newsfirstkannada.com

ಸಾಲಗಾರರಿಗೆ ಬಿಗ್‌ ರಿಲೀಫ್ ಕೊಟ್ಟ RBI; ಹಣದುಬ್ಬರದ ಮೇಲೆ ಅರ್ಜುನನಂತೆ ಕಣ್ಣಿಡಲು ನಿರ್ಧಾರ

Share :

Published June 8, 2023 at 9:29am

    ಸಾಲಗಾರರಿಗೆ ಸಿಹಿ ಸುದ್ದಿ ಕೊಟ್ಟ ರಿಸರ್ವ್ ಬ್ಯಾಂಕ್

    RBI ರೆಪೋ ದರ ಏರಿಕೆ ಮಾಡಿದ್ರೆ ಏನೇನಾಗುತ್ತೆ?

    ಏಪ್ರಿಲ್ ತಿಂಗಳಲ್ಲೂ ರೆಪೋ ದರ ಹೆಚ್ಚಳ ಮಾಡಿಲ್ಲ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್ ಮತ್ತೊಮ್ಮೆ ದೇಶದ ಸಾಲಗಾರರಿಗೆ ಸಿಹಿ ಸುದ್ದಿ ಕೊಟ್ಟಿದೆ. ದ್ವೈಮಾಸಿಕ ಹಣಕಾಸು ನೀತಿಯಲ್ಲಿ RBI ತನ್ನ ರೆಪೋ ದರವನ್ನು ಬದಲಾವಣೆ ಮಾಡದಿರಲು ನಿರ್ಧರಿಸಿದೆ. ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಯೋದ್ರಿಂದ ಸಾಲಗಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಕಳೆದ ಎರಡು ದಿನಗಳಿಂದ ರೆಪೋ ದರ ಏರಿಕೆ ಸಂಬಂಧ ಆರ್‌ಬಿಐ ಮಹತ್ವದ ಸಭೆ ನಡೆಸಿತ್ತು. ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಿಸರ್ವ್ ಬ್ಯಾಂಕ್ ಗರ್ವನರ್ ಶಕ್ತಿಕಾಂತ್ ದಾಸ್, ದ್ವೈಮಾಸಿಕ ಹಣಕಾಸು ನೀತಿ ಪ್ರಕಟ ಮಾಡಿದರು. ಜೊತೆಗೆ ದೇಶದ ಹಣದುಬ್ಬರದ ಮೇಲೆ ನಾವು ಮಹಾಭಾರತದ ಅರ್ಜುನನಂತೆ ಕಣ್ಣಿಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಸದ್ಯ ದೇಶದಲ್ಲಿ ಶೇಕಡಾ 6.5ರಷ್ಟು ರೆಪೋ ರೇಟ್ ಇದೆ. 6.5% ನಲ್ಲೇ ರೆಪೋ ದರವನ್ನು ಬದಲಾಯಿಸದೆ ಇರಿಸಲು ನಿರ್ಧರಿಸಲಾಗಿದೆ. ಸ್ಟ್ಯಾಂಡಿಂಗ್ ಡೆಪಾಸಿಟ್ ಅಂದ್ರೆ ಸ್ಥಾಯಿ ಠೇವಣಿ 6.25%, ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಮತ್ತು ಬ್ಯಾಂಕ್ ದರ 6.75%, ವಾರ್ಷಿಕ ಇನ್ಫ್ಲೇಷನ್ 5% ನಿಗದಿಯಾಗಿದೆ.

ಭಾರತದ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರ ಸದ್ಯ ನಿಯಂತ್ರಣದಲ್ಲಿದೆ. ಈ ಕಾರಣಕ್ಕೆ ರೆಪೋ ದರ ಏರಿಕೆ ಮಾಡದಿರಲು ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲೂ RBI ರೆಪೋ ದರವನ್ನು ಹೆಚ್ಚಳ ಮಾಡಿರಲಿಲ್ಲ. ರೆಪೋ ದರ ಏರಿಕೆಯಿಂದ ಬ್ಯಾಂಕ್ ಸಾಲದ ಬಡ್ಡಿ ದರ ಏರಿಕೆ ಆಗುತ್ತೆ. ಬಳಿಕ ಬಡ್ಡಿಯ ಹೊರೆ ನೇರವಾಗಿ ಸಾಲಗಾರರ ಮೇಲೆ ಬೀಳುತ್ತದೆ. ಸದ್ಯ ರೆಪೋ ರೇಟ್ ಯಥಾಸ್ಥಿತಿಯಲ್ಲಿರುವುದರಿಂದ ಸಾಲಗಾರರು ಬಡ್ಡಿ ಹೊರೆಯಿಂದ ಸದ್ಯ ಬಚಾವ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಾಲಗಾರರಿಗೆ ಬಿಗ್‌ ರಿಲೀಫ್ ಕೊಟ್ಟ RBI; ಹಣದುಬ್ಬರದ ಮೇಲೆ ಅರ್ಜುನನಂತೆ ಕಣ್ಣಿಡಲು ನಿರ್ಧಾರ

https://newsfirstlive.com/wp-content/uploads/2023/06/RBI-1.jpg

Load More