297 ವಿಕೆಟ್ ಪಡೆದಿದ್ದಾರೆ. ಇವರ ನಂತರದ ಸ್ಥಾನದಲ್ಲಿರೋ ಜಡೇಜಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 4ನೇ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಟ್ರೇಲಿಯಾ ವಿರುದ್ಧ WTC ಫೈನಲ್​​.. ಹೊಸ ದಾಖಲೆ ಮುರಿದ ರವೀಂದ್ರ ಜಡೇಜಾ

https://newsfirstlive.com/wp-content/uploads/2023/06/Jadeja-1.jpg

Load More