Advertisment

RCBಯಿಂದ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಕನ್ನಡಿಗ ರಾಹುಲ್​​ ಎಂಟ್ರಿಗೆ ಹಿಂಟ್ ಕೊಟ್ಟ ಮೆಂಟರ್​, ಏನದು?

author-image
Bheemappa
Updated On
RCBಯಿಂದ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಕನ್ನಡಿಗ ರಾಹುಲ್​​ ಎಂಟ್ರಿಗೆ ಹಿಂಟ್ ಕೊಟ್ಟ ಮೆಂಟರ್​, ಏನದು?
Advertisment
  • ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು RCB ಬಿಗ್ ಪ್ಲಾನ್?
  • ಕರ್ನಾಟಕದ ಕ್ಲಾಸಿಕ್​ ಬ್ಯಾಟ್ಸ್​ಮನ್ ಮೇಲೆ ಹದ್ದಿನ ಕಣ್ಣು
  • ಕೆ.ಎಲ್​ ರಾಹುಲ್ ವಿಚಾರದಲ್ಲಿ​ ಫ್ರಾಂಚೈಸಿಯ ಪ್ಲಾನ್​ ಏನು?

ಐಪಿಎಲ್​ ರಿಟೈನ್​​ ಡೆಡ್​​ಲೈನ್ ಹತ್ತಿರವಾದಂತೆ​ ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಯಾರನ್ನ ರಿಲೀಸ್​ ಮಾಡಬೇಕು, ಯಾರನ್ನ ರಿಟೈನ್​ ಮಾಡಿಕೊಳ್ಳಬೇಕು ಎಂಬ ಲೆಕ್ಕಾಚಾರ ಜೋರಾಗಿ ನಡೀತಿದೆ. ದಿನಕ್ಕೊಂದು ದೊಡ್ಡ ದೊಡ್ಡ ಸುದ್ದಿಗಳು ಹೊರ ಬೀಳುತ್ತಿವೆ. ಇದೀಗ ಕರ್ನಾಟಕದ ಕ್ರಿಕೆಟ್​ ಅಭಿಮಾನಿಗಳಿಗೆ RCB ಮೆಂಟರ್​ ದಿನೇಶ್​ ಕಾರ್ತಿಕ್​ ಗುಡ್ ನ್ಯೂಸ್​ ಕೊಟ್ಟಿದ್ದಾರೆ. ಕನ್ನಡಿಗ ಕೆ.ಎಲ್​ ರಾಹುಲ್ ವಿಚಾರದಲ್ಲಿ​ ಆರ್​ಸಿಬಿ ಪ್ಲಾನ್​ ಏನು ಅನ್ನೋದನ್ನ ಹೇಳಿದ್ದಾರೆ.

Advertisment

ಐಪಿಎಲ್​ ರಿಟೈನ್ಶನ್​​ ಡೆಡ್​​ಲೈನ್​ ಹತ್ತಿರವಾದಂತೆ, ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಹೊಸದಾಗಿ ತಂಡ ಕಟ್ಟೋ ಸಿದ್ಧತೆ ಜೋರಾಗಿ ನಡೀತಿದೆ. ರಿಟೈನ್ಶನ್​​​ ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಇದೀಗ ಆಕ್ಷನ್​ನಲ್ಲಿ ಯಾವೆಲ್ಲಾ ಆಟಗಾರರಿಗೆ ಗಾಳ ಹಾಕಬೇಕು ಅನ್ನೋ ಬ್ಲೂಪ್ರಿಂಟ್​ ರೆಡಿಯಾಗುತ್ತಿದೆ. ಟ್ಯಾಲೆಂಟೆಡ್​​ ಸ್ಟಾರ್​​ ಆಟಗಾರರನ್ನೇ ಟಾರ್ಗೆಟ್​ ಮಾಡಿರುವ ಆರ್​​ಸಿಬಿ, ಬಲಿಷ್ಠ ತಂಡ ಕಟ್ಟುವ ಯೋಜನೆ ರೂಪಿಸಿದೆ. ಇದ್ರ ನಡುವೆ ಆರ್​​ಸಿಬಿಯ ಮೆಂಟರ್​ ದಿನೇಶ್​ ಕಾರ್ತಿಕ್​, ಕರ್ನಾಟಕದ ಕ್ರಿಕೆಟ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಪಾಂಡ್ಯ ಬದುಕು ಬದಲಿಸಿದ ಆ ಘಟನೆಯಾದ್ರೂ ಏನು.. ಸ್ಟಾರ್ ಆಲ್​ರೌಂಡರ್​ನ ಸಖತ್ ಸ್ಟೋರಿ!

publive-image

ಕನ್ನಡಿಗ ಕೆ.ಎಲ್​​​ ರಾಹುಲ್​ ಮೇಲೆ ಆರ್​​ಸಿಬಿ ಕಣ್ಣು.!

ಕಳೆದ ಕೆಲ ತಿಂಗಳಿಂದ ಇದ್ದ ರೂಮರ್ಸ್​ ನಿಜವಾಗುವ ದಿನ ಹತ್ತಿರ ಬಂದಿದೆ. ಕರ್ನಾಟಕ ಕ್ರಿಕೆಟ್​ ಪ್ರೇಮಿಗಳು ಬಯಸಿದಂತೆ ಮುಂದಿನ ಸೀಸನ್​ನಲ್ಲಿ ಆರ್​​ಸಿಬಿ ಪರ ಕೆ.ಎಲ್​ ರಾಹುಲ್​ ಬ್ಯಾಟ್​ ಬೀಸೋ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕದ ಕ್ಲಾಸಿಕ್​ ಬ್ಯಾಟ್ಸ್​ಮನ್​ ಮೇಲೆ ಆರ್​​ಸಿಬಿ ಫ್ರಾಂಚೈಸಿ ಹದ್ದಿನ ಕಣ್ಣಿಟ್ಟಿರೋದು ಇದೀಗ ಬಹಿರಂಗವಾಗಿದೆ. ಸ್ವತಃ ತಂಡದ ಮೆಂಟರ್​ ದಿನೇಶ್​ ಕಾರ್ತಿಕ್​ ಈ ಬಗ್ಗೆ ಸುಳಿವು ನೀಡಿದ್ದಾರೆ.

Advertisment

ಯಾರು ಮೊದಲ ಬಾರಿ IPL ಟ್ರೋಫಿ ಗೆಲ್ತಾರೆ.? ವಿರಾಟ್​ ಕೊಹ್ಲಿ ಅಥವಾ ಕೆ.ಎಲ್​ ರಾಹುಲ್​. ನಾನು ಆರ್​​ಸಿಬಿ ಕೋಚ್​. ವಿರಾಟ್​ ಕೊಹ್ಲಿ ತಂಡದ ಭಾಗ. RCB ಮೆಂಟರ್​ ಆಗಿ ಬೇರೆಯವರ ಹೆಸರನ್ನ ಹೇಳೋಕಾಗುತ್ತಾ?. ಕೊಹ್ಲಿ ಮೊದಲು IPL ಟ್ರೋಫಿ ಗೆಲ್ಲಬೇಕು ಎಂದು ಪ್ರಾರ್ಥಿಸುತ್ತೇನೆ. ಅದೇ ತಂಡದಲ್ಲಿ ಕೆ.ಎಲ್​ ರಾಹುಲ್​ ಇದ್ರೆ ಇನ್ನೂ ಚೆನ್ನಾಗಿರುತ್ತೆ. ಇಬ್ಬರೂ ಖುಷಿಯಾಗ್ತಾರೆ. ನಾನೂ ಖುಷಿಯಾಗ್ತಿನಿ.

ದಿನೇಶ್​ ಕಾರ್ತಿಕ್​, RCB ಮೆಂಟರ್​

ಆರ್​​ಸಿಬಿಯ ಮೆಂಟರ್​ ಬಾಯಲ್ಲಿ ಬಂದ ಮಾತುಗಳಿವು. ಈ ಮಾತುಗಳು ಕೆ.ಎಲ್​ ರಾಹುಲ್​ ಖರೀದಿಗೆ ಆರ್​​ಸಿಬಿ ರೆಡಿಯಾಗಿದೆ ಅನ್ನೋ ರೂಮರ್ಸ್​ ನಿಜ ಅನ್ನೋ ಸುಳಿವು ನೀಡುತ್ತಿವೆ. ಲಕ್ನೋ ಫ್ರಾಂಚೈಸಿಯಿಂದ ರಾಹುಲ್​ ರಿಲೀಸ್​ ಆಗೋದು ಕನ್​ಫರ್ಮ್​ ಆಗಿದೆ. ಇದೇ ಬೆಸ್ಟ್​ ಚಾನ್ಸ್​ ಅಂದುಕೊಂಡಿರೋ ಆರ್​​ಸಿಬಿ ಬಿಗ್​ಫಿಶ್​ಗೆ ಗಾಳ ಹಾಕೋ ಯತ್ನದಲ್ಲಿದೆ. ರಾಹುಲ್​ ಖರೀದಿಸಿದ್ರೆ, ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದಂತಾಗಲಿದೆ.

‘ಫ್ಲಾಪ್’​ ಡುಪ್ಲೆಸಿಗೆ ಗೇಟ್​ಪಾಸ್​​.. ರಾಹುಲ್​ಗೆ ನಾಯಕತ್ವ.!

17 ಸೀಸನ್​​ಗಳಿಂದ ದಿಗ್ಗಜ ಆಟಗಾರರು ಬಂದು ಹೋಗಿದ್ರೂ ಆರ್​​ಸಿಬಿ ಈವರೆಗೆ ಕಪ್​ ಗೆದ್ದಿಲ್ಲ. ಕಳೆದ 3 ವರ್ಷದಿಂದ ತಂಡದ ನಾಯಕನಾಗಿರೋ ಫಾಫ್​ ಡುಪ್ಲೆಸಿ ಕೂಡ ಐಪಿಎಲ್​ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಫೇಲ್​ ಆಗಿದ್ದಾರೆ. ಹೀಗಾಗಿ ಫ್ಲಾಪ್​ ಆಗಿರುವ ಫಾಫ್ ಡುಪ್ಲೆಸಿಯನ್ನ ಕೈ ಬಿಡಲು ಸಜ್ಜಾಗಿದ್ದು, ಹೊಸ ನಾಯಕನ ಹುಡುಕಾಟ ನಡೆಸ್ತಿದೆ. ರಾಹುಲ್​ನ ಹರಾಜಿನಲ್ಲಿ ಖರೀದಿಸಿದ್ರೆ, ತಂಡಕ್ಕೆ ಸಮರ್ಥ ನಾಯಕ ಸಿಕ್ಕಂತಾಗಲಿದೆ.

Advertisment

ಇದನ್ನೂ ಓದಿ: ‘ಒಳಗೆ ಕುಳಿತವನದ್ದೇ ಕುರ್ಚಿ, ಒದ್ದವನದ್ದೇ ಚೆಂಡು’-ಡಿ.ಕೆ ಶಿವಕುಮಾರ್

publive-image

ಕನ್ನಡಿಗನ ಖರೀದಿ ಹಿಂದೆ ಕಮರ್ಷಿಯಲ್​ ಲೆಕ್ಕಾಚಾರ.!

ಕಪ್​ ಗೆಲ್ಲೋ ಸ್ಟಾರ್ಟಜಿಯಲ್ಲಿ ಎಡವಿದ್ರೂ, ಕಮರ್ಷಿಯಲ್​ ಲೆಕ್ಕಾಚಾರದಲ್ಲಿ ಆರ್​​ಸಿಬಿ ಎಡವಿದ್ದೇ ಇಲ್ಲ. ಇದೀಗ ರಾಹುಲ್​ ಖರೀದಿಗೆ ಮುಂದಾಗಿರೋದ್ರ ಹಿಂದೆ ಈ ಲೆಕ್ಕಾಚಾರ ಇದೆ. ಚಿನ್ನಸ್ವಾಮಿಯಲ್ಲಿ ಆಡಿದ ಬೆಳೆದ ರಾಹುಲ್​, ಹೋಮ್​ ಟೀಮ್​ನ ಆರ್​​ಸಿಬಿ ಕ್ಯಾಪ್ಟನ್ ಫ್ಯಾನ್ಸ್​ ಫುಲ್​ ಖುಷ್​ ಆಗ್ತಾರೆ. ತಂಡದ ಕ್ರೇಜ್​​ ನೆಕ್ಸ್ಟ್​​ ಲೆವೆಲ್​ಗೆ ಹೋಗುತ್ತೆ. ಜೊತೆಗೆ ಹಲವು ವರ್ಷಗಳಿಂದ ತಂಡಕ್ಕೆ ಅಂಟಿರುವ ಕನ್ನಡಿಗರ ಕಡೆಗಣನೆಯ ಅಪವಾದವೂ ತಪ್ಪಲಿದೆ.

ಕಳೆದ ಕೆಲ ತಿಂಗಳಿಂದ ಹಬ್ಬಿರುವ ಆರ್​​ಸಿಬಿಗೆ ರಾಹುಲ್​ ಎಂಟ್ರಿಯ ರೂಮರ್ಸ್​ ನಿಜವಾಗೋ ಸಾಧ್ಯತೆ ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ. ಆರ್​​ಸಿಬಿ ಫ್ರಾಂಚೈಸಿ ಕೂಡ ಕನ್ನಡಿಗನ ಖರೀದಿಗೆ ಹದ್ದಿನ ಕಣ್ಣಿಟ್ಟಿರೋದು ಬಹಿರಂಗವಾಗಿದೆ. ಆದ್ರೆ, ಆಕ್ಷನ್ ವೇಳೆ ಎಲ್ಲಾ ಅಂದುಕೊಂಡಂತೆ ಆಗುತ್ತಾ.? ಅನ್ನೋದೆ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment