/newsfirstlive-kannada/media/post_attachments/wp-content/uploads/2023/11/RCB_123.jpg)
ಹೊಸ​ ಕೋಚಿಂಗ್​ ಸ್ಟಾಫ್​ ಜೊತೆಗೆ ಈ ಬಾರಿಯಾದ್ರೂ ಕಪ್​ ಗೆಲ್ಲಬೇಕು ಎಂದು ಆರ್​​ಸಿಬಿ ಪಣ ತೊಟ್ಟಿರೋದೆನೋ ನಿಜ. ಆದರೆ ಮೊದಲ ಹೆಜ್ಜೆಯಲ್ಲೇ ಎಡವಿತಾ ಅನ್ನೋ ಪ್ರಶ್ನೆ ಇದೀಗ ಹುಟ್ಟಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ಮಾಡಬೇಕಾಗಿದ್ದ ರಿಟೈನ್​ - ರಿಲೀಸ್​ ಪ್ರಕ್ರಿಯೆಯಲ್ಲೇ ಫ್ರಾಂಚೈಸಿ ಮುಗ್ಗರಿಸಿದಂತಿದೆ. ಆರ್​​ಸಿಬಿ ಲೆಕ್ಕಾಚಾರ ಏನು ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.
ಐಪಿಎಲ್​ ಸೀಸನ್​​ 17ಕ್ಕೆ ಹೊಸ ಲುಕ್​ನೊಂದಿಗೆ ಕಣಕ್ಕಿಳಿಯಲು ಆರ್​ಸಿಬಿ ತಂಡದ ಯೋಜನೆ ರೆಡಿಯಾಗಿದೆ. ರಾಯಲ್​ ಚಾಲೆಂಜರ್​ ಆರ್ಮಿಗೆ ಎಂಟ್ರಿ ಕೊಟ್ಟಿರುವ ಹೊಸ ಮಾಸ್ಟರ್​ ಮೈಂಡ್​ಗಳು, ಫಸ್ಟ್​ ಟಾಸ್ಕ್​ ಕಂಪ್ಲೀಟ್​ ಮಾಡಿದ್ದಾರೆ. ಹೊಸ ಕೋಚ್​ ಆ್ಯಂಡಿ ಫ್ಲವರ್​​, ನೂತನ ಡೈರೆಕ್ಟರ್​ ಮೊ ಬೊಟ್ ಮಿನಿ ಹರಾಜಿಗೂ ಮುನ್ನ ರಿಟೈನ್​, ರಿಲೀಸ್​ ಪ್ರಕ್ರಿಯೆಯನ್ನ ಸಕ್ಸಸ್​ಫುಲ್​ ಆಗಿ ಮುಗಿಸಿದ್ದಾರೆ. ಆದ್ರೆ, ಇವರಿಬ್ಬರ ಲೆಕ್ಕಾಚಾರ ಏನು ಅನ್ನೋದು ಮಾತ್ರ ಯಾರಿಗೂ ಅರ್ಥವಾಗ್ತಿಲ್ಲ.
11 ಆಟಗಾರರನ್ನ ರಿಲೀಸ್​ ಮಾಡಿದ ಆರ್​ಸಿಬಿ.!
ಕಪ್​ ನಮ್ದೇ ಅಂತಾ ಪ್ರತಿ ಬಾರಿ ಐಪಿಎಲ್​ ಸೀಸನ್​ ಆರಂಭಿಸೋ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚಾಂಪಿಯನ್​ ಪಟ್ಟಕ್ಕೇರುವಲ್ಲಿ ವಿಫಲವಾಗಿದೆ. 16 ಸೀಸನ್​​ನಲ್ಲಾಗದ್ದನ್ನ 17ನೇ ಸೀಸನ್​ನಲ್ಲಾದ್ರೂ ಸಾಧಿಸಬೇಕು ಅನ್ನೋದು ತಂಡದ ಲೆಕ್ಕಾಚಾರ. ಹೀಗಾಗಿ IPL ಮಿನಿ ಹರಾಜಿಗೂ ಮುನ್ನ ಬೆಂಗಳೂರು ತಂಡ 11 ಆಟಗಾರರಿಗೆ ಕೊಕ್​ ಕೊಟ್ಟಿದೆ. ಮೊದಲೇ ನಿರೀಕ್ಷೆ ಮಾಡಿದಂತೆ ಕೆಲ ಆಟಗಾರರಿಗೆ ಆರ್​​ಸಿಬಿ ಗೇಟ್​ಪಾಸ್​​ ನೀಡಿದೆ. ಇದರ ಜೊತೆಗೆ ಅನಿರೀಕ್ಷಿತ ಹೆಸರುಗಳನ್ನ ರಿಲೀಸ್​ ಮಾಡಿ ಫ್ಯಾನ್ಸ್​ಗೆ ಸರ್​ಪ್ರೈಸ್​ ನೀಡಿದೆ.
ಇದನ್ನು ಓದಿ: ಹರಾಜಿಗೆಂದೇ RCB ಬಾಕಿ ಉಳಿಸಿಕೊಂಡಿದೆ ಬಹುದೊಡ್ಡ ಮೊತ್ತ.. CSK, SRH​ ಬಳಿ ಎಷ್ಟು ಕೋಟಿ ಇದೆ ಗೊತ್ತಾ?
ಹೇಜಲ್​ವುಡ್​, ಬ್ರೇಸ್​ವೆಲ್​ಗೆ ಶಾಕ್​.!
ನಾವು ಮೊದಲೇ ಹೇಳಿದಂತೆ ಸ್ಪಿನ್ನರ್​ ವನಿಂದು ಹಸರಂಗ, ವೇಗಿ ಹರ್ಷಲ್​ ಪಟೇಲ್​ಗೆ ಆರ್​ಸಿಬಿ ಕೊಕ್​ ಕೊಟ್ಟಿದೆ. ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ಪರ್ಫಾಮ್​ ಮಾಡಲು ಇವ್ರು ಒದ್ದಾಡ್ತಾ ಇರೋದು ಇದ್ರ ಹಿಂದಿನ ರೀಸನ್​ ಅನ್ನೋದ್ರಲ್ಲಿ ಡೌಟೇ ಬೇಡ.. ಇದ್ರ ಜೊತೆಗೆ ಜೋಶ್​ ಹೇಜಲ್​ವುಡ್​, ಮಿಚೆಲ್​ ಬ್ರೇಸ್​ವೆಲ್​ರಂತಹ ಕೆಲ ಮಟ್ಟಿಗೆ ನಂಬಿಕೆ ಉಳಿಸಿಕೊಂಡಿದ್ದ ಆಟಗಾರರಿಗೂ ಗೇಟ್​ ಪಾಸ್​ ನೀಡಿ ಶಾಕ್​ ನೀಡಿದೆ.
ಆರ್​ಸಿಬಿಯಿಂದ ಯಾರಿಗೆ ಕೊಕ್​.?
ಸ್ಪಿನ್ನರ್​​ ವನಿಂದು ಹಸರಂಗ, ವೇಗಿಗಳಾದ ಹರ್ಷಲ್​ ಪಟೇಲ್​, ಜೋಶ್​ ಹೇಜಲ್​ವುಡ್​​ ತಂಡದಿಂದ ಹೊರ ಬಿದ್ದ ಸ್ಟಾರ್​​ ಆಟಗಾರರಾಗಿದ್ದಾರೆ. ಇನ್ನುಳಿದಂತೆ ವೇಗಿ ವೇಯ್ನ್​ ಪಾರ್ನೆಲ್​, ಆಲ್​​ರೌಂಡರ್​ ಮಿಚೆಲ್​​ ಬ್ರೇಸ್​ವೆಲ್​, ಡೇವಿಡ್​ ವಿಲ್ಲಿಗೂ ಗುಡ್​ ಬೈ ಹೇಳಿದೆ. ಯಂಗ್​​ಸ್ಟರ್​ಗಳಾದ ಫಿನ್​ ಅಲೆನ್​, ಸೋನು ಯಾದವ್​ ಹಾಗೂ ಅವಿನಾಶ್​ ಸಿಂಗ್​ಗೆ ಆರ್​ಸಿಬಿ ಗುಡ್​ ಬೈ ಹೇಳಿದೆ. ಇನ್ನು, ಭಾರತದ ಸೀನಿಯರ್​ ಆಟಗಾರರಾದ ಸಿದ್ಧಾರ್ಥ್​ ಕೌಲ್​, ಕೇದಾರ್​ ಜಾಧವ್​ ಕೂಡ ತಂಡದಿಂದ ಹೊರ ಬಿದ್ದಿದ್ದಾರೆ.
ಬೌಲಿಂಗ್​ ಯುನಿಟ್​ಗೆ ‘ಹೋಲ್​ಸೇಲ್’​ ಕೊಕ್​.?
ರಿಟೈನ್​ - ರಿಲೀಸ್​ ಪ್ರಕ್ರಿಯೆಯಲ್ಲಿ ಆರ್​​ಸಿಬಿ ತಂಡ ಎಲ್ಲರ ಲೆಕ್ಕಾಚಾರವನ್ನ ಬುಡಮೇಲು ಮಾಡಿದೆ. ಪ್ರಮುಖವಾಗಿ ಬೌಲಿಂಗ್​ ಯುನಿಟ್​​ ವಿಚಾರದಲ್ಲಿ ಟಫ್​ ಡಿಶಿಶನ್​ ತೆಗೆದುಕೊಂಡಿದೆ. ಪ್ರಮುಖ ಮೂವರು ವೇಗಿಗಳು, ಆಲ್​​ರೌಂಡರ್​ ವನಿಂದು ಹಸರಂಗಗೆ ಕೊಕ್​ ಕೊಟ್ಟಿರೋದ್ರ ಹಿಂದಿರೋ ಪ್ಲಾನ್​ ಏನು ಅನ್ನೋದು ಸದ್ಯ ಕುತೂಹಲ ಮೂಡಿಸಿದೆ. ಜೋಶ್​ ಹೇಜಲ್​ವುಡ್​ಗೆ ಗೇಟ್​ಪಾಸ್​ ನೀಡಿರುವ ಆರ್​ಸಿಬಿ ಮಿಚೆಲ್ ​ಸ್ಟಾರ್ಕ್​ಗೆ ಮಣೆ ಹಾಕೋ ಯೋಜನೆ ರೂಪಿಸಿದ್ಯಾ ಅನ್ನೋ ಸುದ್ದಿ ಸದ್ಯ ಸೌಂಡ್​ ಮಾಡ್ತಿದೆ.
ತಂಡದಲ್ಲೇ ಉಳಿದ ಕಾರ್ತಿಕ್​, ಫುಲ್​ ಸರ್​ಪ್ರೈಸ್​.!
ಮಿಡಲ್​ ಆರ್ಡರ್​ ಹಾಗೂ ಲೋವರ್​ ಆರ್ಡರ್​ ಬ್ಯಾಟಿಂಗ್​ ಕಳೆದ ಸೀಸನ್​ನಲ್ಲಿ ಆರ್​​ಸಿಬಿ ತಂಡವನ್ನ ಬಿಡದೇ ಕಾಡಿತ್ತು. ಹೀಗಾಗಿ ಕಳೆದ ಸೀಸನ್​ನಲ್ಲಿ ಕಳಪೆ ಪರ್ಫಾಮೆನ್ಸ್​​ ನೀಡಿದ ಬ್ಯಾಟ್ಸ್​ಮನ್​ಗಳಿಗೆ ಗೇಟ್​ ಪಾಸ್​ ಖಾಯಂ ಎನ್ನಲಾಗಿತ್ತು. ಜೊತೆಗೆ 38 ವರ್ಷದ ಫಿನಿಷರ್​ ಕಾರ್ತಿಕ್​ಗೂ ಕೊಕ್​ ಕೊಡಲಾಗುತ್ತೆ ಎಂಬ ನಿರೀಕ್ಷೆಯಿತ್ತು. ಆದ್ರೆ, ಸರ್​​​ಪ್ರೈಸ್​ ರೀತಿಯಲ್ಲಿ ಬ್ಯಾಟ್ಸ್​ಮನ್​ಗಳು ಬಚಾವ್​ ಆಗಿದ್ದಾರೆ.
ಹರಾಜಿನಲ್ಲಿ ಹುಡುಕಾಟ, ಮುಂದಿರೋದು ಬಿಗ್​ಟಾಸ್ಕ್​.!
ಸದ್ಯ ತಂಡದ ರಿಟೈನ್​-ರಿಲೀಸ್​ ಕೆಲಸ ಮುಗಿಸಿರೋ ಆರ್​​ಸಿಬಿ ಕೋಚಿಂಗ್​ ಸ್ಟಾಫ್​ಗಳ ಮುಂದೆ ದೊಡ್ಡ ಟಾಸ್ಕ್​ಯಿದೆ. ಹರಾಜಿನಲ್ಲಿ ಪರ್ಫೆಕ್ಟ್​​ ತಂಡ ಕಟ್ಟೋದು ಸುಲಭದಲ್ಲಿಲ್ಲ. 40.75 ಕೋಟಿ ಬಜೆಟ್ ಪರ್ಸ್​​ನಲ್ಲಿ​ ಸದ್ಯ ಬಾಕಿ ಉಳಿದಿದ್ದು, ಮಿನಿ ಹರಾಜಿ ಬಲಿಷ್ಟ ತಂಡವನ್ನ ಕಟ್ಟುವ ಸವಾಲು, ಮ್ಯಾನೇಜ್​ಮೆಂಟ್​ ಮುಂದಿದೆ. ಈ ಸವಾಲನ್ನ ಹೊಸ ಕೋಚ್​, ಹೊಸ ಡೈರೆಕ್ಟರ್​ ಹೇಗೆ ನಿಭಾಯಿಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us