/newsfirstlive-kannada/media/post_attachments/wp-content/uploads/2023/11/Cameron_Green_1.jpg)
ಕಪ್​ ನಮ್ದೇ ಎಂದು ಪ್ರತಿ ಬಾರಿ ಐಪಿಎಲ್​ ಸೀಸನ್​ ಆರಂಭಿಸುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಚಾಂಪಿಯನ್​ ಪಟ್ಟಕ್ಕೇರುವಲ್ಲಿ ಮಾತ್ರ ವಿಫಲವಾಗುತ್ತಿದೆ. 2024ರ 17ನೇ ಸೀಸನ್​ನಲ್ಲಾದ್ರೂ ಐಪಿಎಲ್​ ಕಪ್​ ಗೆಲ್ಲಬೇಕು ಎಂಬುದು ಫ್ರಾಂಚೈಸಿಯ ಲೆಕ್ಕಾಚಾರ. ಹೀಗಾಗಿ IPL ಮಿನಿ ಹರಾಜಿಗೂ ಮುನ್ನ ಬೆಂಗಳೂರು ತಂಡ ಆಟಗಾರರಿಗೆ ಕೊಕ್​ ಕೊಟ್ಟು ಹೊಸ ಪ್ಲೇಯರ್ಸ್​ ಬರಮಾಡಿಕೊಳ್ಳುತ್ತಿದೆ. ಇದೀಗ ತಂಡಕ್ಕೆ ಮುಂಬೈನ ಆಲ್​ರೌಂಡರ್​ ಕ್ಯಾಮರೂನ್ ಗ್ರೀನ್ ಬಂದಿದ್ದಾರೆ.
ನಿನ್ನೆಯಷ್ಟೇ ಆರ್​​ಸಿಬಿ ಫ್ರಾಂಚೈಸಿಯು ಹೈದ್ರಾಬಾದ್​​ ತಂಡದಿಂದ ಮಯಾಂಕ್ ದಾಗರ್​ನ್ನ ಟೀಮ್​ಗೆ ವೆಲ್​ಕಮ್​ ಮಾಡಿತ್ತು. ಸದ್ಯ ಇದರ ಬೆನ್ನಲ್ಲೇ ಆಸ್ಟ್ರೇಲಿಯನ್ ಆಲ್​​ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್​ನ ಪ್ಲೇಯರ್​ ಕ್ಯಾಮರೂನ್ ಗ್ರೀನ್​ರನ್ನ ಖರೀದಿ ಮಾಡಿದೆ. ಆರ್‌ಸಿಬಿ ಅಕೌಂಟ್​ನಲ್ಲಿ 40.75 ಕೋಟಿ ರೂಪಾಯಿ ಬಾಕಿ ಉಳಿದಿತ್ತು. ಇದೇ ಹಣದಲ್ಲೇ ಹರಾಜಿನಲ್ಲಿ ಪಾಲ್ಗೊಳ್ಳಲು ಸಜ್ಜಾಗಿತ್ತು. ಆದರೆ ಈಗ ದಿಢೀರ್ ಅಂತ 17.5 ಕೋಟಿ ರೂ.ಗಳನ್ನ ನೀಡಿ ಮುಂಬೈ ಇಂಡಿಯನ್ಸ್​ನಿಂದ ಕ್ಯಾಮರೂನ್ ಗ್ರೀನ್​ರನ್ನ ಆರ್‌ಸಿಬಿ ಖರೀದಿಸಿದೆ. ಇದರಿಂದ ಮತ್ತೊಬ್ಬ ಆಲ್​​ರೌಂಡರನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
Cameron Green 💙pic.twitter.com/IuGJH1rORQ
— R A T N I S H (@LoyalSachinFan) November 26, 2023
2024ರ ಐಪಿಎಲ್​ನ ರಿಲೀಸ್ ಹಾಗೂ ರಿಟೇನ್​ಗೆ ನಿನ್ನೆ ಕೊನೆ ದಿನವಾಗಿತ್ತು. ಹೀಗಾಗಿ ಆರ್​ಸಿಬಿ ಹಾಗೂ ಮುಂಬೈ ಪ್ರಾಂಚೈಸಿಗಳು ಆಟಗಾರರನ್ನು ಖರೀದಿ ಮಾಡಿವೆ. ಮುಂಬೈಗೆ ಮರಳಿ ಹಾರ್ದಿಕ್ ಪಾಂಡ್ಯ ಬಂದಿದ್ದಾರೆ. ಆರ್​​ಸಿಬಿಯು 2ನೇ ಆಲ್​​ರೌಂಡರ್​ ಆಗಿ ಕ್ಯಾಮರೂನ್​ ಗ್ರೀನ್​​ಗೆ ಟೀಮ್​ಗೆ ವೆಲ್​​​ಕಮ್ ಹೇಳಿದೆ.
ಸದ್ಯಕ್ಕೆ ಆರ್​​ಸಿಬಿ ಟೀಮ್​​ನಲ್ಲಿರುವ ಆಟಗಾರರು:
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ಕ್ಯಾಪ್ಟನ್), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಸೂಯೂಶ್ ಪ್ರಭುದೇಸಾಯಿ, ಮೊಹಮ್ಮದ್ ಸಿರಾಜ್, ಕರಣ್ ಶರ್ಮಾ, ಮಯಾಂಕ್ ದಾಗರ್, ಮನೋಜ್ ಭಂಡಜೆ, ವೈ.ವಿಜಯ ಕುಮಾರ್, ಅಕಾಶ್ ದೀಪ್, ರಜನ್ ಕುಮಾರ್, ಕ್ಯಾಮರೂನ್ ಗ್ರೀನ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us