newsfirstkannada.com

RCB ಫ್ಯಾನ್ಸ್​ ಇಲ್ಲಿ ಕೇಳಿ.. ಈ ಬಾರಿ ಕಪ್​ ಗೆಲ್ಲದಿದ್ರೆ ಏನಂತೆ, ಈ ಐದು ಸಂಗತಿಗಳು ಆ ನೋವನ್ನೇ ಮರೆಸುತ್ತವೆ

Share :

27-05-2023

    4 ವರ್ಷಗಳ ಬಳಿಕ ಶತಕದ ಬರ ನೀಗಿಸಿಕೊಂಡ ಕಿಂಗ್​ ಕೊಹ್ಲಿ

    2 ವರ್ಷಗಳ ಬಳಿಕ RCB ಚುಕ್ಕಾಣಿ ಹಿಡಿದ ರನ್​​ ಮಶೀನ್​​​​..!

    ಬ್ಯಾಕ್ ಟು ಬ್ಯಾಕ್​​ ಶತಕ..ಫ್ಯಾನ್ಸ್​ಗೆ ಹಬ್ಬ..!

ಆಟದಲ್ಲಿ ಸೋಲು-ಗೆಲುವು ಕಾಮನ್​​. ಹಾಗೇಯೆ ಆರ್​ಸಿಬಿಯ ಕಪ್​ ಕನಸು ಈ ಸಲವೂ ಕಮರಿದೆ. ಇದು ಕೂಡ ಪಾರ್ಟ್​ ಆಫ್ ದಿ ಗೇಮ್​​. ರೆಡ್ ಆರ್ಮಿ ಸೋತಿರಬಹುದು. ಆದರೆ ಈ ಆವೃತ್ತಿ ಕಿಂಗ್ ಕೊಹ್ಲಿ ಕರಿಯರ್​​​ನಲ್ಲಿ ವೆರಿ ಸ್ಪೆಷಲ್ ಆಗಿತ್ತು. ಯಾಕೆ ಅಂತೀರಾ? ಈ​ ಸ್ಟೋರಿ ಓದಿ.

16ನೇ ಐಪಿಎಲ್,​ ಆರ್​ಸಿಬಿ ಪಾಲಿಗೆ ಮುಗಿದ ಅಧ್ಯಾಯ.15 ಕರಾಳ ಅಧ್ಯಾಯಗಳಲ್ಲಿ ಈ ಸಲದ್ದೂ ಒಂದು. ಅಭಿಮಾನಿಗಳ ಬೇಸರ ಹೇಳತೀರದು.ನಿರಾಸೆ ಜೊತೆ ಆಕ್ರೋಶವೂ ಕಟ್ಟೆಯೊಡೆದಿದೆ. ಆದ್ರೆ ನೋ ಯೂಸ್​​​​..! ನೋವನ್ನ ನುಂಗಿ ಮುಂದೆ ಸಾಗಲೇಬೇಕಿದೆ. ಬಟ್​​,ಇಷ್ಟೆಲ್ಲಾ ನೋವಿನ ಮಧ್ಯೆಯೂ ಪ್ರಸಕ್ತ ಐಪಿಎಲ್​​​​​​ ವಿರಾಟ್ ಕೊಹ್ಲಿ ಕರಿಯರ್​​ನಲ್ಲಿ ಸ್ಪೆಷಲ್ ಆಗಿ ನಿಲ್ಲುತ್ತೆ. ಯಾಕಾಗಿ ಅನ್ನೋದನ್ನ ಈ ಸಂಗತಿಗಳೇ ಸಾಕ್ಷಿ.

ಏಪ್ರಿಲ್​​​​​​ 19, 2019. ಮಾನ್​ಸ್ಟಾರ್ ವಿರಾಟ್ ಕೊಹ್ಲಿ ಐಪಿಎಲ್​​ನಲ್ಲಿ ಸೆಂಚುರಿ ಬಾರಿಸಿದ ಕೊನೆ ದಿನ. ಕಲರ್​​ಪುಲ್​​ ಲೋಕದ ಕಿಂಗ್ ಅನ್ನಿಸಿಕೊಂಡಾತ ಬರೋಬ್ಬರಿ 4 ವರ್ಷ ಸೆಂಚುರಿ ಬರ ಎದುರಿಸಿದ್ರು. ಅಭಿಮಾನಿ ದೇವರುಗಳು ತಮ್ಮ ಬಾಸ್ ಆಗಸದೆತ್ತರಕ್ಕೆ ಬ್ಯಾಟ್​​ ಎತ್ತಿ ಸಂಭ್ರಮಿಸುವುದನ್ನ ನೋಡಲು ಬಕ ಪಕ್ಷಿಯಂತೆ ಕಾದು ಕುಳಿತ್ತಿದ್ರು. ಕೊಹ್ಲಿ ಫ್ಯಾನ್ಸ್ ಎಕ್ಸ್​​ಪೆಕ್ಟೇಶನ್ ಹುಸಿಗೊಳಿಸ್ಲಿಲ್ಲ. ಹೈದ್ರಾಬಾದ್​​ ವಿರುದ್ಧ ಭರ್ಜರಿ ಶತಕ ಸಿಡಿಸಿದ್ರು. ಆ ಮೂಲಕ 4 ವರ್ಷಗಳ ಸೆಂಚುರಿ ವನವಾಸಕ್ಕೆ ಮುಕ್ತಿ ಹಾಡಿದ್ರು.

ಈ ಘಟನೆಯಂತೂ ಕಿಂಗ್ ಕೊಹ್ಲಿ ಪಾಲಿಗೆ ವೆರಿ ಸ್ಪೆಷಲ್​​..9 ವರ್ಷ ಆರ್​​ಸಿಬಿ ತಂಡವನ್ನ ಮುನ್ನಡೆಸಿದ ವಿರಾಟ್ 2021 ರಲ್ಲಿ ಕ್ಯಾಪ್ಟನ್ಸಿಗೆ ಗುಡ್​ಬೈ ಹೇಳಿದ್ರು. ಮಾಜಿ ನಾಯಕರಾಗಿದ್ದ ಕೊಹ್ಲಿಗೆ ಈ ಸಲ ತಂಡವನ್ನ ಮುನ್ನಡೆಸುವ ಅದೃಷ್ಟ ಕೂಡಿ ಬಂತು. ಕ್ಯಾಪ್ಟನ್ ಡುಪ್ಲೆಸಿ ಇಂಜುರಿ ಕಾರಣಕ್ಕಾಗಿ ವಿರಾಟ್​ ತಂಡ ಮುನ್ನಡೆಸಿ, ಅಭಿಮಾನಿಗಳಿಗೆ ಅಸಲಿ ನಾಯಕತ್ವದ ಮನರಂಜನೆ ನೀಡಿದ್ರು.

ಕಿಂಗ್ ಕೊಹ್ಲಿಗೆ ಸೆಂಚುರಿ ಬಾರಿಸೋದನ್ನ ಹೇಳಿಕೊಡಬೇಕಾ ಹೇಳಿ ? ಸೆಂಚುರಿ ಸ್ಪೆಶಲಿಸ್ಟ್ ಅನ್ನೋ ಬಿರುದು ಹೊಂದಿದ್ದಾರೆ. ಪ್ರಸಕ್ತ ಐಪಿಎಲ್​​ನಲ್ಲಿ ಬ್ಯಾಕ್​​ ಟು ಬ್ಯಾಕ್ ಸೆಂಚುರಿ ಸಿಡಿಸಿ ಫ್ಯಾನ್ಸ್​ಗೆ ಫುಲ್ ಮೀಲ್ಸ್​ ನೀಡಿದ್ರು. ಹೈದ್ರಾಬಾದ್ ವಿರುದ್ಧ ಕರೆಕ್ಟ್ 100 ರನ್ ಹೊಡೆದ್ರೆ, ಗುಜರಾತ್​ ಟೈಟನ್ಸ್ ಎದುರು 101 ರನ್ ಚಚ್ಚಿ  ಹೀರೋ ಆಫ್ ದ ಡೇ ಅನ್ನಿಸಿಕೊಂಡ್ರು..

ಕೊರೊನಾದಿಂದ ಮುಕ್ತಿ.. ತವರಿನಲ್ಲಿ ರನ್​ ಸುನಾಮಿ..!

ಹೆಮ್ಮಾರಿ ಕೊರೊನಾ ಕಾರಣದಿಂದ 3 ವರ್ಷ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಪಂದ್ಯಗಳೇ ನಡೆದಿರಲಿಲ್ಲ.ಆದ್ರೆ ಈ ಬಾರಿ ಆ ಅದೃಷ್ಟ ಕೂಡಿ ಬಂತು. 2019ರ ಬಳಿಕ ತವರಿನಲ್ಲಿ ಆಡಿದ ಕೊಹ್ಲಿ, ರನ್ ಸುನಾಮಿಯನ್ನೇ ಎಬ್ಬಿಸಿದ್ರು.

ಚಿನ್ನಸ್ವಾಮಿಯಲ್ಲಿ ಕೊಹ್ಲಿ ಗಳಿಸಿದ ರನ್​​​

 ಪಂದ್ಯ –  07

ರನ್ –   354

ಸ್ಟ್ರೈಕ್ರೇಟ್  –  153.91

100/50  – 01/04

ಈ ಬಾರಿ ಚಿನ್ನಸ್ವಾಮಿ ಅಂಗಳದಲ್ಲಿ ಏಳು ಪಂದ್ಯಗಳನ್ನ ಆಡಿದ ವಿರಾಟ್ ಕೊಹ್ಲಿ ರನ್​​​ ಶಿರವೇರಿದ್ರು. 153.91 ರ ಸ್ಟ್ರೈಕ್​ರೇಟ್​​ನಲ್ಲಿ ಬರೋಬ್ಬರಿ 354  ರನ್ ಚಚ್ಚಿದ್ರು. 1 ಸೆಂಚುರಿ ಸೇರಿ 4 ಅರ್ಧಶತಕ ಸಿಡಿಸಿ ಶೈನ್ ಆದ್ರು.

ಕೊಹ್ಲಿ-ಡುಪ್ಲೆಸಿ ದಾಖಲೆಯ ಜೊತೆಯಾಟ..!

ಇನ್ನು ಈ ಕಾರಣದಿಂದ ಈ ಸಲದ ಸೀಸನ್​​​​ ಕೊಹ್ಲಿ ಪಾಲಿಗೆ ಸ್ಮರಣೀಯವಾಗಿರಲಿದೆ.ಫಾಫ್ ಡುಪ್ಲೆಸಿ ಹಾಗೂ ಕೊಹ್ಲಿ ಜೋಡಿ ಪ್ರಸಕ್ತ ಐಪಿಎಲ್​​ನಲ್ಲಿ ಬರೋಬ್ಬರಿ  939 ರನ್ ಕೊಳ್ಳೆ ಹೊಡೀತು. ದಾಖಲೆಯ 8 ಫಿಫ್ಟಿ ಹಾಗೂ 3 ಸೆಂಚುರಿ ಜೊತೆಯಾಟ ಮೂಡಿಬಂತು. ಭಲೇ ಜೋಡಿತ್ತಿ ಬ್ಯಾಟಿಂಗ್​​​​​ ಅನ್ನ ಯಾರೋಬ್ಬರು ಮರೆಯಲಾರರು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

RCB ಫ್ಯಾನ್ಸ್​ ಇಲ್ಲಿ ಕೇಳಿ.. ಈ ಬಾರಿ ಕಪ್​ ಗೆಲ್ಲದಿದ್ರೆ ಏನಂತೆ, ಈ ಐದು ಸಂಗತಿಗಳು ಆ ನೋವನ್ನೇ ಮರೆಸುತ್ತವೆ

https://newsfirstlive.com/wp-content/uploads/2023/05/RCB-1.jpg

Load More