newsfirstkannada.com

‘ನಾನು ಆ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದೆ’- ಶಾಕಿಂಗ್​​ ಸತ್ಯ ಬಿಚ್ಚಿಟ್ಟ RCB ಸ್ಟಾರ್​ ಪ್ಲೇಯರ್​​

Share :

Published September 3, 2024 at 10:47pm

    ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಕ್ರಿಕೆಟರ್​​!

    ಮುಂಬೈ ಇಂಡಿಯನ್ಸ್​ನಿಂದ ಖಿನ್ನತೆಗೆ ಒಳಗಾಗಿದ್ದ ಕನ್ನಡಿಗ ಬ್ಯಾಟರ್​​

    ಐಪಿಎಲ್​ನಲ್ಲಿ ಆದ ಕರಾಳ ಅನುಭವದಿಂದ ಅನಾರೋಗ್ಯಕ್ಕೀಡಾಗಿದ್ರು

ಆರ್​​​ಸಿಬಿ ತಂಡದ ಮಾಜಿ ಕ್ರಿಕೆಟರ್​​​ ಕನ್ನಡಿಗ ರಾಬಿನ್​ ಉತ್ತಪ್ಪ ಶಾಕಿಂಗ್​​ ವಿಚಾರವೊಂದು ಬಿಚ್ಚಿಟ್ಟಿದ್ದಾರೆ. ಐಪಿಎಲ್​​ನಲ್ಲಿ ತನಗಾದ ಕಹಿ ಅನುಭವದಿಂದ ತಾನು ಖಿನ್ನತೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತಾಡಿದ ರಾಬಿನ್ ಉತ್ತಪ್ಪ, 2009ರಲ್ಲಿ ನನಗೆ ಬೆದರಿಕೆ ಹಾಕಿ ಐಪಿಎಲ್ ಟ್ರಾನ್ಸ್​ಫರ್ ಮಾಡಿಸಿಕೊಂಡಿದ್ದರು. ಈ ಟ್ರಾನ್ಸ್​ಫರ್​​ಗೆ ನಾನು ಒಪ್ಪಿರಲಿರಲಿಲ್ಲ. ಟ್ರಾನ್ಸ್​ಫರ್​ ಪೇಪರ್‌ಗಳಿಗೆ ಸಹಿ ಹಾಕಲು ಆಗಲ್ಲ ಎಂದಿದ್ದೆ. ನೀವು ಈ ಟ್ರೇಡ್ ಪತ್ರಗಳಿಗೆ ಸಹಿ ಮಾಡದಿದ್ರೆ, ತಂಡದಲ್ಲಿ ಆಡಲು ಅವಕಾಶ ನೀಡಲ್ಲ ಎಂದು ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಉಸ್ತುವಾರಿ ಬೆದರಿಕೆ ಹಾಕಿದ್ದರು ಎಂದರು ಉತ್ತಪ್ಪ.

ಇನ್ನು, ಈ ಬೆಳವಣಿಗೆ ನಂತರ ನಾನು ಖಿನ್ನತೆಗೆ ಒಳಗಾದೆ. ನಾನು 2009ರಲ್ಲಿ ಆರ್​ಸಿಬಿ ಪರ ಉತ್ತಮವಾಗಿ ಆಡಿದೆ. ಆದರೆ 2011 ರಲ್ಲಿ ನಾನು ನನ್ನ ಮೇಲಿನ ಸಂಪೂರ್ಣ ಕಂಟ್ರೋಲ್ ಕಳೆದುಕೊಂಡಿದ್ದೆ. ನನ್ನ ತಾಯಿ ನೆರವಿಗೆ ನಿಂತರು. ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದರು ಎಂದರು.

ರಾಬಿನ್​ ಉತ್ತಪ್ಪ ಐಪಿಎಲ್​ ಕರಿಯರ್​​!

ಉತ್ತಪ್ಪ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​​. ಇವರು ಕಳೆದ ಐಪಿಎಲ್​​ ಸೀಸನ್​ಗೆ ಮುನ್ನವೇ ಎಲ್ಲಾ ಮಾದರಿ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ್ರು. ಕನ್ನಡಿಗ ಉತ್ತಪ್ಪ ಐಪಿಎಲ್​ನಲ್ಲಿ ಹಲವು ತಂಡಗಳಿಗೆ ಆಡಿದ್ದಾರೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್, ಕೆಕೆಆರ್​​, ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 205 ಪಂದ್ಯಗಳಲ್ಲಿ 4,952 ರನ್‌ ಕಲೆ ಹಾಕಿದ್ದಾರೆ. ಈ ಪೈಕಿ ಒಟ್ಟು 27 ಅರ್ಧಶತಕಗಳು ಸೇರಿದ್ದು, ಇವರು 2014ರ ಐಪಿಎಲ್​ನಲ್ಲಿ 660 ರನ್​ ಗಳಿಸಿ ಆರೆಂಜ್​ ಕ್ಯಾಪ್​ ಗೆದ್ದಿದ್ದರು.

ಇದನ್ನೂ ಓದಿ: ಅಂದು RCB ಆಟಗಾರನಿಗೆ ಬೆದರಿಕೆ ಹಾಕಿದ್ದ ಮುಂಬೈ ಇಂಡಿಯನ್ಸ್​​; ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ನಾನು ಆ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದೆ’- ಶಾಕಿಂಗ್​​ ಸತ್ಯ ಬಿಚ್ಚಿಟ್ಟ RCB ಸ್ಟಾರ್​ ಪ್ಲೇಯರ್​​

https://newsfirstlive.com/wp-content/uploads/2024/05/RCB_NEW.jpg

Load More