newsfirstkannada.com

ಆರ್​​ಸಿಬಿಗೆ ಭರ್ಜರಿ ಗುಡ್​ನ್ಯೂಸ್​​; ಬೆಂಗಳೂರು ತಂಡಕ್ಕೆ ಸಿಕ್ಕೇಬಿಟ್ರು Jr. ಕ್ರಿಸ್​ ಗೇಲ್​​!

Share :

Published September 3, 2024 at 5:41pm

    18ನೇ ಐಪಿಎಲ್​ ಸೀಸನ್​ಗೆ ಈಗಿನಿಂದಲೇ ಭರ್ಜರಿ ತಯಾರಿ

    ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರ ಮೇಲೆ ಆರ್​​ಸಿಬಿ ಕಣ್ಣು

    ಹರಾಜಿಗೆ ಮುನ್ನವೇ ಆರ್​​ಸಿಬಿಗೆ ಸಿಕ್ಕೇಬಿಟ್ರು ಜೂ. ಕ್ರಿಸ್​ ಗೇಲ್​​

ಇತ್ತೀಚೆಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಯುವ ಬ್ಯಾಟರ್​ ಅನೂಜ್​ ರಾವತ್​​​ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಇನ್ನಿಂಗ್ಸ್‌ ಆಡಿದ್ರು. ಕೇವಲ 66 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದರು. ಈ ವೇಳೆ ಶತಕ ಸಿಡಿಸಿದ ನಂತರ ಅನೂಜ್​ ಆರ್‌ಸಿಬಿ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ರೀತಿ ಸೆಲೆಬ್ರೇಟ್​​ ಮಾಡಿದ್ರು.

ಇನ್ನು, ಶತಕ ಸಿಡಿಸಿದ ನಂತರ ಮಾತಾಡಿದ ಅನೂಜ್​ ರಾವತ್​​, ಮುಂದಿನ ಐಪಿಎಲ್​ನಲ್ಲಿ ಆರ್​​ಸಿಬಿ ಪರ ಉತ್ತಮ ಪ್ರದರ್ಶನ ನೀಡಬೇಕು ಎಂದಿದ್ದೇನೆ. ನನಗೆ ಜೂನಿಯರ್​ ಕ್ರಿಸ್​ ಗೇಲ್​ ಆಗುವ ಆಸೆ. ಹಾಗಾಗಿ ಈ ರೀತಿ ಸೆಲೆಬ್ರೇಟ್​ ಮಾಡುತ್ತೇನೆ. ಶತಕ ಬಾರಿಸಿದಾಗಲೆಲ್ಲ ಕ್ರಿಸ್​ ಗೇಲ್​ ಹಾಗೇ ಸಂಭ್ರಮಿಸುತ್ತೇನೆ ಎಂದರು.

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈಗಾಗಲೇ ಎಲ್ಲಾ ಐಪಿಎಲ್​ ತಂಡಗಳು ಮೆಗಾ ಹರಾಜಿಗಾಗಿ ಭಾರೀ ಸಿದ್ದತೆ ನಡೆಸಿಕೊಂಡಿವೆ. ಇದರ ಮಧ್ಯೆ ಆರ್​​​ಸಿಬಿ ಯಾರನ್ನು ರೀಟೈನ್​ ಮಾಡಿಕೊಳ್ಳಬೇಕು ಎಂದು ಪ್ಲಾನ್​ ಮಾಡಿಕೊಂಡಿದೆ. ಈ ಹೊತ್ತಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ವಿಕೆಟ್‌ ಕೀಪರ್ ಅನೂಜ್​ ರಾವತ್ ಅಬ್ಬರಿಸುತ್ತಿದ್ದಾರೆ.

ಆರ್​​​ಸಿಬಿ ಸೇರಿದ ನಂತರ ಅನೂಜ್​​ ರಾವತ್​​ ಹೀರೋ ಆಗಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನವೇ ಅನೂಜ್​ ​​ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಸಿಡಿಲಬ್ಬರದ ಆಟ ಆಡಿದ್ದಾರೆ. ಡಿಪಿಎಲ್​ನ 26ನೇ ಪಂದ್ಯದಲ್ಲಿ ಪುರಾಣಿ ಡೆಲ್ಲಿ ವಿರುದ್ಧ ಈಸ್ಟ್ ಡೆಲ್ಲಿ ರೈಡರ್ಸ್ ಪರ ಇವರು ಶತಕ ಸಿಡಿಸಿ ದಾಖಲೆ ಬರೆದರು.

ಸ್ಫೋಟಕ ಶತಕ ಸಿಡಿಸಿದ್ದ ಜೂ. ಕ್ರಿಸ್​ ಗೇಲ್​​

ಈಸ್ಟ್ ಡೆಲ್ಲಿ ರೈಡರ್ಸ್ ಪರ ಓಪನರ್​ ಆಗಿ ಬಂದಿದ್ದ ಅನೂಜ್​ ರಾವತ್​​ ಸುಜಲ್​ ಸಿಂಗ್​ಗೆ ಸಾಥ್​ ನೀಡಿದ್ರು. ಮೊದಲ ಓವರ್​ನಿಂದಲೂ ಬ್ಯಾಟ್​ ಬೀಸಿದ ಇವರು​​​ 20ನೇ ಓವರ್​ಗೂ ಕ್ರೀಸ್​​ನಲ್ಲೇ ನಿಂತು ಅಜೇಯರಾಗಿ ಉಳಿದರು. ಇನ್ನಿಂಗ್ಸ್​ ಉದ್ಧಕ್ಕೂ ಎದುರಾಳಿ ಬೌಲರ್​​​ಗಳ ಬೆಂಡೆತ್ತಿದ ಅನೂಜ್​ ರಾವತ್​​ ಅವರು ಕೇವಲ 66 ಬಾಲ್​​ನಲ್ಲಿ 121 ರನ್​​ ಚಚ್ಚಿದ್ರು. ಬರೋಬ್ಬರಿ 11 ಭರ್ಜರಿ ಸಿಕ್ಸರ್​​ ಮತ್ತು ಬ್ಯಾಕ್​ ಟು ಬ್ಯಾಕ್​​ 6 ಫೋರ್​ ಬಾರಿಸಿದ್ರು. ಈಸ್ಟ್ ಡೆಲ್ಲಿ ರೈಡರ್ಸ್ ತಂಡ 20 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 241 ರನ್ ಕಲೆ ಹಾಕಲು ಸಹಾಯ ಮಾಡಿದ್ರು.

ಇದನ್ನೂ ಓದಿ: 6,6,6,6,6,6,6,6,6,6,6; ಅಬ್ಬಬ್ಬಾ! ಸ್ಫೋಟಕ ಶತಕ ಸಿಡಿಸಿದ RCB ಯುವ ಬ್ಯಾಟರ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​ಸಿಬಿಗೆ ಭರ್ಜರಿ ಗುಡ್​ನ್ಯೂಸ್​​; ಬೆಂಗಳೂರು ತಂಡಕ್ಕೆ ಸಿಕ್ಕೇಬಿಟ್ರು Jr. ಕ್ರಿಸ್​ ಗೇಲ್​​!

https://newsfirstlive.com/wp-content/uploads/2024/09/Chris-Gayle_Kohli.jpg

Load More