ಐಪಿಎಲ್ ತಯಾರಿಯಲ್ಲಿರುವ ಆರ್ಸಿಬಿಗೆ ಸಂದಿಗ್ಧತೆ
17.5 ಕೋಟಿ ರೂಪಾಯಿ ನೀಡಿ ಖರೀದಿಸಿದ್ದ ಆಟಗಾರ ಯಾರು?
6 ತಿಂಗಳ ಹಿಂದೆ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ
ಐಪಿಎಲ್ ಫ್ರಾಂಚೈಸಿಗಳು ಇನ್ನೆರಡು ದಿನಗಳಲ್ಲಿ ಯಾರೆಲ್ಲ ಆಟಗಾರರನ್ನು ಉಳಿಸಿಕೊಳ್ತೀವಿ ಅನ್ನೋದ್ರ ಬಗ್ಗೆ ಲಿಸ್ಟ್ ನೀಡಬೇಕಿದೆ. ಈ ಮಧ್ಯೆ ಆರ್ಸಿಬಿಗೆ ಮತ್ತೊಂದು ಸಂದಿಗ್ಧತೆ ಉಂಟಾಗಿದೆ.
ಕಳೆದ ಬಾರಿ ಆರ್ಸಿಬಿ ಭಾಗವಾಗಿದ್ದ ಕ್ಯಾಮೆರೊನ್ ಗ್ರೀನ್ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಅನಿಶ್ಚಿತತೆ ತಂಡಕ್ಕೆ ಕಾಡುತ್ತಿದೆ. ಗ್ರೀನ್ ಅವರನ್ನು ಆರ್ಸಿಬಿ ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಗ್ರೀನ್ ಅವರನ್ನು ರಿಲೀಸ್ ಮಾಡಿ, ಹರಾಜು ವೇಳೆ ಮತ್ತೆ ಖರೀದಿಸಲು ಪ್ಲಾನ್ ಮಾಡಿದೆ ಹೇಳಲಾಗುತ್ತಿದೆ.
ಇದನ್ನೂ ಓದಿ:ಆರ್ಸಿಬಿಗೆ ಕಳೆದ ಬಾರಿಯಂತೆ ಮತ್ತೆ ಅದೇ ಪ್ರಶ್ನೆ ಎದುರಾಗಿದೆ; ಕೊಹ್ಲಿ ಮತ್ತು .. ?
ಆದರೆ, ಗ್ರೀನ್ ಭಾರತದ ವಿರುದ್ಧ ನಡೆಯುವ ಬಾರ್ಡರ್ ಗವಾಸ್ಕರ್ ಟೂರ್ನಿಯಿಂದಲೂ ಹೊರ ಬಿದ್ದಿದ್ದಾರೆ. ಹೀಗಾಗಿ 2025ರ ಐಪಿಎಲ್ನಲ್ಲಿ ಗ್ರೀನ್ ಕಾಣಿಸಿಕೊಳ್ಳೋದು ಕಷ್ಟ ಎಂದು ಹೇಳಲಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಗ್ರೀನ್ ಅವರನ್ನು 17.5 ಕೋಟಿ ನೀಡಿ ಆರ್ಸಿಬಿಗೆ ಕರೆದುಕೊಂಡು ಬರಲಾಗಿತ್ತು. ಆದರೆ ಅವರು ನಿರೀಕ್ಷಿಸಿದ ರೀತಿಯಲ್ಲಿ ಅವರು ಪ್ರದರ್ಶನ ನೀಡಿರಲಿಲ್ಲ. ಆರ್ಸಿಬಿ ಪರ ಕಳೆದ ಸೀಸನ್ನಲ್ಲಿ ಕೇವಲ 10 ವಿಕೆಟ್ ಪಡೆದು 200 ರನ್ಗಳಿಸಿದ್ದರು. ಇದು ಟೀಕೆಗೂ ಕಾರಣವಾಗಿದೆ. ಆದರೂ ಆರ್ಸಿಬಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಇದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್