newsfirstkannada.com

RCB Game Plan: ಆರ್​ಸಿಬಿಯಲ್ಲಿ ಮೇಜರ್​​ ಸರ್ಜರಿ ಪಕ್ಕಾ.. ಇಬ್ಬರು ದಂತಕತೆಗಳಿಗೆ ಗೇಟ್​ಪಾಸ್​ ಗ್ಯಾರಂಟಿ..!

Share :

18-07-2023

    ಆರ್​ಸಿಬಿ ಕ್ಯಾಂಪ್​​ನಲ್ಲಿ ಬದಲಾವಣೆಯ ಗುಲ್

    ಕಪ್ ಗೆಲ್ಲಲು ಆಗದಿರೋದಕ್ಕೆ ಇಬ್ಬರು ಕಾರಣ

    ಶುರುವಾಗುತ್ತಾ ಶಾಸ್ತ್ರಿ-ಎಬಿಡಿ ಜುಗಲ್​ಬಂಧಿ..?

ಐಪಿಎಲ್​ ಮಗೀದು 2 ತಿಂಗಳಾಗಿಲ್ಲ. ಈಗಾಗಲೇ ಐಪಿಎಲ್​ ಫ್ರಾಂಚೈಸಿಗಳು ಮೇಜರ್ ಸರ್ಜರಿಗೆ ಇಳಿದಿವೆ. ಲಕ್ನೋ ಸೂಪರ್​ ಜೈಂಟ್ಸ್​ ಹೊಸ ಕೋಚ್ ನೇಮಿಸಿದ ಬೆನ್ನಲ್ಲೇ ಆರ್​ಸಿಬಿಯೂ ಮಹತ್ವದ ಬದಲಾವಣೆಗೆ ಮುಂದಾಗಿದೆ. ಅಷ್ಟೇ ಅಲ್ಲ, ಈ ರೇಸ್​ನಲ್ಲಿ ದಿಗ್ಗಜರ ಹೆಸರುಗಳೇ ಕೇಳಿ ಬರುತ್ತಿವೆ.

ಐಪಿಎಲ್ ಸೀಸನ್​​-17ರ ಆರಂಭಕ್ಕೆ ಇನ್ನೂ ಹಲವು ತಿಂಗಳು ಬಾಕಿಯಿದೆ. ಆದ್ರೆ, ನೆಕ್ಸ್ಟ್​ ಸೀಸನ್​ನಲ್ಲಿ ಮಿಲಿಯನ್ ಡಾಲರ್ ಟೂರ್ನಿ ಗೆಲ್ಲೋಕೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸ್ತಿವೆ. ಈಗಾಗಲೇ ಲಕ್ನೋ ಸೂಪರ್​ ಜೈಂಟ್ಸ್​ ಹೆಡ್ ಕೋಚ್​ ಹುದ್ದೆಯಲ್ಲಿದ್ದ ಆ್ಯಂಡಿ ಫ್ಲವರ್​​ಗೆ ಕಿಕ್ ಔಟ್ ನೀಡಿ ದಿಗ್ಗಜ ಜಸ್ಟಿನ್‌ ಲ್ಯಾಂಗರ್​ಗೆ ನೂತನ ಕೋಚ್‌ ಆಗಿ ನೇಮಿಸಿದೆ. ಇದೇ ಹಾದಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸಾಗಿದೆ.

ಆರ್​ಸಿಬಿ ಡೈರೆಕ್ಟರ್​ & ಕೋಚ್​​ಗೆ ಗೇಟ್​ಪಾಸ್..?

ಸೀಸನ್​​-16ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದ ಆರ್​ಸಿಬಿ, ಪ್ಲೈ ಆಫ್​ ತಲುಪುವಲ್ಲಿ ವಿಫಲವಾಗಿತ್ತು. ಈ ಬಗ್ಗೆ ಭಾರೀ ಅಸಮಾಧಾನಗೊಂಡಿರೋ ಆರ್​​ಸಿಬಿ ಫ್ರಾಂಚೈಸಿ, ಸೀಸನ್-17ರ ಆರಂಭಕ್ಕೂ ಮುನ್ನವೇ ಮೇಜರ್ ಸರ್ಜರಿಗೆ ಕೈ ಹಾಕಿದೆ. ಮೊದಲ ಹೆಜ್ಜೆಯಾಗಿ ಡೈರೆಕ್ಟರ್​ ಮೈಕ್ ಹೆಸನ್ ಹಾಗೂ ಹೆಡ್ ಕೋಚ್ ಸಂಜಯ್​ ಬಂಗಾರ್​​​ಗೆ ಗೇಟ್​ಪಾಸ್ ನೀಡಲು ನಿರ್ಧರಿಸಿದೆ.

2020ರಿಂದ ಆರ್​ಸಿಬಿ ತಂಡದ ಭಾಗವಾಗಿರೋ ಮೈಕ್ ಹೆಸನ್, 2022ರಿಂದ ಕೋಚ್ ಆಗಿರೋ ಸಂಜಯ್ ಬಂಗಾರ್​​ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರೋ ಆರ್​ಸಿಬಿ ಫ್ರಾಂಚೈಸಿ ಕೊಕ್ ನೀಡೋ ಮನಸ್ಸು ಮಾಡಿದೆ. ಹೀಗಾಗಿಯೇ ಇವರಿಬ್ಬರ ಒಪ್ಪಂದ ನವೀಕರಿಸಲು ಹಿಂದೇಟು ಹಾಕಿದೆ.

ಬೌಲಿಂಗ್ ಕೋಚ್​​ & ಸ್ಟಾರ್ ಆಟಗಾರರಿಗೆ ಬೀಳುತ್ತೆ ಗುನ್ನಾ

ನಿರ್ದೇಶಕ ಮೈಕ್ ಹೆಸನ್, ಹೆಡ್​ ಕೋಚ್ ಸಂಜಯ್​ ಬಂಗಾರ್​ಗೆ ಮಾತ್ರವೇ ಅಲ್ಲ. ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಡಮ್ ಗ್ರಿಫಿತ್​​ಗೂ ಗೇಟ್​ಪಾಸ್ ನೀಡೋದು ಫಿಕ್ಸ್​. ಅಷ್ಟೇ ಅಲ್ಲ.! ಇತರೆ ಸಿಬ್ಬಂದಿಗಳ ಬದಲಾವಣೆಗೂ ಮುಂದಾಗಿರುವ ಆರ್​ಸಿಬಿ ಫ್ರಾಂಚೈಸಿ, ಕಿಕ್​ಔಟ್​ ಪಟ್ಟಿಯಲ್ಲಿ ಸ್ಟಾರ್ ಆಟಗಾರರನ್ನು ಸೇರಿಸಿರುವ ಮಾಹಿತಿ ಇದೆ.

ಮೈಕ್ ಹೆಸನ್ ಕಾರ್ಯವಧಿಯಲ್ಲಿ ಅಟ್ಟರ್​ ಫ್ಲಾಫ್

ಕಳೆದ ಮೂರು ಸೀಸನ್​ಗಳಿಂದ RCBಯ ಫೇಲ್ಯೂರ್​ಗೆ ಇವರಿಬ್ಬರ ತಲೆಬುಡವಿಲ್ಲದ ಆಯ್ಕೆಗಳೇ ಕಾರಣ. ಹೆಡ್​ ಕೋಚ್​ ಸಂಜಯ್ ಬಂಗಾರ್, ಡೈರೆಕ್ಟರ್ ಆಗಿ ಮೈಕ್ ಹೆಸನ್ ತಂಡದ ಗೆಲುವಿಗೆ ಬೇಕಾದ ಪರ್ಫೆಕ್ಟ್​​ ಗೇಮ್​ಪ್ಲಾನ್, ಸ್ಟಾಟರ್ಜಿ ಮಾಡ್ಲೇ ಇಲ್ಲ. ಮುಖ್ಯವಾಗಿ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಪದೇ ಪದೇ ಎಡವಿದ್ದ ಇವರಿಬ್ಬರು, ಫೇಲ್ಯೂರ್ ಆಟಗಾರರನ್ನೇ ಫೀಲ್ಡ್​ಗಿಳಿಸಿದ್ರು. ಇದಿಷ್ಟೇ ಅಲ್ಲ.! ಆ್ಯಕ್ಷನ್​​ನಲ್ಲೂ ಇವರ ಸ್ಟ್ರಾಟರ್ಜಿ ಅಟ್ಟರ್​ ಫ್ಲಾಫ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
2016ರಲ್ಲಿ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್​ಸಿಬಿ ಆ ಬಳಿಕ ಮತ್ತೆ ಪ್ರಶಸ್ತಿ ಸುತ್ತಿಗೆ ತಲುಪಿರಲಿಲ್ಲ. 2020, 2021 ಹಾಗೂ 2022ರಲ್ಲಿ ಪ್ಲೇಆಫ್ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಬಾರಿ ಲೀಗ್​ನಿಂಲೇ ಹೊರಬಿದ್ದಿತ್ತು. ಹೀಗಾಗಿಯೇ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದೆ.

ಹೊಸ ಕೋಚ್ ಹುಡುಕಾಟದಲ್ಲಿ ಆರ್​ಸಿಬಿ ಫ್ರಾಂಚೈಸಿ

ನಿರ್ದೇಶಕ ಮೈಕ್ ಹೆಸನ್, ಕೋಚ್ ಸಂಜಯ್ ಬಂಗಾರ್​ಗೆ ಕೊಕ್​ ನೀಡಲು ನಿರ್ಧರಿಸಿರುವ ಆರ್​ಸಿಬಿ ಫ್ರಾಂಚೈಸಿ, ಈಗಾಗಲೇ ಕೆಲ ಕೋಚ್​ಗಳ ಜೊತೆ ಮಾತುಕತೆ ಕೂಡ ಮಾಡಿದೆ. RCB ವಿದೇಶಿ ಮುಖ್ಯ ಕೋಚ್‌ಗಾಗಿ ಹುಡುಕಾಟ ನಡೆಸ್ತಿದೆಯೋ ಅಥವಾ ಭಾರತೀಯ ಕೋಚ್​​ಗಳ ನೇಮಕಕ್ಕೆ ಒಲುವು ತೋರಿದೆಯೋ ಅನ್ನೋದು ಅಸ್ಪಷ್ಟ. ಈ ರೇಸ್​ನಲ್ಲಿ ಮಾತ್ರ ದಿಗ್ಗಜರುಗಳ ಹೆಸರುಗಳೇ ಕೇಳಿ ಬರ್ತಿವೆ.

ಡೈರೆಕ್ಟರ್ ರೇಸ್​​ನಲ್ಲಿ ದಿಗ್ಗಜ ರಿಕಿ ಪಾಂಟಿಂಗ್ ಹೆಸರು

ಇವರಿಗೆ ಕಿಕ್​ ನೀಡೋ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಡೈರೆಕ್ಟರ್ ರೇಸ್​​ನಲ್ಲಿ ದಿಗ್ಗಜ ರಿಕಿ ಪಾಂಟಿಂಗ್, ಕೋಚ್ ಹುದ್ದೆಗೆ ಎಬಿ ಡಿವಿಲಿಯರ್ಸ್ ಹೆಸರು ಮುಂಚೂಣಿಯಲ್ಲಿವೆ. ಈ ಇಬ್ಬರ ಹೆಸರುಗಳ ನಡುವೆ ರವಿ ಶಾಸ್ತ್ರಿ ಹೆಸರು ಕೂಡ ಕೇಳಿ ಬರುತ್ತಿವೆ. ಬಹುತೇಕ ಕೊಹ್ಲಿ ಮಾತನ್ನೇ ಕೇಳೋ ಆರ್​ಸಿಬಿ ಫ್ರಾಂಚೈಸಿ, ಈಗ ರವಿ ಶಾಸ್ತ್ರಿಯನ್ನ ಮಾಸ್ಟರ್​ ಮೈಂಡ್ ಆಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ.! ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್​ನಿಂದ ಹೊರ ಬಂದಿರೋ ಶೇನ್​ ವಾಟ್ಸನ್ ಹೆಸರೂ ಕೂಡ ಚಾಲ್ತಿಯಲ್ಲಿದೆ.

ಒಟ್ನಲ್ಲಿ.. RCB ಫ್ರಾಂಚೈಸಿ ಕೊನೆಗೂ ನಿದ್ದೆಯಿಂದ ಎದ್ದು ಬುದ್ಧೀ ಕಲಿತಿದೆ. ಮುಂದಿನ IPL ಸೀಸನ್​ನೊಳಗಾಗಿ ತಂಡದಲ್ಲಿ ಭಾರಿ ಬದಲಾವಣೆ ಮಾಡಲು ರೆಡಿಯಾಗಿದೆ. ಮುಖ್ಯವಾಗಿ ತಂಡದ ಕೋಚ್​ ಮತ್ತು ಡೈರೆಕ್ಟರ್​ನ ಬದಲಾಯಿಸುವ ಮನಸ್ಸು ಮಾಡಿದೆ. ಆದ್ರೆ, ಎಂಥಹ ಪ್ರತಿಭಾವಂತ ಕೋಚ್​ಗೆ ಮಣೆ ಹಾಕಿ ಕಪ್​ ಗೆಲ್ಲೋ ಕನಸು ನನಸು ಮಾಡುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB Game Plan: ಆರ್​ಸಿಬಿಯಲ್ಲಿ ಮೇಜರ್​​ ಸರ್ಜರಿ ಪಕ್ಕಾ.. ಇಬ್ಬರು ದಂತಕತೆಗಳಿಗೆ ಗೇಟ್​ಪಾಸ್​ ಗ್ಯಾರಂಟಿ..!

https://newsfirstlive.com/wp-content/uploads/2023/07/RCB.jpg

Load More