newsfirstkannada.com

ಟೀಮ್​ ಇಂಡಿಯಾ ಬೌಲಿಂಗ್​​ ಕೋಚ್​​ ಆಗಿ RCB ಮಾಜಿ ಪ್ಲೇಯರ್​​.. ಇವರೇ ಬೇಕು ಎಂದ ಗಂಭೀರ್​!

Share :

Published July 10, 2024 at 9:38pm

    ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​​ ಆಗಿ ಗೌತಮ್​ ಗಂಭೀರ್​ ನೇಮಕ

    ಬೌಲಿಂಗ್​ ಕೋಚ್​​ಗೆ ಆರ್​​ಸಿಬಿ ತಂಡದ ಮಾಜಿ ಪ್ಲೇಯರ್​ ಆಯ್ಕೆ ಸಾಧ್ಯತೆ

    ಸಪೋರ್ಟಿಂಗ್​ ಸ್ಟ್ಯಾಫ್​​ಗೆ ಹಲವರ ಶಾರ್ಟ್​ಲಿಸ್ಟ್​ ಮಾಡಿರೋ ಬಿಸಿಸಿಐ..!

ಇತ್ತೀಚೆಗಷ್ಟೇ ಬಿಸಿಸಿಐ ಕ್ರಿಕೆಟ್​ ದಿಗ್ಗಜ ಮಾಜಿ ಆರಂಭಿಕ ಬ್ಯಾಟರ್ ಗೌತಮ್​ ಗಂಭೀರ್​ ಅವರನ್ನು ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ ನೇಮಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದೆ. ರಾಹುಲ್​ ದ್ರಾವಿಡ್​ ಅವರ ಉತ್ತರಾಧಿಕಾರಿ ಆಗಿ ಗಂಭೀರ್​ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ಅನೌನ್ಸ್​ ಮಾಡಿದೆ. ಈ ಬೆನ್ನಲ್ಲೇ ಸಪೋರ್ಟಿಂಗ್​ ಸ್ಟ್ಯಾಫ್​ ಬಗ್ಗೆ ಕೂಡ ಚರ್ಚೆ ಶುರುವಾಗಿದೆ.

ಇನ್ನು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಪೋರ್ಟಿಂಗ್​ ಕೋಚ್​​​ ಆಗಿರೋ ಅಭಿಷೇಕ್​ ನಾಯರ್​​​ ಅವರು ಭಾರತ ಕ್ರಿಕೆಟ್​ ತಂಡದ ಸಹಾಯಕ ತರಬೇತುದಾರರು ಆಗಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಗೌತಮ್​ ಗಂಭೀರ್​​ ಮತ್ತು ಅಭಿಷೇಕ್​ ನಾಯರ್​​​ ಅವರು ಒಟ್ಟಿಗೆ ಕೆಲಸ ಮಾಡಿದ್ದಾರೆ.

ಇಷ್ಟೇ ಇಲ್ಲ ಸದ್ಯ ಲಭ್ಯವಾಗಿರೋ ಮಾಹಿತಿ ಪ್ರಕಾರ ಭಾರತ ತಂಡದ ಬೌಲಿಂಗ್​ ಕೋಚ್​​ ಹುದ್ದೆಗೆ ಲೆಜೆಂಡರಿ ಕ್ರಿಕೆಟರ್ಸ್​ ಆದ ಜಹೀರ್​ ಖಾನ್​ ಮತ್ತು ಲಕ್ಷ್ಮೀಪತಿ ಬಾಲಾಜಿ ಅವರನ್ನು ಬಿಸಿಸಿಐ ಶಾರ್ಟ್​​ ಲಿಸ್ಟ್​ ಆಗಿದೆ.

ಮತ್ತೊಂದೆಡೆ ಕನ್ನಡಿಗ ಮತ್ತು ಮಾಜಿ ಆರ್​​ಸಿಬಿ ಪ್ಲೇಯರ್​​ ವಿನಯ್​ ಕುಮಾರ್​​ ಅವರನ್ನು ಬೌಲಿಂಗ್​ ಕೋಚ್​ ಆಗಿ ನೇಮಿಸಬೇಕು ಎಂದು ಬಿಸಿಸಿಐಗೆ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಗಂಭೀರ್​ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಫೀಲ್ಡಿಂಗ್ ಕೋಚ್ ಆಗಿದ್ದ ಟಿ ದಿಲೀಪ್ ಅವರನ್ನು ಗೌತಮ್ ಗಂಭೀರ್ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: 3ನೇ ಪಂದ್ಯದಲ್ಲೂ ಟೀಮ್​ ಇಂಡಿಯಾಗೆ ಭರ್ಜರಿ ಗೆಲುವು.. ಜಿಂಬಾಬ್ವೆಗೆ ಹೀನಾಯ ಸೋಲು!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾ ಬೌಲಿಂಗ್​​ ಕೋಚ್​​ ಆಗಿ RCB ಮಾಜಿ ಪ್ಲೇಯರ್​​.. ಇವರೇ ಬೇಕು ಎಂದ ಗಂಭೀರ್​!

https://newsfirstlive.com/wp-content/uploads/2024/07/RCB_News.jpg

Load More