newsfirstkannada.com

ಆರ್​ಸಿಬಿಗಿಲ್ಲ ಅದೃಷ್ಟ, ಅಭಿಮಾನಿಗಳಿಗೆ ಮತ್ತೆ ನಿರಾಸೆ.. ತವರಿನಲ್ಲಿ ಕೊಹ್ಲಿ ಶತಕ ಸಿಡಿಸಿದ್ರು ಹಿಂಗ್ಯಾಕಾಯ್ತು?

Share :

22-05-2023

    ಚಿನ್ನಸ್ವಾಮಿಯಲ್ಲಿ ಹರಿಯಿತು ​ಕೊಹ್ಲಿ ರನ್​ಮಳೆ..!

    ವಿರಾಟ್​ ಶತಕಕ್ಕೆ ಗಿಲ್ ಮೂರಂಕಿಯ ಪ್ರತ್ಯುತ್ತರ

    ಮುಂಬೈ ಇಂಡಿಯನ್ಸ್ ಋಣ ತೀರಿಸಿದ ಆರ್​ಸಿಬಿ..!

ದೇವರು ವರ ಕೊಟ್ಟರೂ, ಪೂಜಾರಿ ವರವರ ನೀಡಲಿಲ್ಲ ಅನ್ನೋ ಮಾತಿದೆ. ನಿನ್ನೆ ಸೇಮ್ ಟು ಸೇಮ್ ಆರ್​ಸಿಬಿ ವಿಚಾರದಲ್ಲಿ ಇದೇ ಆಯ್ತು. ವರುಣದೇವ ಅವಕಾಶ ನೀಡಿದರು, ಆರ್​ಸಿಬಿ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಪರಿಣಾಮ ಕಪ್​ ಗೆಲ್ಲೋ ಕನಸು ಈಡೇರಲಿಲ್ಲ.

ಹೋರಾಟ ಫಲ ನೀಡಲಿಲ್ಲ. ಅದೃಷ್ಟ ಕೈ ಹಿಡಿಯಲಿಲ್ಲ..  ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳ 16 ವರ್ಷಗಳ ಕಪ್​​ ಗೆಲ್ಲೋ ಕಸನು ನಿಜವಾಗಲಿಲ್ಲ. ಅಟ್​​ಲಿಸ್ಟ್​ ಪ್ಲೇಅಫ್​ಗೇರುವ ಅವಕಾಶವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಸಾಧ್ಯವಾಗಲಿಲ್ಲ.

ಹೌದು! ನಿನ್ನೆ ಅಕ್ಷರಶಃ ಆರ್​ಸಿಬಿಗೆ ಬಿಗ್ ಡೇ ಆಗಿತ್ತು. ಪ್ಲೇಆಫ್​​​ಗೇರುವ ಸುವರ್ಣವಕಾಶವೂ ಆರ್​ಸಿಬಿ ಕೈಯಲ್ಲೇ ಇತ್ತು. ಆದ್ರೆ, ಇದೆಲ್ಲವನ್ನೂ ಮಣ್ಣು ಪಾಲು ಮಾಡಿಕೊಂಡ ಫಾಫ್ ಪಡೆ, ತವರಿನಲ್ಲಿ ಮುಖಭಂಗ ಅನುಭವಿದ್ದಲ್ಲದೆ, ಕೋಟ್ಯಾಂತರ ಅಭಿಮಾನಿಗಳ ಕನಸು ನುಚ್ಚುನೂರು ಮಾಡ್ತು.

ಹೌದು! ಮಳೆಯ ಅವಕೃಪೆಗೆ ಸಿಲುಕಿ 50 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿಗೆ ಸಾಲಿಡ್ ಓಪನಿಂಗ್ ಸಿಕ್ತು. ಫಾಫ್-ಕೊಹ್ಲಿ ಎಂದಿನಂತೆ ಉತ್ತಮ ಆರಂಭ ನೀಡಿದರು. ಆದ್ರೆ, 28 ರನ್​ಗಳಿಗೆ ಫಾಫ್ ವಿಕೆಟ್ ಒಪ್ಪಿಸಿದ್ದೇ ತಡ ಆರ್​ಸಿಬಿಯ ಅಸಲಿ ಮುಖವಾಡ ಬಟಾಬಯಲಾಯ್ತು.

ಫಾಫ್ ವಿಕೆಟ್ ಒಪ್ಪಿಸಿದ್ದೇ ತಡ ಒಬ್ಬರ ಹಿಂದೊಬ್ಬರಂತೆ, ಪೆವಿಲಿಯನ್​ಗೆ ಹೆಜ್ಜೆಹಾಕಿದರು.. ಮತ್ತೊಂದು ತುದಿಯಲ್ಲಿ ತಂಡದ ಹೊಣೆ ಹೊತ್ತ ವಿರಾಟ್​, ಏಕಾಂಗಿ ಹೋರಾಟ ನಡೆಸಿದರು. ಗುಜರಾತ್​ ಬೌಲರ್​ಗಳನ್ನ ಇನ್ನಿಲ್ಲದಂತೆ ಕಾಡಿದ ಕೊಹ್ಲಿ, ಅಷ್ಟದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿರು. ಅಂತಿಮವಾಗಿ ಶತಕ ಸಿಡಿಸಿ ಸಂಭ್ರಮಿಸಿದ ವಿರಾಟ್​, ಸತತ ಎರಡನೇ ಸೆಂಚೂರಿ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ವಿರಾಟ್​ ಅಜೇಯ 101 ರನ್​ಗಳ ಪರಿಣಾಮ ಆರ್​ಸಿಬಿ, ನಿಗದಿತ 20 ಓವರ್​ಗಳಲ್ಲಿ 197 ರನ್​ಗಳ ಸವಾಲಿನ ಮೊತ್ತ ಪೇರಿಸಿತು.

ಸವಾಲಿನ ಮೊತ್ತ ಬೆನ್ನಟ್ಟಿದ್ದ ಗುಜರಾತ್​ಗೆ ಆರ್​ಸಿಬಿ ನೀಡಿದ್ದ 198 ರನ್​​ಗಳ ಗುರಿ ಕಠಿಣ ಎನಿಸಲೇ ಇಲ್ಲ. ಆರಂಭದಲ್ಲಿ ವೃದ್ದಿಮಾನ್ ಸಹಾ ವೈಫಲ್ಯ ಅನುಭವಿಸಿದ್ದು ಬಿಟ್ಟರೆ, ಆರ್​ಸಿಬಿ ಬೌಲರ್​ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಶುಭಮನ್​ ಗಿಲ್ ಹಾಗೂ ವಿಜಯ್​ ಶಂಕರ್, ಗುಜರಾತ್ ಗೆಲುವನ್ನ ಸುಲಭಗೊಳಿಸಿದರು.

ಅಷ್ಟೇ ಅಲ್ಲ.! ವಿರಾಟ್ ಶತದಾಟಕ್ಕೆ ಪ್ರತ್ಯುತ್ತರ ನೀಡಿದ ಶುಭ್​ಮನ್ ಗಿಲ್,  51 ಎಸೆತಗಳಲ್ಲಿ  5 ಬೌಂಡರಿ, 7 ಸಿಕ್ಸರ್​​ ಒಳಗೊಂಡ ಶತಕ ಸಿಡಿಸಿ ಸಂಭ್ರಮಿಸಿದರು. ಪರಿಣಾಮ 5 ಎಸೆತಗಳು ಬಾಕಿಯಿರುವಂತೆ ಗೆಲುವಿನ ಕೇಕೆ ಹಾಕಿತು..

ಮುಂಬೈ ಇಂಡಿಯನ್ಸ್ ಋಣ ತೀರಿಸಿದ ಆರ್​ಸಿಬಿ..!

ಮುಂಬೈ ಪ್ಲೇಆಫ್ ಭವಿಷ್ಯ ಆರ್​ಸಿಬಿ ಫಲಿತಾಂಶದ ಮೇಲಿತ್ತು. ಆದ್ರೆ, ಗುಜರಾತ್ ಎದುರು ಸೋತ ಆರ್​ಸಿಬಿ ಟೂರ್ನಿಯಿಂದ ಹೊರಬಿತ್ತು. ಇದರೊಂದಿಗೆ 14 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ದಾಖಲಿಸಿದ್ದ ಮುಂಬೈ, 4ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿತು. ಅಷ್ಟೇ ಅಲ್ಲ.! 2022ರಲ್ಲಿ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲು ಮುಂಬೈ ಕಾರಣವಾಗಿತ್ತು. ಈ ಸಲ ಆರ್​ಸಿಬಿ ಸೋಲಿನೊಂದಿಗೆ ಮುಂಬೈ ಪ್ಲೇಆಫ್ ಟಿಕೆಟ್ ಕನ್ಫರ್ಮ್ ಆಯ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Load More