newsfirstkannada.com

2 ಸಾವಿರ ಬೆನ್ನಲ್ಲೇ 500 ರೂ. ನೋಟು ಬ್ಯಾನ್​​..?- ಈ ಬಗ್ಗೆ RBI ಗವರ್ನರ್​​ ಕೊಟ್ರು ಮಹತ್ವದ ಅಪ್ಡೇಟ್​​​​!

Share :

08-06-2023

    2 ಸಾವಿರ ಬೆನ್ನಲ್ಲೇ 500 ರೂ. ನೋಟು ಬ್ಯಾನ್​​?

    RBI ಗವರ್ನರ್​​ ಕೊಟ್ರು ಮಹತ್ವದ ಅಪ್ಡೇಟ್..​​​​!

    RBI ಗವರ್ನರ್ ಶಕ್ತಿಕಾಂತ ದಾಸ್​​ ಹೇಳಿದ್ದೇನು?

ನವದೆಹಲಿ: ರೆಪೋ ರೇಟ್​​ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳುವ ಮೂಲಕ ಗೃಹ ಸಾಲ ಪಡೆದವರಿಗೆ ಆರ್​ಬಿಐ ಸಿಹಿಸುದ್ದಿ ಕೊಟ್ಟಿತ್ತು. ಈ ಬೆನ್ನಲ್ಲೇ 500 ರೂ. ನೋಟುಗಳ ಬಗ್ಗೆಯೂ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮಹತ್ವದ ಅಪ್ಡೇಟ್​​ ಒಂದು ಕೊಟ್ಟಿದ್ದಾರೆ.

ಯೆಸ್​​, ಇತ್ತೀಚೆಗೆ 2000 ಸಾವಿರ ನೋಟು ಬ್ಯಾನ್​ ಆದ ಬೆನ್ನಲ್ಲೇ ಯಾವಾಗ 500 ರೂ. ನೋಟುಗಳ ಚಲಾವಣೆ ನಿಂತು ಹೋಗುತ್ತದೋ ಎಂಬ ಚರ್ಚೆ ನಡೆಯುತ್ತಿತ್ತು. ಸದ್ಯ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ್​​, 500 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಯಾವುದೇ ಉದ್ದೇಶ ಇಲ್ಲ. ಜತೆಗೆ 1000 ರೂ. ನೋಟುಗಳನ್ನು ಮರು ಪರಿಚಯಿಸುವ ಯೋಜನೆಯೂ ಹಾಕಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು, ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಅರ್ಧದಷ್ಟು ಈಗಾಗಲೇ ವಾಪಸ್​ ಬಂದಿವೆ. ವಾಪಸ್​ ಬಂದಿರೋ ನೋಟುಗಳ ಮೌಲ್ಯ 1.82 ಲಕ್ಷ ಕೋಟಿ ರೂ. ಆಗಿದೆ. 500 ರೂ. ನೋಟುಗಳನ್ನು ಹಿಂಪಡೆಯುವ ಯೋಜನೆ ಇಲ್ಲ, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಸಾವಿರ ಬೆನ್ನಲ್ಲೇ 500 ರೂ. ನೋಟು ಬ್ಯಾನ್​​..?- ಈ ಬಗ್ಗೆ RBI ಗವರ್ನರ್​​ ಕೊಟ್ರು ಮಹತ್ವದ ಅಪ್ಡೇಟ್​​​​!

https://newsfirstlive.com/wp-content/uploads/2023/06/500-Rupees.jpg

Load More