18ನೇ ಐಪಿಎಲ್ಗೆ ಶುರುವಾಯ್ತು ಆರ್ಸಿಬಿ ಸಿದ್ಧತೆ..!
ಮೆಗಾ ಹರಾಜಿನಲ್ಲಿ ರೆಡ್ ಆರ್ಮಿ ಬಿಗ್ ಟಾರ್ಗೆಟ್
ಕರ್ನಾಟಕದ ಚಂಡ ಪ್ರಚಂಡರ ಮೇಲೆ ಹದ್ದಿನ ಕಣ್ಣು
ಐಪಿಎಲ್ ಮೆಗಾ ಆಕ್ಷನ್ ಹತ್ತಿರವಾಗ್ತಿದ್ದಂತೆ ಕ್ಯೂರಿಯಾಸಿಟಿನೂ ಹೆಚ್ಚಾಗ್ತಿದೆ. 17 ವರ್ಷಗಳಿಂದ ಆರ್ಸಿಬಿಯ ಹೊಸ ಅಧ್ಯಾಯದ ಕನಸು ಈಡೇರಿಲ್ಲ. 18ನೇ ಐಪಿಎಲ್ನಲ್ಲಿ ಕಪ್ ಗೆದ್ದು ಟ್ರೋಫಿ ಬರಕ್ಕೆ ಫುಲ್ಸ್ಟಾಪ್ ಹಾಕಲು ಆರ್ಸಿಬಿ ಪಣತೊಟ್ಟಿದೆ. ಅದಕ್ಕಾಗಿ ತ್ರಿಮೂರ್ತಿ ಕನ್ನಡಿಗರ ಮೇಲೆ ಕಣ್ಣಿಟ್ಟಿದೆ. ಈ ಕರುನಾಡ ಕಲಿಗಳು ರೆಡ್ ಆರ್ಮಿಗೆ ಎಂಟ್ರಿಕೊಟ್ರೆ ಹಳೇ ಅಧ್ಯಾಯ ಕೊನೆಗೊಂಡು, ಹೊಸ ಚರಿತ್ರೆ ಸೃಷ್ಟಿಯಾಗೋದು ಗ್ಯಾರಂಟಿ.
ಚಂಡ ಪ್ರಚಂಡರ ಮೇಲೆ RCB ಹದ್ದಿನ ಕಣ್ಣು
ದೇಶದಲ್ಲಿ ಸೀಸನ್ 18ನೇ ಐಪಿಎಲ್ನ ಮೆಗಾ ಆಕ್ಷನ್ ಕಾವು ಜೋರಾಗಿದೆ. ಡಿಸೆಂಬರ್ನಲ್ಲಿ ಆಟಗಾರರ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನವೇ ರಿಟೇನ್-ರಿಲೀಸ್ ಪ್ರಕ್ರಿಯೆ ಸಖತ್ ಸೌಂಡ್ ಮಾಡ್ತಿದೆ. ಎಸ್ಪೆಶಲಿ ಕರುನಾಡ ಬಾಹುಬಲಿ ಕೆಎಲ್ ರಾಹುಲ್ ಆರ್ಸಿಬಿ ಸೇರ್ತಾರೆ ಅನ್ನೋ ನ್ಯೂಸ್ ಟ್ರೆಂಡಿಂಗ್ನಲ್ಲಿದೆ. ಆರ್ಸಿಬಿ ಕನ್ನಡಿಗನನ್ನ ಸೆಳೆದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲಾನ್ ಮಾಡಿದೆ. ಇನ್ನೊಂದೆಡೆ ಸಂಜೀವ್ ಗೋಯೆಂಕಾ, ರಾಹುಲ್ ಲಕ್ನೋ ಫ್ಯಾಮಿಯ ಭಾಗ ಅಂದಿದ್ರೂ, ರಿಟೇನ್ ಬಗ್ಗೆ ಕ್ಲಾರಿಟಿ ಕೊಟ್ಟಿಲ್ಲ. ಹೀಗಾಗಿ ಆರ್ಸಿಬಿ ತಂಡ ಆಕ್ಷನ್ನಲ್ಲಿ ರಾಹುಲ್ರನ್ನ ಸೆಳೆದು ಹೊಸ ಅಧ್ಯಾಯ ಸೃಷ್ಟಿಸುವ ತವಕದಲ್ಲಿದೆ.
ಇದನ್ನೂ ಓದಿ:ಪಂತ್ ವಿರುದ್ಧ ಸಮರ ಸಾರಿದ ಜುರೇಲ್; ಸಿನಿಯರ್ಸ್ಗೆ ಕನ್ನಡಿಗ ಪಡಿಕ್ಕಲ್ ಕೂಡ ಚಾಲೇಂಜ್..!
ಬರೀ ರಾಹುಲ್ ಅಷ್ಟೇ ಅಲ್ಲ. ಇನ್ನಿಬ್ಬರು ಚಂಡ, ಪ್ರಚಂಡ ಕನ್ನಡಿಗರ ಮೇಲೂ ಆರ್ಸಿಬಿ ಫ್ರಾಂಚೈಸಿ ಹದ್ದಿನ ಕಣ್ಣಿಟ್ಟಿದೆ. ಹರಾಜಿನಲ್ಲಿ ಅದೆಷ್ಟೋ ದುಡ್ಡು ಹೋದ್ರು ಸೈ. ಈ ಇಬ್ಬರು ಮ್ಯಾಚ್ ವಿನ್ನರ್ಗಳನ್ನ ಸೆಳೆದು ಮುಂದಿನ ಸೀಸನ್ನಲ್ಲಿ ತಂಡವನ್ನ ಹಿಂದೆಂದಿಗಿಂತಲೂ ಬಲಿಷ್ಠಗೊಳಿಸುವ ಚಿಂತನೆಯಲ್ಲಿದೆ. ಅಷ್ಟಕ್ಕೂ ರಾಹುಲ್ ಜೊತೆ ಆರ್ಸಿಬಿ ಕಣ್ಣಿಟ್ಟಿರೋ ಆ ಮತ್ತಿಬ್ಬರೂ ಪ್ಲೇಯರ್ಸ್ ಬೇರಾರು ಅಲ್ಲ. ಗಂಡುಗಲಿ ಅಭಿನವ್ ಮನೋಹರ್ ಹಾಗೂ ಸಿಡಿಗುಂಡು ಮನೋಜ್ ಭಾಂಡಗೆ.
ವಿಧ್ವಂಸಕ ಅಭಿನವ್ ಮನೋಹರ್ಗೆ RCB ಗಾಳ?
ಅಭಿನವ್ ಮನೋಹರ್..! ಪ್ರಸಕ್ತ ಮಹಾರಾಜ ಟ್ರೋಫಿಯಲ್ಲಿ ಮಾಸ್ ಆಟದಿಂದ ಎಲ್ಲರನ್ನ ರಂಜಿಸ್ತಾರೆ. ಟೂರ್ನಿ ಆರಂಭದಿಂದ ಲೀಗ್ಹಂತದ ಕೊನೆ ಪಂದ್ಯವರೆಗೂ ರನ್ ಮಳೆಯನ್ನೆ ಸುರಿಸಿದ್ದಾರೆ. ದಂಡಂ ದಶಗುಣಂ ಆಟ.. ಪವರ್ ಹಿಟ್ಟಿಂಗ್ ಬ್ಯಾಟಿಂಗ್, ಬೌಲರ್ಸ್ ದಂಡೆತ್ತಿದ ಪರಿಗೆ ಕ್ರಿಕೆಟ್ ಲೋಕವೇ ಮಂತ್ರ ಮುಗ್ಧವಾಗಿದೆ.
ಮಹಾರಾಜ ಟ್ರೋಫಿಯಲ್ಲಿ ಅಭಿನವ್
ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಅಭಿನವ್ ಮನೋಹರ್ 10 ಪಂದ್ಯಗಳನ್ನ ಆಡಿದ್ದಾರೆ. ಆ ಪೈಕಿ 196.51ರ ಸ್ಟ್ರೈಕ್ರೇಟ್ನಲ್ಲಿ ಅತ್ಯಧಿಕ 570 ರನ್ ಸಿಡಿಸಿದ್ದಾರೆ. ಇದ್ರಲ್ಲಿ 6 ಅರ್ಧಶತಕಗಳು ಸೇರಿಕೊಂಡಿವೆ. ಅಭಿನವ್ ಹೊಡೆದಿರೋ 507 ರನ್ ಪೈಕಿ ಸಿಕ್ಸರ್ಗಳಿಂದಲೇ 312 ರನ್ ಗಳಿಸಿದ್ದಾರೆ. ಕರ್ನಾಟಕದ ಈ ಡೇರ್ಡೆವಿಲ್ ಟೂರ್ನಿಯಲ್ಲಿ ಬರೋಬ್ಬರಿ 52 ಸಿಕ್ಸರ್ಗಳನ್ನ ಚಚ್ಚಿದ್ದಾರೆ. ಅಭಿನವ್ರ ಈ ನಿರ್ಭೀತಿ ಆಟಕ್ಕೆ ಆರ್ಸಿಬಿ ಇಂಪ್ರೆಸ್ ಆಗಿದೆ. ಹೀಗಾಗಿ ಹರಾಜಿನಲ್ಲಿ ಬಿಗ್ ಹಿಟ್ಟರ್ಗೆ ಗಾಳ ಹಾಕಲು ಪಕ್ಕಾ ಪ್ಲಾನ್ ಮಾಡಿದೆ.
ಇದನ್ನೂ ಓದಿ:3ನೇ ಇನ್ನಿಂಗ್ಸ್ನಲ್ಲೇ ತ್ರಿಶತಕ.. ಆಮೇಲೆ ಡೋರ್ ಕ್ಲೋಸ್.. ಕನ್ನಡಿಗನಿಗೆ ಅವಕಾಶ ನೀಡದೇ ಬಿಸಿಸಿಐ ಮೋಸ
RCB ಗೆ ಮನೋಹರ್ ಮೇಲೆ ಒಲವೇಕೆ..?
ಅಭಿನವ್ ಮನೋಹರ್ ಸ್ಫೋಟಕ ಆಟಕ್ಕೆ ಹೆಸರುವಾಸಿ. ಅದೆಂಥಾ ಸ್ಟ್ರಾಂಗ್ ಬೌಲರ್ ಇದ್ರೂ ನಿರ್ದಯವಾಗಿ ದಂಡಿಸಬಲ್ಲರು. ಕನ್ನಡಿಗ ಆಗಮಿಸಿದ್ರೆ ಆರ್ಸಿಬಿಯ ಮಿಡಲ್ ಆರ್ಡರ್ ಸ್ಟ್ರಾಂಗ್ ಆಗಲಿದೆ. ಅಭಿನವ್ಗೆ ಡಿಕೆಯ ಫಿನಿಶಿಂಗ್ ಸ್ಥಾನ ತುಂಬುವ ಸಾಮರ್ಥ್ಯವಿದೆ. ಬ್ಯಾಟಿಂಗ್ ಅಷ್ಟೇ ಅಲ್ಲದೇ, ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಬಲ್ಲರು. ಚಿನ್ನಸ್ವಾಮಿ ಮೈದಾನ ಸಿಕ್ಕದಿದೆ. ದೊಡ್ಡ ಹೊಡೆತಗಳ ಮೂಲಕ ಲೋಕಲ್ ಬಾಯ್ ಇದರ ಲಾಭ ಪಡೆಯಬಹುದು.
ಮನೋಜ್ ಭಾಂಡಗೆ ಸೆಳೆದು ಬ್ಯಾಂಡ್ ಬಜಾಯಿಸೋ ಪ್ಲಾನ್
ಮೈಸೂರು ವಾರಿಯರ್ಸ್ ತಂಡ ಮನೋಜ್ ಭಾಂಡಗೆ ಕೂಡ ಮಹಾರಾಜ ಟ್ರೋಫಿಯಲ್ಲಿ ಧೂಳೆಬ್ಬಿಸಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 196.46 ಸ್ಟ್ರೈಕ್ರೇಟ್ನಲ್ಲಿ 222 ರನ್ ಚಚ್ಚಿದ್ದಾರೆ. 3 ಅರ್ಧಶತಕ ಕೂಡ ಬಾರಿಸಿದ್ದಾರೆ. ಬ್ಯಾಟಿಂಗ್ ಅಷ್ಟೇ ಅಲ್ಲದೇ ಬೌಲಿಂಗ್ನಲ್ಲಿ 8 ವಿಕೆಟ್ ಕಬಳಿಸಿ ಆಲ್ರೌಂಡರ್ ಪ್ರದರ್ಶನ ನೀಡ್ತಿದ್ದಾರೆ. ಈ ಆಲ್ರೌಂಡರ್ ಮೇಲೆ ಆರ್ಸಿಬಿಯ ಕಣ್ಣು ಬಿದ್ದಿದೆ. ಹರಾಜಿನಲ್ಲಿ ಫೈರಿ ಲೆಫ್ಟಿ ಬ್ಯಾಟರ್ನನ್ನ ಬುಟ್ಟಿಗೆ ಹಾಕಿಕೊಳ್ಳಲು ಎದುರು ನೋಡ್ತಿದೆ.
ಮನೋಜ್ ಭಾಂಡ RCBಗೆ ಬಂದ್ರೆ ಲಾಭವೇನು?
ಸದ್ಯಕ್ಕಂತೂ ಆರ್ಸಿಬಿ ಈ ಮೂವರನ್ನ ಟಾರ್ಗೆಟ್ ಮಾಡಿದೆ. ಹರಾಜಿನಲ್ಲಿ ಬಿಡ್ ಮಾಡುವ ಕುರಿತ ಪಕ್ಕಾ ಸ್ಟ್ರಾಟಜಿ ರೂಪಿಸಿದೆ. ಹಾಗೊಂದು ವೇಳೆ ಆರ್ಸಿಬಿ ಪ್ಲಾನ್ ವರ್ಕ್ ಆಗಿದ್ದೆ ಆದ್ರೆ 2025ನೇ ಐಪಿಎಲ್ನಲ್ಲಿ ಆರ್ಸಿಬಿ ತಂಡದಲ್ಲಿ ಮೂವರು ಕರುನಾಡಿ ಕಲಿಗಳ ಬ್ಯಾಟಿಂಗ್ ಅಬ್ಬರವನ್ನ ಅನ್ನ ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮೂವರು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್