ಕೊಹ್ಲಿ ಬಿಟ್ರು ಆರ್ಸಿಬಿ ಫ್ಯಾನ್ಸ್ ಬಿಡ್ತಾರಾ?
ಏನಿದು ಟ್ವೀಟ್ ಮ್ಯಾಂಗೋ ಕಥೆ?
ಲಕ್ನೋಗೆ ಸೋಲಿನ ಜೊತೆಗೆ ಸ್ವೀಟ್ ಮ್ಯಾಂಗೋ ಕೊಟ್ಟ ಮುಂಬೈ ಪಡೆ
ಕೊಹ್ಲಿ ಬಿಟ್ರು ಆರ್ಸಿಬಿ ಫ್ಯಾನ್ಸ್ ಬಿಡ್ತಾರಾ? ಖಂಡಿತಾ ಇಲ್ಲ. ಈಗ ಲಕ್ನೋ ಆಟಗಾರ ನವೀನ್-ಉಲ್ ಹಕ್ ಕತೆಯೂ ಅದೇ ಆಗಿದೆ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ ಕೊಹ್ಲಿನಾ ಕೆಣಕಿದ ನವೀನ್. ಅದಲ್ಲದೆ ನವೀನ್ಗೆ ನಾನಾ ಹೆಸರುಗಳಿಂದ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಬಹುತೇಕರು ‘ಮ್ಯಾಂಗೋ ನವೀನ್’ ಎಂದು ನವೀನ್ ಉಲ್-ಹಕ್ ಮತ್ತು ಮಾವಿನ ಹಣ್ಣಿನ ಫೋಟೋ ಹಂಚಿಕೊಳ್ಳುತ್ತಿದ್ದಾರೆ.
ಆರ್ಸಿಬಿ ಎಷ್ಟೇ ಬಾರಿ ಸೋತರು ಅಭಿಮಾನಿಗಳ ಅಭಿಮಾನ ಕುಗ್ಗಲ್ಲ. ಅಂತೆಯೇ ಕೊಹ್ಲಿಗೆ ಏನಾದರೂ ಆದರು ಆರ್ಸಿಬಿ ಫ್ಯಾನ್ಸ್ ಸುಮ್ಮನಿರಲ್ಲ. ಅದರಂತೆಯೇ ಅಂದು ಕೊಹ್ಲಿನಾ ತವರಿನಲ್ಲಿ ಕೆಣಕಿದ ನವೀನ್ ಅನ್ನು ಇಂದು ಯರ್ರಾ ಬಿರ್ರಿ ಟ್ರೋಲ್ ಮಾಡುತ್ತಿದ್ದಾರೆ. ಅದರೊಂದಿಗೆ ಗೌತಮ್ ಗಂಭೀರ್ ಕೂಡ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
View this post on Instagram
ಏನಿದು ಟ್ವೀಟ್ ಮ್ಯಾಂಗೋ ಕಥೆ? ನವೀನ್ ಟ್ರೋಲ್ ಆಗುತ್ತಿರೋದ್ಯಾಕೆ?
ಆರ್ಸಿಬಿ ಮತ್ತು ಲಕ್ನೋ ಪಂದ್ಯದ ವೇಳೆ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಪಂದ್ಯ ಮುಗಿದ ಬಳಿಕವೂ ನವೀನ್ ಮತ್ತು ಕೊಹ್ಲಿ ನಡುವೆ ಮಾತುಕತೆ ನಡೆಯಿತು. ಈ ವೇಳೆ ನವೀನ್ ಜೊತೆಗೆ ಗಂಭೀರ್ ಎಂಟ್ರಿ ಕೊಟ್ಟಿರುವುದು ಕೂಡ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
View this post on Instagram
ನಂತರ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ಪಂದ್ಯದ ವೇಳೆ ನವೀನ್ ಉಲ್ ಹಕ್ ಮ್ಯಾಂಗೋ ಹಣ್ಣ ಸೇವಿಸುತ್ತಾ ಮುಂಬೈ ಬೌಲರ್ ಪಿಯುಷ್ ಚಾವ್ಲಾನನ್ನು ಹೊಗಳಿದ್ದರು. ಮಾತ್ರವಲ್ಲದೆ ಮ್ಯಾಂಗೋ ಹಣ್ಣಿನ ಫೋಟೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಈ ಪಂದ್ಯದಲ್ಲಿ ಆರ್ಸಿಬಿ ಸೋತಿದ್ದಲ್ಲದೆ, ನವೀನ್ ಹಂಚಿಕೊಂಡ ಪೋಸ್ಟ್ ಆರ್ಸಿಬಿ ಫ್ಯಾನ್ಸ್ ಬೇಸರಕ್ಕೆ ಮತ್ತೆ ಕಾರಣವಾಗಿತು.

ನಿನ್ನೆ ನಡೆದ ಎಲಿಮಿನೀಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಲಕ್ನೋ ತಂಡವನ್ನ ಸೋಲಿಸಿದೆ. 81 ರನ್ಗಳ ಭರ್ಜರಿ ಜಯದೊಂದಿಗೆ ರೋಹಿತ್ ಪಡೆ ಲಕ್ನೋ ತಂಡವನ್ನು ಹಿಮ್ಮೆಟ್ಟಿಸಿದೆ. ಪಂದ್ಯ ಗೆದ್ದ ಬಳಿಕ ಮುಂಬೈ ಆಟಗಾರರು ಸಿಹಿ ಮಾವಿನ ಹಣ್ಣಿನ ಜೊತೆಗೆ ಗಾಂಧೀ ತತ್ವದಂತೆ ಸಾರುವ ಫೋಟೋ ಕ್ಲಿಕ್ಕಿಸಿಕೊಂಡು ಹಂಚಿದ್ದಾರೆ. ಆದರೆ ಈ ಫೋಟೋ ನಿಮಿಷಾರ್ಧದಲ್ಲೇ ವೈರಲ್ ಆಗಿದ್ದು ಟ್ರೋಲಿಗೂ ಕಾರಣವಾಗಿದೆ.
The sweet mangoes! pic.twitter.com/BM0VCHULXV
— Mufaddal Vohra (@mufaddal_vohra) May 24, 2023
ಲಕ್ನೋ ಮತ್ತು ನವೀನ್ ಉಲ್ ಹಕ್ ಅನ್ನು ಗೇಲಿ ಮಾಡಿದ ಮುಂಬೈ ಆಟಗಾರರು
ಮುಂಬೈ ಪ್ಲೇಯರ್ಸ್ ಲಕ್ನೋ ತಂಡವನ್ನ ಸೋಲಿನ ಹೆಡೆಮುರಿ ಕಟ್ಟಿಸಿದೆ. ಭರ್ಜರಿ 81 ರನ್ಗಳ ಭರ್ಜರಿ ಜಯದೊಂದಿಗಿದೆ ರೋಹಿತ್ ಪಡೆ ಫೈನಲ್ಗೆ ಪ್ರವೇಶಿಸಿದೆ. ಆದರೆ ಈ ಸಂತಸದ ಜೊತೆಗೆ ಮುಂಬೈ ಆಟಗಾರರಾದ ಸಂದೀಪ್ ವಾರಿಯರ್, ವಿಷ್ಣು ವಿನೋದ್ ಮತ್ತು ಕುಮಾರ್ ಕಾರ್ತಿಕೇಯ ಮುಂಭಾಗದ ಟೇಬಲ್ನಲ್ಲಿ ಮಾವಿನ ಹಣ್ಣು ಇಟ್ಟುಕೊಂಡು ಗಾಂಧಿ ತತ್ವ ಸಾರುವಂತೆ ಫೋಟೋ ಹಂಚಿಕೊಂಡಿದ್ದಾರೆ. ಅಂದಹಾಗೆಯೇ ಫೋಟೋದಲ್ಲಿ ಈ ಮೂವರು ಕೆಟ್ಟದ್ದನ್ನು ಕೇಳಲಾರೆ, ಕೆಟ್ಟದ್ದನ್ನು ನೋಡಲಾರೆ, ಕೆಟ್ಟದ್ದನ್ನು ಮಾತನಾಡಲಾರೆ ಎಂಬಂತೆಯೇ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಈ ಫೋಟೋವನ್ನ ಮುಂಬೈ ಇಂಡಿಯನ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ಪೋಸ್ಟ್ ಯರ್ರಾ ಬಿರ್ರಿ ಟ್ರೋಲ್ ಆಗುತ್ತಿರುವುದನ್ನು ಗಮನಿಸಿ ಮುಂಬೈ ತಂಡ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.
View this post on Instagram
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ