Advertisment

ಬಾಂಗ್ಲಾದೇಶ ಪ್ರೊಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ? RCB ಕ್ಯಾಪ್​​ ತೊಟ್ಟು ಪ್ರತಿಭಟಿಸುತ್ತಿರೋ ಕಿಂಗ್​?

author-image
AS Harshith
Updated On
ಬಾಂಗ್ಲಾದೇಶ ಪ್ರೊಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ? RCB ಕ್ಯಾಪ್​​ ತೊಟ್ಟು ಪ್ರತಿಭಟಿಸುತ್ತಿರೋ ಕಿಂಗ್​?
Advertisment
  • ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಆಕ್ರೋಶ.. ತಾಂಡವವಾಡುತ್ತಿದೆ ಹಿಂಸಾಚಾರ
  • ಪ್ರಧಾನಿ ಶೇಖ್​ ಹಸೀನಾರನ್ನೇ ದೇಶ ತೊರೆಯುವಂತೆ ಮಾಡಿದ ಬಾಂಗ್ಲಾದೇಶಿಗರು
  • ಪ್ರೊಟೆಸ್ಟ್​ ನಡುವಲ್ಲಿ ಕಾಣಿಸಿಕೊಂಡ ವಿರಾಟ್​ ಕೊಹ್ಲಿ? ಶುರುವಾಗಿದೆ ಬಿಸಿಬಿಸಿ ಚರ್ಚೆ

ಬಾಂಗ್ಲಾದೇಶದಲ್ಲಿ ನಾಗರಿಕ ಅಶಾಂತಿ ಉಂಟಾಗಿದೆ. ಮೀಸಲಾತಿ ವಿಚಾರವಾಗಿ ಆಕ್ರೋಶ ಭುಗಿಲೆದ್ದಿದ್ದು, ಹಿಂಸಾಚಾರ ತಾಂಡವವಾಡುತ್ತಿದೆ. ಈ ಗಲಭೆಯ ನಡುವೆ ಪ್ರಧಾನಿ ಶೇಖ್​ ಹಸೀನಾ ದೇಶ ತೊರೆದು ಭಾರತಕ್ಕೆ ಬಂದಿದ್ದಾರೆ. ಇದರ ನಡುವೆ ಬಾಂಗ್ಲಾದೇಶ ಪ್ರೊಟೆಸ್ಟ್​ನಲ್ಲಿ ಆರ್​ಸಿಬಿ ಕ್ಯಾಪ್​ ತೊಟ್ಟು ವಿರಾಟ್​​ ಕೊಹ್ಲಿಯಂತೆ ಹೋಲುವ ವ್ಯಕ್ತಿಯನ್ನು ಕಂಡು ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

Advertisment

ಮೈದಾನದ ಹೊರಗಾಗಲಿ ಮತ್ತು ಒಳಗಾಗಲಿ ಕೊಹ್ಲಿ ಯಾವತ್ತು ಕಿಂಗ್. ಕೊಹ್ಲಿ ಒಂದು ಪೋಸ್ಟ್​ ಕಂಡರೆ ಸಾಕು​ ಎಲ್ಲರೂ ಲೈಕ್ಸ್​, ಕಾಮೆಂಟ್​, ಶೇರ್​ ಮಾಡೇ ಮಾಡುತ್ತಾರೆ. ಅದರಂತೆಯೇ ಬಾಂಗ್ಲಾದೇಶ ಪ್ರೊಟೆಸ್ಟ್​ನಲ್ಲಿ ಕೊಹ್ಲಿಯ ಫೋಟೋವನ್ನು ನೆಟ್ಟಿಗರು ಕಂಡಿದ್ದಾರೆ. ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ವಾವ್ಹ್​! ಪೋಲ್ಡೇಬಲ್​ ಐಫೋನ್​ ಮೇಲೆ ಕೆಲಸ ಮಾಡುತ್ತಿದೆ ಆ್ಯಪಲ್​.. ಹೇಗಿದೆ? ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ

ಕೊಹ್ಲಿಯಂತೆ ಹೋಲುವ ಅದರಲ್ಲೂ ಆರ್​ಸಿಬಿ ಕ್ಯಾಪ್​ ಧರಿಸಿರುವ ವ್ಯಕ್ತಿ ಬಾಂಗ್ಲಾದೇಶದ ಪ್ರೊಟೆಸ್ಟ್​ನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿಯ ಜೊತೆಗೆ ಅನುಮಾನಕ್ಕೆ ಕಾರಣವಾಗಿದೆ. ಅವರ ಫೋಟೋವನ್ನು ಕೊಹ್ಲಿಯೆಂದು ತಿಳಿದು ಕೆಲವರು ತಮಾಷೆ ಮಾಡುತ್ತಿದ್ದರೆ, ಇನ್ನು ಹಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

Advertisment

ಇದನ್ನೂ ಓದಿ: WhatsApp​ ಬಳಕೆದಾರರಿಗೆ ಶಾಕಿಂಗ್​ ಸುದ್ದಿ! ಈ ಆ್ಯಂಡ್ರಾಯ್ಡ್​ ಮತ್ತು ಐ​ಫೋನ್​ಗಳಲ್ಲಿ ಇನ್ಮುಂದೆ ಕಾರ್ಯನಿರ್ವಹಿಸಲ್ಲ

ಆದರೆ ಆ ವ್ಯಕ್ತಿ ಕೊಹ್ಲಿ ಅಥವಾ ಆರ್​ಸಿಬಿಯ ನಿಜವಾದ ಅಭಿಮಾನಿಯೇ?. ದಿಕ್ಕು ತಪ್ಪಿಸಲು ಈ ರೀತಿ ಮಾಡುತ್ತಿದ್ದಾನೆಯೇ ಎಂಬುದು ತಿಳಿದು ಬರಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment