newsfirstkannada.com

×

RCB: ಡ್ರೆಸ್ಸಿಂಗ್ ರೂಮ್​ನಲ್ಲಿ ಕಣ್ಣೀರು ಹಾಕಿದ್ದ ಆರ್​​ಸಿಬಿ ಪ್ಲೇಯರ್ಸ್!

Share :

Published May 27, 2023 at 10:23am

Update May 28, 2023 at 1:19pm

    ಆರ್​ಸಿಬಿ ಆಟಗಾರರ ಕಣ್ಣೀರ ವಿದಾಯ..!

    ಥ್ಯಾಂಕ್ಯು ಬೆಂಗಳೂರು ಎಂದ ವಿರಾಟ್​ ಕೊಹ್ಲಿ..!

    2 ತಿಂಗಳ ಜರ್ನಿ.. ಕಣ್ಣೀರ ಹಿಂದೆ ನೂರೊಂದು ನೆನೆಪು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಸ್ಟೇಜ್​ನಿಂದ ಹೊರಬಿದ್ದಿದ್ದೇ ತಡ. ಆರ್​ಸಿಬಿ ಆಟಗಾರರ ಕಮಿಟ್​ಮೆಂಟ್​ ಬಗ್ಗೆಯೇ ಟೀಕೆಗೆಗಳು ಕೇಳಿಬಂದಿತ್ತು. ಆದ್ರೆ, ಆರ್​ಸಿಬಿ ಆಟಗಾರರು ಕಪ್​ ಗೆಲ್ಲಿಸಿಕೊಡದಿದ್ರೂ, ಆಟಗಾರರ ಕಮಿಟ್​ಮೆಂಟ್​​​ ಎಲ್ಲರ ಮನ ಗೆದ್ದಿದೆ.

ನಾನು 15 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ. ಆದರೂ ಟ್ರೋಫಿ ಗೆದ್ದಿಲ್ಲ. ಆದ್ರೆ, ಪ್ರತಿ ವರ್ಷ ಐಪಿಎಲ್ ಆಡೋ ಉತ್ಸಾಹ ಮಾತ್ರ ಕಡಿಮೆಯಾಗಲ್ಲ. ನಾನು ಏನು ಮಾಡಬಲ್ಲೆ, ನಾವು ಆಡುವ ಪ್ರತಿಯೊಂದು ಟೂರ್ನಿ ಗೆಲ್ಲಲು ಆಗಲ್ಲ. ಯಾವಾಗಲೂ ನಿಮಗೆ ಸಿಕ್ಕ ಅವಕಾಶದ ಬಗ್ಗೆ ಯೋಚಿಸಿ. ನಾವು ಈಗಲೂ ಐಪಿಎಲ್ ಅನ್ನ ಗೆದ್ದಿಲ್ಲ ಎಂಬ ಅಂಶವನ್ನೂ ಯೋಚಿಸುತ್ತೇನೆ. ಏಕೆಂದರೆ ನಾವು ವಿಶ್ವದ ಅತ್ಯುತ್ತಮ ಅಭಿಮಾನಿಗಳನ್ನ ಹೊಂದಿದ್ದೇವೆ. ನಾವು ಆರ್​ಸಿಬಿಗಾಗಿ ಆಡಿದ ಪ್ರತಿಯೊಂದು ಪಂದ್ಯ ಅಭಿಮಾನಿಗಳಿಗೆ ಅಂತ್ಯತ ವಿಶೇಷವಾದ ವಿಷಯ. ಯಾಕೆಂದರೆ, ಅವರ ಮುಖದ ನಗು ನಮ್ಮ ಬದ್ಧತೆಯನ್ನ ತೋರಿಸುತ್ತದೆ. ಕಪ್ ಗೆಲ್ಲುತ್ತೇವೆ ಎಂಬ ಗ್ಯಾರಂಟಿ ಇಲ್ಲ. ಆದರೆ, 100ರಷ್ಟು ಬದ್ಧತೆ ನೀಡುವುದು ಮಾತ್ರ ನಮ್ಮ ಕೈಯಲ್ಲಿದೆ.

ವಿರಾಟ್​ ಕೊಹ್ಲಿ, ಆರ್​ಸಿಬಿ ಮಾಜಿ ನಾಯಕ

ಐಪಿಎಲ್ ಆರಂಭಕ್ಕೂ ಮುನ್ನ ಕಿಂಗ್ ಕೊಹ್ಲಿ, ವುಮೆನ್ಸ್​ ಟೀಮ್​​ಗೆ ಹೇಳಿದ್ದ ಮಾತುಗಳಿವು. ಕೊಹ್ಲಿಯ ಈ ಮಾತುಗಳು ಆರ್​ಸಿಬಿ ವುಮೆನ್ಸ್ ಟೀಮ್​ಗೆ ಮಾತ್ರವಲ್ಲ.. ಆರ್​ಸಿಬಿ ಅಭಿಮಾನಿಗಳಲ್ಲೂ ಹೊಸ ಉತ್ಸಾಹ ತುಂಬಿತ್ತು. ವಿರಾಟ್​ ಕೊಹ್ಲಿ ಹೇಳಿದ್ದ ಬದ್ಧತೆ ಮಾತು ನಿಜಕ್ಕೂ ಅಭಿಮಾನಿಗಳಲ್ಲಿ ಕಪ್​ ಗೆಲ್ಲೋ ನಂಬಿಕೆ ಡಬಲ್ ಮಾಡಿತ್ತು.

ಇನ್​​​ಫ್ಯಾಕ್ಟ್​_ ಆರ್​ಸಿಬಿ ಕೂಡ 15 ವರ್ಷಗಳ ಕಾಯುವಿಕೆಗೆ ತಿಲಾಂಜಲಿ ಇಡುವ ಶಪತ ಮಾಡಿತ್ತು. ಈ ಸಲ ಕಪ್ ಗೆಲ್ಲಲೇಬೇಕೆಂಬ ತುಡಿತವೂ ಇತ್ತು. ಸಂಭ್ರಮಾಚರಣೆಯೊಂದಿಗೆ ಟೂರ್ನಿಗೆ ವಿದಾಯ ಹೇಳುವ ಕನಸು ಕಂಡಿದ್ದ ಆಟಗಾರರ ಕನಸು ಕೂಡ ಹುಸಿಯಾಯ್ತು.

ಆರ್​ಸಿಬಿ ಆಟಗಾರರ ಕಣ್ಣೀರ ವಿದಾಯ..!

ಬರೋಬ್ಬರಿ 2 ತಿಂಗಳ ಜರ್ನಿ.. ಈ ಜರ್ನಿಯಲ್ಲಿ ಕಪ್​ ಗೆಲ್ಲೋ ಕನಸಿನಲ್ಲೇ ಕಣಕ್ಕಿಳಿದಿದ್ದ ಆರ್​ಸಿಬಿ ನಿರಾಸೆ ಮೂಡಿಸಿದೆ. ಆದ್ರೆ, ಈ ಎರಡು ತಿಂಗಳಲ್ಲಿ ಆನ್​​ಫೀಲ್ಡ್​ನಲ್ಲಿ ಅಭಿಮಾನಿಗಳಿಗೆ ನೂರೊಂದು ನೆನೆಪುಗಳನ್ನೇ ಕಟ್ಟಿಕೊಟ್ಟಿದ್ದಾರೆ. ಆದ್ರೆ, ಅಭಿಮಾನಿಗಳಿಗೆ ಸುಮದುರು ಕ್ಷಣಗಳನ್ನೇ ಕಟ್ಟಿಕೊಟ್ಟಿರುವ ಆರ್​ಸಿಬಿ ಪ್ಲೇಯರ್ಸ್​ಗೆ ಕೊನೆಯಲ್ಲಿ ಸಿಕ್ಕಿದ್ದು ಮಾತ್ರ, ಕಣ್ಣೀರ ವಿದಾಯ..

ಹೌದು! ಗುಜರಾತ್ ಎದುರು ಸೋತ ಆರ್​ಸಿಬಿ, ಪ್ಲೇಆಫ್​​ಗೇರುವ ಅವಕಾಶವನ್ನೇ ಕ​​ಳೆದುಕೊಳ್ತು. ಆನ್​ಫೀಲ್ಡ್​ನಲ್ಲಿ ಸೋತ ಹತಾಶೆಯಲ್ಲಿದ್ದ ವಿರಾಟ್​ ಕೊಹ್ಲಿ, ಸಿರಾಜ್ ಭಾವುಕರಾಗಿದ್ದರು. ಸೋತ ನೋವಿನಲ್ಲಿ ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ ಮೌನವಾಗಿತ್ತು. ಅಷ್ಟೇ ಅಲ್ಲ.! ಡ್ರೆಸ್ಸಿಂಗ್​ ರೂಮ್​ನಿಂದ ತೆರಳಲು ಸಜ್ಜಾಗಿದ್ದ ಆಟಗಾರರು, ಬಿಗಿದಪ್ಪಿ ಕಣ್ಣೀರಾಕಿದ್ದರು.

ಆನ್​​ಫೀಲ್ಡ್​ನಲ್ಲಿ ಎಂಟರ್​ಟೈನ್ಮೆಂಟ್ ನೀಡಿದ್ದ ಆರ್​ಸಿಬಿ ಆಟಗಾರರು, ಡ್ರೆಸ್ಸಿಂಗ್​ ರೂಮ್​ನಲ್ಲಿ ಕಣ್ಣೀರಾಕಲು ಕಾರಣ ನೂರಂದು ಕಾರಣವಿದೆ. ಹೇಗೆ ಆನ್​ಫೀಲ್ಡ್​ನಲ್ಲಿ ಅಭಿಮಾನಿಗಳಿಗೆ ನೆನಪಿನ ಬುತ್ತಿ ಕಟ್ಟಿಕೊಟ್ಟಿದ್ದರೋ, ಹಾಗೇ ಡ್ರೆಸ್ಸಿಂಗ್ ರೂಮ್​ ಎಂಬ ಬೆಸುಗೆಯ ಕೊಠಡಿಯಲ್ಲಿ ಭಾವನಾತ್ಮಕ ಕ್ಷಣಗಳಿದ್ದವು.

ಹೌದು! ನಿಜಕ್ಕೆ ಆರ್​​ಸಿಬಿ ಒಂದು ತಂಡವಾಗಿ ಇರಲಿಲ್ಲ. ಒಂದು ಕುಟುಂಬವಾಗಿತ್ತು. ಎಷ್ಟರ ಮಟ್ಟಿಗೆ ಎಂದ್ರೆ, ತಮ್ಮ ಕುಟುಂಬವನ್ನೇ ಮರೆಯುವಷ್ಟು.. ಇದಕ್ಕೆಲ್ಲಾ ಕಾರಣ ಆಟಗಾರರ ನಡುವೆ ವಿಶೇಷ ಬಾಂಡಿಂಗ್..

ಆರ್​ಸಿಬಿ ಗೆಲುವಿಗಾಗಿ ಹೋರಾಡಿದ್ದ ವಿರಾಟ್​, ಹಂಡ್ರೆಡ್​​ ಪರ್ಸೆಂಟ್ ಕಮಿಟ್​ಮೆಂಟ್​ನೊಂದಿಗೆನೇ ಅಂಗಳದಲ್ಲಿ ಬ್ಯಾಟ್ ಬೀಸಿದ್ದರು. ಆದ್ರೆ, ಆರ್​ಸಿಬಿ ಸೋಲಿನ ಬಳಿಕವೂ ಅಭಿಮಾನಿಗಳ ಬೆಂಬಲಕ್ಕೆ ಭಾವುಕರಾಗಿದ್ದ ವಿರಾಟ್​, ಫ್ಯಾನ್ಸ್​ಗೆ ಭಾವನಾತ್ಮಕ ಸಂದೇಶ ಬರೆದಿದ್ದರು.

ಈ ಸೀಸನ್​​ ಸಾಕಷ್ಟು  ಅದ್ಬುತ ಕ್ಷಣಗಳನ್ನ ನೀಡಿದೆ. ಅನಿರೀಕ್ಷಿತವಾಗಿ ನಾವು ಗುರಿ ತಲುಪುವಲ್ಲಿ ಎಡವಿದ್ದೇವೆ. ಇದರಿಂದ ನಿರಾಸೆ ಆಗಿದೆ. ಆದರೆ, ಪ್ರತಿ ಹಂತದಲ್ಲಿ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಂದ ಎದೆಗುಂದದೆ ಮುನ್ನಗ್ಗುತ್ತೇವೆ. ಕೋಚ್‌ಗಳಿಗೆ, ಮ್ಯಾನೇಜ್‌ಮೆಂಟ್‌ ಹಾಗೂ ಸಹ ಆಟಗಾರರಿಗೆ ಧನ್ಯವಾದ. ಸ್ಟ್ರಾಂಗ್​​​​ ಕಮ್‌ಬ್ಯಾಕ್‌ ಮಾಡುವತ್ತ ಗಮನ ಹರಿಸುತ್ತೇವೆ.

ವಿರಾಟ್​ ಕೊಹ್ಲಿ, ಆರ್​ಸಿಬಿ ಮಾಜಿ ನಾಯಕ

ವಿರಾಟ್​ ಕೊಹ್ಲಿಯೇ ಅಲ್ಲ. ಮ್ಯಾಕ್ಸ್​ವೆಲ್​ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್​ ಬೆಂಬಲಕ್ಕೆ ಮನಸೋತು ಧನ್ಯವಾದ ಸಲ್ಲಿಸಿದ್ದರು ಅನ್ನೋದನ್ನ ಮರೆಯುವಂತಿಲ್ಲ. ಒಟ್ನಲ್ಲಿ.. ಆರ್​ಸಿಬಿ ಈ ಸಲನೂ ಕಪ್​​​ ಗೆಲ್ಲುವಲ್ಲಿ ವಿಫಲವಾಗಿದೆ ನಿಜ. ಆದ್ರೆ, ಕಪ್​ ಗೆಲ್ಲಿಸಕೊಡಲಿಲ್ಲ ಎಂಬ ಕೊರಗು ಆರ್​ಸಿಬಿ ಆಟಗಾರರಲ್ಲೂ ಕಾಡ್ತಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB: ಡ್ರೆಸ್ಸಿಂಗ್ ರೂಮ್​ನಲ್ಲಿ ಕಣ್ಣೀರು ಹಾಕಿದ್ದ ಆರ್​​ಸಿಬಿ ಪ್ಲೇಯರ್ಸ್!

https://newsfirstlive.com/wp-content/uploads/2023/05/Kohli-6.jpg

Load More