ವಿಂಡೀಸ್ ವಿರುದ್ಧ ಏಕದಿನ ಸೀರೀಸ್
ಕ್ಯಾಪ್ಟನ್ ರೋಹಿತ್, ಕೊಹ್ಲಿಗೆ ರೆಸ್ಟ್..!
ಈ ಬಗ್ಗೆ ರವೀಂದ್ರ ಜಡೇಜಾ ಏನಂದ್ರು?
ಇತ್ತೀಚೆಗೆ ನಡೆದ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ಕಾರಣ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಪಂದ್ಯದಿಂದ ಹೊರಗುಳಿದಿದ್ದೇ ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಮಾತಾಡಿದ್ದಾರೆ.
ಈ ಸಂಬಂಧ ಮಾತಾಡಿದ ರವೀಂದ್ರ ಜಡೇಜಾ, ಏಷ್ಯಾಕಪ್ & ವಿಶ್ವಕಪ್ಗೆ ಮುನ್ನವೇ ನಾವು ಪ್ರಯೋಗ ಮಾಡಲು ಇರೋ ಏಕೈಕ ಸರಣಿ ಇದು. ಹೀಗಾಗಿ ರೋಹಿತ್, ಕೊಹ್ಲಿಗೆ 2ನೇ ಏಕದಿನ ಪಂದ್ಯದಲ್ಲಿ ರೆಸ್ಟ್ ನೀಡಲಾಗಿತ್ತು ಎಂದರು.
ತಂಡದ ಮುಂದಿನ ಪ್ಲಾನ್ಸ್ ಏನು? ಎಂಬುದು ಕ್ಯಾಪ್ಟನ್, ಮ್ಯಾನೇಜ್ಮೆಂಟ್ಗೆ ಗೊತ್ತಿದೆ. ನನಗೂ ಹೆಚ್ಚು ಪಂದ್ಯಗಳನ್ನು ಆಡಬೇಕು ಎಂದು ಆಸೆ. ಆದರೆ, ಯುವಕರಿಗೆ ಚಾನ್ಸ್ ನೀಡಬೇಕಿರುವುದು ನಮ್ಮ ಜವಾಬ್ದಾರಿ. ನನ್ನನ್ನ ತಂಡದಿಂದ ಹೊರಗಿಟ್ಟರೆ ತ್ಯಾಗ ಮಾಡಲು ಸಿದ್ಧನಿದ್ದೇನೆ. ಹೀಗಾಗಿ ಯಾವುದೇ ಗೊಂದಲ ಇಲ್ಲ ಎಂದರು.
ತಂಡದಲ್ಲಿ ಯಾವುದೇ ಗೊಂದಲ ಇಲ್ಲ ಎಂದ ಜಡ್ಡು!
ನಾವು ವಿಭಿನ್ನ ಪ್ರಯೋಗ ನಡೆಸುತ್ತಿದ್ದೇವೆ. ಎಲ್ಲಾ ಪಿಚ್ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ. ಹೀಗಾಗಿ ನಾವು ಸೋತಿಲ್ಲ. ಒಂದು ಸೋಲಿನಿಂದ ಏನು ಆಗುವುದಿಲ್ಲ, ನಮ್ಮಲ್ಲಿ ಯಾವುದೇ ಗೊಂದಲ ಕೂಡ ಇಲ್ಲ ಎಂದರು.
ವೆಸ್ಟ್ ಇಂಡೀಸ್ ಯುವಕರ ತಂಡ. ಇನ್ನೂ ಕಲಿಯುತ್ತಿದ್ದಾರೆ, ಅತ್ಯುತ್ತಮ ಆಟ ಆಡುತ್ತಿದ್ದಾರೆ. ತಂಡದಲ್ಲಿ ಉತ್ತಮ ಪ್ರತಿಭೆ ಇದೆ. ಹೆಚ್ಚು ಆಡಬೇಕು, ಗೆಲ್ಲಬೇಕು. ನಮ್ಮಿಂದ ವೆಸ್ಟ್ ಇಂಡೀಸ್ ಕಲಿಯುತ್ತಿದೆ, ನಾವು ಅವರಿಂದ ಕಲಿಯುತ್ತಿದ್ದೇವೆ ಎಂದು ಭಾವಿಸುತ್ತೇನೆ ಎಂದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ