ಕರ್ಮ ಹಿಟ್ಸ್ ಬ್ಯಾಕ್...ಮಾಡಿದುಣ್ಣೋ ಮಹಾರಾಯ
ಸ್ವೀಟ್ ಮ್ಯಾಂಗೋಬಾಯ್ಗೆ ಹಿಗ್ಗಾಮುಗ್ಗಾ ಜಾಡಿಸಿದ ಫ್ಯಾನ್ಸ್..!
ಅಪ್ಘನ್ ಬೌಲರ್ಗೆ ಮುಂಬೈ ಪ್ಲೇಯರ್ಸ್ ಕೊಟ್ರು 'ಪಂಚ್'
ಇಲ್ಲದೇ ಇರುವೆ ಬಿಟ್ಟುಕೊಳ್ಳೋದು ಅಂದ್ರೆ ಇದೆ ಇರಬೇಕು. ನವೀನ್ ಉಲ್ ಹಕ್ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಸುಮ್ಮನಿದ್ದಿದ್ರೆ ಎಲ್ಲವೂ ಸರಿಯಾಗಿರೋದು. ಆದ್ರೆ ಪ್ಲೇ ಆಫ್ ಪ್ರವೇಶಿಸಿದ ಹುಮ್ಮಸ್ಸಿನಲ್ಲಿ ಈ ಮಹಾಶಯ ಆರ್ಸಿಬಿಯನ್ನ ಅಣಿಕಿಸಿದ್ರು. ಈಗ ಯಾಕಾದ್ರು ಆರ್ಸಿಬಿಯನ್ನ ಕೆಣಕಿದ್ನಪ್ಪ ಅಂತ ಪಶ್ವಾತ್ತಾಪ ಪಡ್ತಿದ್ದಾರೆ.
ಆಡು ಭಾಷೆಯಲ್ಲಿ ಹೇಳ್ತಾರಲ್ಲ, ನಗುವವರ ಮುಂದೆ ನಗ್ಗೇಡಿ ಆದ ಅನ್ನುವ ತರ. ಈ ಅಪ್ಘನ್ ಆಟಗಾರ ನವೀನ್ ಉಲ್ ಹಕ್ ಈ ಸಲ ಆಡಿದ್ದು ಮೊದಲ ಐಪಿಎಲ್. ಚೊಚ್ಚಲ ಆವೃತ್ತಿಯಲ್ಲಿ ರೈಟಿ ಬೌಲರ್ ಪರ್ಫಾಮೆನ್ಸ್ಗಿಂತ ಹೆಚ್ಚು ಸುದ್ದಿಯಾಗಿದ್ದು ಕಿರಿಕ್ ಮತ್ತು ಕಾಲೆಳೆಯೋದ್ರಿಂದಲೇ.
ಕರ್ಮ ಹಿಟ್ಸ್ ಬ್ಯಾಕ್…ಮಾಡಿದುಣ್ಣೋ ಮಹಾರಾಯ
ಕರ್ಮ ಹಿಟ್ಸ್ ಬ್ಯಾಕ್ ಅನ್ನೋದು ಇದಕ್ಕೆ. ಹಿಂದೊಂದು ಕಾಲವಿತ್ತು. ನಾವು ಮಾಡಿದ್ದ ಪಾಪ ನಮ್ಮ ಮಕ್ಕಳಿಗೆ ತಟ್ಟುತ್ತೆ ಅಂತಿದ್ರು. ಆದ್ರೀಗ ಹಾಗಿಲ್ಲ. ನಾವು ಮಾಡಿದ್ದನ್ನ ನಾವು ಅನುಭವಿಸಬೇಕು. ಆ ವಿಚಾರದಲ್ಲಿ ನವೀನ್ ಉಲ್ ಹಕ್ ಮಾಡಿದ ಅತಿರೇಕದ ವರ್ತನೆಗೆ ತಕ್ಕ ಶಾಸ್ತಿಯಾಗಿದೆ.
ಅಬ್ಬಬ್ಬಾ, ಕೊಹ್ಲಿ ಜೊತೆಗಿನ ಕಿರಿಕ್ ಬಳಿಕ ನವೀನ್ ಉಲ್ ಹಕ್ ಆರ್ಸಿಬಿ ಬಗ್ಗೆ ಲೇವಡಿ ಮಾಡಿದ್ದೇ ಮಾಡಿದ್ದು. ಮಾತೆತ್ತಿದ್ರೆ ಕುಹಕ. ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಿದ್ದ ಪ್ರತಿಪೋಸ್ಟ್ನಲ್ಲಿ ಕಿಂಗ್ ಕೊಹ್ಲಿಯನ್ನೇ ಟಾರ್ಗೆಟ್ ಮಾಡ್ತಿದ್ರು. ಬಿಟ್ರೆ ಆರ್ಸಿಬಿ ಟೀಮ್. ಆ ಮೂಲಕ ರೆಡ್ ಆರ್ಮಿಯನ್ನ ಬಿಟ್ಟುಬಿಡದೇ ಕೆಣಕಿದ್ರು. ಈಗ ಆರ್ಸಿಬಿ ಫ್ಯಾನ್ಸ್ ಎಲ್ಲದಕ್ಕೂ ಲೆಕ್ಕ ಚುಕ್ತಾ ಮಾಡಿದ್ದಾರೆ.

ಉಪ್ಪು ತಿಂದವ ನೀರು ಕುಡಿಬೇಕು ಅಲ್ವಾ? ಹಾಗೇ ಪರ್ಸನಲಿ ಕಿಂಗ್ ಕೊಹ್ಲಿಯನ್ನ ಕೆಣಕಿ, ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದ ನವೀನ್ ಉಲ್ ಹಕ್ ಫುಲ್ ಈಗ ಫುಲ್ ಟ್ರೋಲ್ ಆಗ್ತಿದ್ದಾನೆ. ಎಲಿಮಿನೇಟರ್ ಮ್ಯಾಚ್ನಲ್ಲಿ ಲಕ್ನೋ ಮುಂಬೈ ವಿರುದ್ಧ ಸೋತಿದ್ದೇ ತಡ, ಆರ್ಸಿಬಿ ಫ್ಯಾನ್ಸ್ ಅಪ್ಘನ್ ಬೌಲರ್ಗೆ ಹಿಗ್ಗಾಮುಗ್ಗಾ ಜಾಡಿಸ್ತಿದ್ದಾರೆ. ಎಡಿಟೆಡ್ ವಿಡಿಯೋಸ್ ಮತ್ತು ಪೋಸ್ಟರ್ಗಳನ್ನ ಹಾಕಿ ಸಖತ್ ಕೌಂಟರ್ ಕೊಟ್ಟಿದ್ದಾರೆ.
ನೋಡಿದ್ರಾ ವೀಕ್ಷಕರೇ,,ಸ್ವೀಟ್ ಮ್ಯಾಂಗೋ ಬಾಯ್ಗೆ ಆರ್ಸಿಬಿ ಫ್ಯಾನ್ಸ್ ಹೇಗೆಲ್ಲಾ ಖಾರವಾಗಿ ಕೌಂಟರ್ ಕೊಟ್ಟಿದ್ದಾರೆ ಅನ್ನೋದನ್ನ.ಇವುಗಳನ್ನೆನ್ನಾದ್ರು ಕಿರಿಕ್ಮ್ಯಾನ್ ನೋಡಿಬಿಟ್ರೆ ಯಾಕಾದ್ರು ವಿರಾಟ್ ಕೊಹ್ಲಿಯನ್ನ ಎದುರು ಹಾಕಿಕೊಂಡೇ ಅಂತ ಮನಸ್ಸಲ್ಲಿ ಅನ್ನದಿರಲ್ಲ.
ಅಪ್ಘನ್ ಬೌಲರ್ಗೆ ಮುಂಬೈ ಪ್ಲೇಯರ್ಸ್ ಕೊಟ್ರು ‘ಪಂಚ್‘
ಆರ್ಸಿಬಿ ತಂಡ ಮುಂಬೈ ವಿರುದ್ಧ ಸೋತ ಬೆನ್ನಲ್ಲೇ ನವೀನ್ ಮ್ಯಾಂಗೋ ಪೋಸ್ಟ್ವೊಂದನ್ನ ಹಾಕಿದ್ರು. ಅದ್ರಲ್ಲಿ ನಾನು ಈವರೆಗೆ ಇಂತಹ ಮ್ಯಾಂಗೋವನ್ನ ತಿಂದೇ ಇಲ್ಲ..ತುಂಬಾ ಸ್ವೀಟ್ ಆಗಿವೆ ಬರೆದುಕೊಂಡಿದ್ರು. ಆ ಮೂಲಕ ಆರ್ಸಿಬಿ ಸೋಲನ್ನ ಸಂಭ್ರಮಿಸಿದ್ರು..ಈಗ ಇದೇ ಅವರಿಗೆ ತಿರುಗು ಬಾಣವಾಗಿದೆ. ಮುಂಬೈ ತಂಡ ಕ್ವಾಲಿಫಯರ್-2ಗೆ ಎಂಟ್ರಿಕೊಟ್ಟ ಬೆನ್ನಲ್ಲೇ ಸಂದೀಪ್ ವಾರಿಯರ್ ಈ ಸೀಸನ್ನ ಮಾವಿಹಣ್ಣು ಸ್ವೀಟಾಗಿದೆ ಎಂದು ನವೀನ್ ಉಲ್ ಹಕ್ಗೆ ಸಖತ್ತಾಗೆ ಟಾಂಗ್ ಕೊಟ್ಟಿದ್ದಾರೆ.
ನವೀನ್ ಕಂಡಾಗಲೆಲ್ಲಾ ಕೊಹ್ಲಿ, ಕೊಹ್ಲಿ ಚಾಂಟ್ಸ್..!
ಯಾವಾಗ ನವೀನ್ ಉಲ್ ಹಕ್ ಕೊಹ್ಲಿಯನ್ನ ಕೆಣಕಿದ್ರೋ ಆಗಿನಿಂದಲೇ ಅಪ್ಘನ್ ಬೌಲರ್ಗೆ ಕೆಟ್ಟಕಾಲ ಶುರುವಾಗಿತ್ತು. ಕಿರಿಕ್ ಬೌಲರ್ನನ್ನ ಕಂಡಾಗಗೆಲ್ಲಾ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಚಾಂಟ್ ಮಾಡ್ತಿದ್ರು..ಇದನ್ನೆಲ್ಲಾ ನೋಡಿ ಯಾಕಾದ್ರು ವಿಶ್ವದ ನಂ.1 ಬ್ಯಾಟ್ಸ್ಮನ್ನನ್ನ ಕೆಣಕಿದ್ವೋ ಅಂತ ಪಶ್ವಾತ್ತಾಪಪಟ್ಟಿರದೇ ಇರಲ್ಲ.
ಆರಂಭದಲ್ಲೇ ಹೇಳಿದಂತೆ ಇರಲಾರದೇ ಇರುವೆ ಬಿಟ್ಟುಕೊಂಡು ನವೀನ್ ಉಲ್ ಹಕ್ ಕಚ್ಚಿಸಿಕೊಂಡಿದ್ದಾರೆ..ಇನ್ನಾದ್ರು ಕಿಂಗ್ ಕೊಹ್ಲಿ ತಂಟೆಗೆ ಹೋಗುವ ಮುನ್ನ ಎಚ್ಚರವಾಗಿರಲಿ. ಇಲ್ಲವಾದ್ರೆ ಸ್ವೀಟ್ ಮ್ಯಾಂಗೋ ತಿನ್ನಬೇಕಾದವನು, ಖಾರದ ರುಚಿಯನ್ನೇ ನೋಡಬೇಕಾದೀತು..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ