KEA ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಎಸ್ಕೇಪ್
ಆರೋಪಿ ಮಹಾರಾಷ್ಟ್ರದಲ್ಲಿರುವ ಶಂಕೆ ಇದೆ ಎಂದ ಗೃಹಸಚಿವ
RD ಪಾಟೀಲ್ ಸಾಮಾನ್ಯ ವ್ಯಕ್ತಿ ಅಲ್ಲವೇ ಅಲ್ಲ-ವಿಜಯೇಂದ್ರ
ಕಲಬುರಗಿ: KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್.ಡಿ ಪಾಟೀಲ್, ಅಪಾರ್ಟ್ಮೆಂಟ್ನಿಂದ ಜಿಗಿದು ಓಡಿಹೋಗ್ತಿರೋ ದೃಶ್ಯ ಸೆರೆಯಾಗಿದೆ. ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವರ್ಧಾ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಆರ್‌ಡಿ ಪಾಟೀಲ್ ಅಪಾರ್ಟ್ಮೆಂಟ್‌ನ ಹಿಂಬದಿ ಕಾಂಪೌಂಡ್ನಿಂದ ಹಾರಿ ಪರಾರಿಯಾಗ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರ್ ಡಿ ಪಾಟೀಲ್ ನಗರದಲ್ಲೇ ಇದ್ದರೂ ಆತನ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ ಅನ್ನೋದೇ ವಿಪರ್ಯಾಸ.
ಗೃಹ ಸಚಿವರು ಹೇಳಿದ್ದೇನು..?
ಆರ್.ಡಿ.ಪಾಟೀಲ್ ತಲೆ ಮರೆಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್.. ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿದ್ದಾನೆಂಬ ಮಾಹಿತಿ ಇದೆ. ಪೊಲೀಸರ ನಿರ್ಲಕ್ಷದಿಂದ ತಪ್ಪಿಸಿಕೊಂಡಿದ್ರೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಆರ್.ಡಿ.ಪಾಟೀಲ್ ಮೇಲೆ ಸಾಕಷ್ಟು ಕೇಸ್‌ಗಳಿವೆ. ತಪ್ಪಿಸಿಕೊಂಡು ಎಲ್ಲಿಗೆ ಎಷ್ಟು ದಿವಸ ಹೋಗ್ತಾರೆ? ಪ್ರಕರಣವನ್ನು ಅಗತ್ಯಬಿದ್ದರೆ ಸಿಐಡಿ ತನಿಖೆಗೆ ಕೊಡ್ತೇವೆ. ಮರು ಪರೀಕ್ಷೆ ನಡೆಸುವ ಬಗ್ಗೆ ಕೆಇಎ ತೀರ್ಮಾನ ಮಾಡುತ್ತದೆ. ನಮಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ತನಿಖೆ ಮಾಡ್ತಿದ್ದೇವೆ. ಕಿಂಗ್‌ಪಿನ್‌ಗಳು ಭಯ ಇಲ್ಲದಿರುವುದಕ್ಕೆ ಇಷ್ಟು ದಿವಸ ಹೀಗೆ ಮಾಡಿದ್ದಾರೆ. ಇನ್ಮುಂದೆ ಹಾಗೆ ಆಗದಂತೆ ಮಾಡ್ತೀವಿ ಎಂದು ಪರಮೇಶ್ವರ್ ತಿಳಿಸಿದರು.
ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿರೋರ ಬೆಂಬಲ
ಇತ್ತ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೇಮಕಾತಿ ಪರೀಕ್ಷೆ ಅಕ್ರಮ ಬಗ್ಗೆ ಸಿಬಿಐ ತನಿಖೆಯಾಗಲಿ. ಆರ್. ಡಿ ಪಾಟೀಲ್ ಏನೂ ಸಾಮನ್ಯವಾದ ವ್ಯಕ್ತಿಯಲ್ಲ. ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿರೋರ ಬೆಂಬಲ ಇದೆ. ಆರ್.ಡಿ ಪಾಟೀಲ್ಗೆ ಆಡಳಿತ ಪಕ್ಷದ ನಾಯಕರ ಸಂಪರ್ಕ ಇದೆ ಎಂದು ಆರೋಪಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ