newsfirstkannada.com

‘ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.​. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!

Share :

Published April 10, 2024 at 2:15pm

Update April 10, 2024 at 2:56pm

  ಆರ್​​ಸಿಬಿ ಅಭಿಮಾನಿಯ ಮೊಯೆ.. ಮೊಯೆ.. ಕಥೆ..!

  ಆರ್​​ಸಿಬಿ ಬೆಂಬಲಿಸಲು ಸ್ಟೇಡಿಯಂಗೆ ಬಂದ ಅಭಿಮಾನಿ

  ಮ್ಯಾಚ್​ ನೋಡಲು ಹೋಗಿ ಫಜೀತಿಗೆ ಸಿಲುಕಿದ ಫ್ಯಾನ್​

ಅದ್ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ವಿಶ್ವದಲ್ಲೇ ಯಾವ ಫ್ರಾಂಚೈಸಿಗೂ ಸಿಗದಂತಹ ಅಪರೂಪದ ಫ್ಯಾನ್ಸ್ ಆರ್​​ಸಿಬಿಗೆ​ ಸಿಕ್ಕಿದ್ದಾರೆ. 16 ಸೀಸನ್​​ಗಳಿಂದ ಕಪ್​ ಗೆದ್ದಿಲ್ಲ. ಹಾಗಂತ ಅಭಿಮಾನಿಗಳು, ಅಭಿಮಾನ ಎರಡೂ ಕಡಿಮೆಯಾಗಿಲ್ಲ. ಈ ಸೀಸನ್​ನಲ್ಲೂ ಆರ್​​ಸಿಬಿ ಸೋಲಿನ ಸುಳಿಗೆ ಸಿಲುಕಿ ಹೀನಾಯ ಸ್ಥಿತಿ ತಲುಪಿದೆ. ಆದ್ರೂ, ಆರ್​​ಸಿಬಿ ಕ್ರೇಜ್​ ಮಾತ್ರ ಕಡಿಮೆಯಾಗಿಲ್ಲ. ಇಲ್ಲೊಬ್ರು ಫ್ಯಾನ್​​ ಆರ್​​​ಸಿಬಿಗೆ ಜೈ ಅನ್ನೋಕೆ ಹೋಗಿ ಫಜೀತಿಗೆ ಸಿಲುಕಿದ್ದಾರೆ.

ಸೋಲು.. ಸೋಲು.. ಸೋಲು.. ಹ್ಯಾಟ್ರಿಕ್​ ಸೋಲಿನಿಂದ ಆರ್​​ಸಿಬಿ ಜರ್ಜರಿತವಾಗಿದೆ. ಕಳಪೆ ಫಾರ್ಮ್​ನ ಸುಳಿಗೆ ಸಿಲುಕಿ ಆಟಗಾರರು ಕಂಗೆಟ್ಟಿದ್ದಾರೆ. ಫ್ಲೇ ಆಫ್​ ಹಾದಿ ದರ್ಗಮವಾದ ಬೆನ್ನಲ್ಲೇ ಮ್ಯಾನೇಜ್​ಮೆಂಟ್​​​ ತಲೆ ಮೇಲೆ ಕೈ ಹೊತ್ತು ಕೂತಿದೆ. ಅಭಿಮಾನಿಗಳು ಆಕ್ರೋಶದ ಮಾತುಗಳನ್ನಾಡ್ತಾ, ಅಸಮಾಧಾನ ಹೊರ ಹಾಕ್ತಿದ್ದಾರೆ. ಆದ್ರ ಜೊತೆಗೆ ಪ್ರೀತಿಯನ್ನೂ ನೀಡ್ತಿದ್ದಾರೆ.

ಇದನ್ನೂ ಓದಿ: ಬಿಡದಿ ಮನೆಯ ‘ಹೊಸ ತೊಡಕು ಪಾಲಿಟಿಕ್ಸ್’​ಗೆ ಹೊಸ ತಿರುವು; ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಎಲೆಕ್ಷನ್ ಕಮಿಷನ್

ಹೆಸರು ನೇಹಾ ದ್ವಿವೇದಿ. ಆರ್​​ಸಿಬಿಯ ಹಾರ್ಡ್​ಕೋರ್​ ಅಭಿಮಾನಿ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿರೋ ಇವರು, ಆರ್​​ಸಿಬಿ-ಲಕ್ನೋ ಮ್ಯಾಚ್​ ನೋಡಲು ಹೋಗಿ ಇದೀಗ ಪಜೀತಿಗೆ ಸಿಲುಕಿದ್ದಾರೆ.

ಕೆಲಸಕ್ಕೆ ಚಕ್ಕರ್​, ಮ್ಯಾಚ್​ಗೆ ಹಾಜರ್​, ಫಜೀತಿಗೆ ಸಿಲುಕಿದ ಫ್ಯಾನ್​..!
ಏಪ್ರಿಲ್​ 2 ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲಕ್ನೋ ಸೂಪರ್​​ ಜೈಂಟ್ಸ್​​​ ವಿರುದ್ಧದ ಪಂದ್ಯವನ್ನ ಕಣ್ತುಂಬಿಕೊಳ್ಳಲು ಇವ್ರು ಸ್ಟೇಡಿಯಂಗೆ ಬಂದಿದ್ರು. ಮಂಗಳವಾರ..ವೀಕ್​ ಡೇ ಬೇರೆ.. ಬೆಳಗ್ಗೆ ಇವ್ರು ಆಫೀಸ್​​ಗೆ ಕೆಲಸಕ್ಕೆ ಇವ್ರು ಹೋಗಿದ್ರು. ಸಂಜೆ ಮ್ಯಾಚ್​ಗೆ ಹೋಗಬೇಕಲ್ವಾ.. ಅದಕ್ಕಾಗಿ ಮ್ಯಾನೇಜರ್​ ಹತ್ರ ಒಂದು ಸುಳ್ಳು ಹೇಳಿದ್ರು. ಫ್ಯಾಮಿಲಿ ಎಮರ್ಜೆನ್ಸಿ ಅಂತಾ ಕಾರಣ ಕೊಟ್ಟು ಚಕ್ಕರ್​ ಹಾಕಿ ಸ್ಟೇಡಿಯಂಗೆ ಬಂದಿದ್ರು.

ಫ್ಯಾಮಿಲಿ ಎಮರ್ಜೆನ್ಸಿ ಎಂದು ಸ್ಟೇಡಿಯಂಗೆ ಎಂಟ್ರಿ
ಎಲ್ಲಾ ಪ್ಲಾನ್​ ಪ್ರಕಾರವೇ ನಡೆದಿತ್ತು.. ಆದ್ರೆ, ಪಂದ್ಯದ 16.3ನೇ ಓವರ್​​ನಲ್ಲಿ ಅನುಜ್​ ರಾವತ್​ ಪೂರನ್​ ಕ್ಯಾಚ್​ನ ಡ್ರಾಪ್​ ಮಾಡಿದ್ರು. ಇದ್ರಿಂದ ಆರ್​​ಸಿಬಿ ಫ್ಯಾನ್ಸ್​ಗೆ ತೀವ್ರ ನಿರಾಸೆಯಾಯ್ತು. ಸ್ಟೇಡಿಯಂನಲ್ಲಿದ್ದ ನೇಹಾ ಕೂಡ ಬೇಸರ ವ್ಯಕ್ತಪಡಿಸಿದ್ರು. ಈ ರಿಯಾಕ್ಷನ್​​ ಕ್ಯಾಮರಾದಲ್ಲಿ ಸೆರೆಯಾಯ್ತು. ಅಲ್ಲೇ ಆಗಿದ್ದು ನೋಡಿ ಯಡವಟ್ಟು. ರಿಯಲ್​ Moye Moye Moment ಅಂದ್ರೆ ಇದೇ ಇರ್ಬೆಕು ಕಣ್ರಿ.. ಆರಂಭದಲ್ಲಿ 2 ಸೆಕೆಂಡ್​, ರೀಪ್ಲೇನಲ್ಲಿ 2 ಸೆಕೆಂಡ್​, ಟೂಟಲ್​ ಆಗಿ 4 ಸೆಕೆಂಡ್​ ಸ್ಕ್ರೀನ್​ನಲ್ಲಿ ನೇಹಾ ಕಾಣಿಸಿಕೊಂಡರು. ಇವ್ರ ದುರಾದೃಷ್ಟಕ್ಕೆ ಅವ್ರ ಮ್ಯಾನೇಜರ್​ ಕೂಡ ಆಗಲೇ ಮ್ಯಾಚ್​ ನೋಡಿದ್ದಾರೆ.

ಇದನ್ನೂ ಓದಿ: ತವರಲ್ಲೂ, ತವರಿನಾಚೆಯೂ ಮುಖಭಂಗ.. RCBಗೆ ಇರೋ ಮುಂದಿನ ಸವಾಲುಗಳು ಏನು?

ಈ ಫುಲ್​ ಕಹಾನಿಯನ್ನ ನೇಹಾ ತಮ್ಮ ಇನ್ಸ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಟಿವಿಯಲ್ಲಿ ನೋಡಿದ ಬಳಿಕ ಮ್ಯಾನೇಜರ್​​ ಚಾಟ್​ ಮಾಡಿದ ಸ್ಕ್ರೀನ್​​ ಶಾಟ್​ ಕೂಡ ಹಂಚಿಕೊಂಡಿದ್ದಾರೆ. ಇವರೊಬ್ಬರೇ ಅಲ್ಲ.. ಇವ್ರ ತರಾನೇ ಸುಳ್ಳು ಹೇಳಿ ಸ್ಟೇಡಿಯಂಗೆ ಮಾತ್ರವಲ್ಲ. ಟಿವಿಯಲ್ಲಿ ಮ್ಯಾಚ್​ ನೋಡೋಕೆ ಕೂಡ ಚಕ್ಕರ್​ ಹಾಕೋ ಆರ್​​ಸಿಬಿ ಅಭಿಮಾನಿಗಳಿಗೆ ಬರವಿಲ್ಲ. ಆದ್ರೆ, ಆಟಗಾರರು ಮಾತ್ರ ಇದ್ಯಾವುದನ್ನೂ ಲೆಕ್ಕಿಸದೇ ಕಳಪೆ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಅಪರಿಮಿತ ಪ್ರೀತಿ​, ಅಭಿಮಾನವನ್ನ ಆಟಗಾರರು ಮುಂದಾದ್ರೂ ಅರ್ಥ ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಆಕೆ ವಿರುದ್ಧವೇ ಕೇಸ್ ದಾಖಲಿಸಿದ BMTC ಕಂಡಕ್ಟರ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.​. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!

https://newsfirstlive.com/wp-content/uploads/2024/04/RCB-FAN-1.jpg

Load More