ಬೂಮ್ರಾ ಮುಂದಿರೋ ರಿಯಲ್ ಸವಾಲುಗಳೇನು ?
ಕ್ಯಾಂಪ್ಗೆ ಎಂಟ್ರಿಕೊಟ್ಟ ಸ್ಟಾರ್ ವೇಗಿ ಬೂಮ್ರಾ
ಏಷ್ಯಾ ಕದನದಲ್ಲಿ ನಿರ್ಧಾರವಾಗಲಿದೆ ಭವಿಷ್ಯ
ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ ಐರ್ಲೆಂಡ್ ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದ್ರು ನಿಜ. ಆದ್ರೆ ಅಸಲಿ ಕಮ್ಬ್ಯಾಕ್ನ ಚಾಲೆಂಜ್ ಇರೋದೇ ಈಗ. ಏಷ್ಯಾಕಪ್ ಬ್ಯಾಟಲ್ನಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ಗೆ ರಿಯಲ್ ಚಾಲೆಂಜ್ ಎದುರಾಗಿದೆ. ಅಷ್ಟಕ್ಕೂ ಬೂಮ್ರಾ ಯಾವೆಲ್ಲಾ ಸವಾಲಿನ ಚಕ್ರವ್ಯೂಹ ಬೇಧಿಸಬೇಕಿದೆ ಅನ್ನೋದರ ವಿವರ ಇಲ್ಲಿದೆ.
ತನ್ನ ಶರವೇಗದ ಅಸ್ತ್ರದಿಂದಲೇ ಬ್ಯಾಟ್ಸ್ಮನ್ಗಳನ್ನ ಹೆಡೆಮುರಿ ಕಟ್ಟುವ ವೆರಿ ಶಾರ್ಪ್ ಆ್ಯಂಡ್ ಡೇಂಜರಸ್ ವೆಪನ್. ಕೊಂಚ ಯಾಮಾರಿದರೂ ಎದುರಾಳಿ ಪಡೆ ಈ ವೆಪನ್ ಮುಂದೆ ಉಡೀಸ್ ಆಗುತ್ತದೆ. ಇಂತಹ ವೆಪನ್ ಈಗ ಟೀಮ್ ಇಂಡಿಯಾ ಸೇರಿಕೊಂಡಿದೆ. ಅಷ್ಟಕ್ಕೂ ಆ ಶಾರ್ಪ್ ಆ್ಯಂಡ್ ಡೆಡ್ಲಿ ವೆಪನ್ ಮತ್ಯಾವುದು ಅಲ್ಲ, ಅವರೇ ಡೆತ್ ಓವರ್ ಪಂಟರ್ ಜಸ್ಪ್ರೀತ್ ಬೂಮ್ರಾ.
ಏಷ್ಯಾಕಪ್ನಲ್ಲಿ ಬೂಮ್ರಾಗೆ ರಿಯಲ್ ‘ಟೆಸ್ಟ್’.!
ಬೆಂಗಳೂರಿನ ಆಲೂರಿನಲ್ಲಿ ನಡೀತಿರೋ ಕ್ಯಾಂಪ್ ಇನ್ನೆರಡು ದಿನ ಬಾಕಿ ಉಳಿದಿದೆ. ಇದಕ್ಕೂ ಮುನ್ನ ಮ್ಯಾಚ್ ವಿನ್ನರ್ ಜಸ್ಪ್ರೀತ್ ಬೂಮ್ರಾ ನಿನ್ನೆ ಟೀಮ್ ಇಂಡಿಯಾ ಕ್ಯಾಂಪ್ ಸೇರಿಕೊಂಡಿದ್ದಾರೆ. ಒಂದೆಡೆ ಬೂಮ್ರಾ ಎಂಟ್ರಿ ಸಂತೋಷದ ವಿಚಾರವಾದ್ರೂ ಏಷ್ಯಾಕಪ್ ಬೂಮ್ರಾ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಅಸಲಿಗೆ ಐರ್ಲೆಂಡ್ ಟೂರ್ನಲ್ಲಿ ಕಮ್ಬ್ಯಾಕ್ ಮಾಡಿದ್ರೂ ನಿಜವಾದ ರಿಯಲ್ ಟೆಸ್ಟ್ ಏಷ್ಯನ್ ದಂಗಲ್ನಲ್ಲಿ ಎದುರಾಗಲಿದೆ.
ಏಷ್ಯಾಕಪ್ನಲ್ಲಿ 10 ಓವರ್ ಬೌಲಿಂಗ್
11 ತಿಂಗಳ ಬಳಿಕ ತಂಡಕ್ಕೆ ಕಮ್ಬ್ಯಾಕ್ ಮಾಡಿದ ಬೂಮ್ರಾ ಐರ್ಲೆಂಡ್ ವಿರುದ್ಧ ಕೇವಲ 48 ಎಸೆತ ಬೌಲಿಂಗ್ ಮಾಡಿದ್ರು. 2 ಟಿ20 ಪಂದ್ಯ ಸೇರಿ 4 ವಿಕೆಟ್ ಕಬಳಿಸಿದ್ರು. ಇಷ್ಟಕ್ಕೆ ಖುಷಿಪಡಬೇಕಿಲ್ಲ. ಯಾಕಂದ್ರೆ ಮುಂಬರೋ ಏಷ್ಯಾಕಪ್ನಲ್ಲಿ ಅವರು 10 ಓವರ್ ಬೌಲಿಂಗ್ ಮಾಡಬೇಕಿದೆ. ವಿಥ್ ರಿದಮ್ ಜೊತೆ. ಅಲ್ಲದೇ 50 ಓವರ್ ಫೀಲ್ಡಿಂಗ್ ಬೇರೆ. ಬೆನ್ನುನೋವಿನ ಸರ್ಜರಿ ಬಳಿಕ ತಂಡಕ್ಕೆ ಮರಳಿರೋ ಬೂಮ್ರಾ ಅಸಲಿ ಫಿಟ್ನೆಸ್ ಹಕೀಕತ್ ಈ 50 ಓವರ್ ಗೇಮ್ನಲ್ಲಿ ತಿಳಿಯಲಿದೆ.
13 ತಿಂಗಳ ಬಳಿಕ ಏಕದಿನ ತಂಡಕ್ಕೆ ಕಮ್ಬ್ಯಾಕ್
ಸ್ಟಾರ್ ವೇಗಿ ಕೊನೆ ಏಕದಿನ ಪಂದ್ಯ ಆಡಿದ್ದು ಜುಲೈ 2022ರಲ್ಲಿ. ಆ ಬಳಿಕ ಬ್ಯಾಕ್ ಇಂಜುರಿ ಆಗಿ ತಂಡದಿಂದ ಹೊರಬಿದ್ರು. ಬರೋಬ್ಬರಿ 13 ತಿಂಗಳ ಬಳಿಕ ಮತ್ತೆ ಒನ್ಡೇ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಮುಂಚೂಣಿ ಬೌಲರ್ ಆಗಿರೋ ಬೂಮ್ರಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಟೀಮ್ ಇಂಡಿಯಾ ಏಷ್ಯಾಕಪ್ ಗೆಲ್ಲಬೇಕಾದ್ರೆ ಕೀ ಬೌಲರ್ ನಿಂದ ಇಂಪ್ರೆಸ್ಸಿವ್ ಪರ್ಫಾಮೆನ್ಸ್ ಮೂಡಿಬರಲೇಬೇಕಿದೆ.
ಬೂಮ್ರಾ ಹಳೇ ಖದರ್ ಸ್ಕಿಲ್ ಏನು ಅನ್ನೋದು ಏಷ್ಯಾಕಪ್ನಲ್ಲಿ ಗೊತ್ತಾಗಲಿದೆ. ಈ ಹಿಂದೆ ಡೆತ್ ಓವರ್ ಸ್ಪೆಷಲಿಸ್ಟ್ ಟೀಮ್ ಇಂಡಿಯಾದ ನಂಬಿಗಸ್ಥ ಬೌಲರ್ ಆಗಿದ್ದರು. ಎಂತಹ ಟಫ್ ಸಿಚುವೇಶನ್ನಲ್ಲೂ ದೃತಿಗೆಡದೇ ಪಂದ್ಯ ಗೆಲ್ಲಿಸಿಕೊಡಬಲ್ಲ ಕೆಪಾಸಿಟಿ ಇದೆ ಅನ್ನೋ ನಂಬಿಕೆ ಇತ್ತು. ಇಂಜುರಿ ಬಳಿಕ ತಂಡಕ್ಕೆ ಮರಳಿರೋ ಬೂಮ್ರಾ ಮತ್ತೆ ಅದೇ ರಿದಮ್ನಲ್ಲಿ ಬೌಲಿಂಗ್ ನಡೆಸೋದು ನಿಜಕ್ಕೂ ಸವಾಲಿನ ಕೆಲಸ. ಇದರ ಜೊತೆ ಫಿಟ್ನೆಸ್ ಕೂಡ ಕಾಯ್ದುಕೊಳ್ಳಬೇಕಾದ ಒತ್ತಡ ಬೂಮ್ರಾ ಮೇಲಿದೆ.
ಏಷ್ಯಾಕಪ್ ಚಾಲೆಂಜ್ ಗೆದ್ದರೆ ವಿಶ್ವಕಪ್ ದಾರಿ ಸುಲಭ..!
ಬೂಮ್ರಾ ಮುಂದಿರೋದು ಜಸ್ಟ್ ಒಂದೇ ಚಾನ್ಸ್. ಅದುವೇ ಏಷ್ಯಾಕಪ್. ಈ ಹೈ ಪ್ರೊಫೈಲ್ ಟೂರ್ನಿಯಲ್ಲಿ ಅಸಲಿ ತಾಕತ್ತು ಅನಾವರಣಗೊಳ್ಳಬೇಕು. ಫಿಟ್ನೆಸ್ ಜೊತೆ ಫಾರ್ಮ್ನಲ್ಲಿ ಮ್ಯಾಜಿಕ್ ಮಾಡೋದು ಅತ್ಯಗತ್ಯ. ಏಷ್ಯಾ ಸವಾಲು ಮೀರಿ ನಿಂತರಷ್ಟೇ ಏಕದಿನ ವಿಶ್ವಕಪ್ ಹಾದಿ ಸುಲಭವಾಗಲಿದೆ.
ಒಟ್ಟಿನಲ್ಲಿ ಐರ್ಲೆಂಡ್ ಟೂರ್ನಲ್ಲಿ ಬುಮ್ರಾ 145 ಕಿ.ಮೀ ಸ್ಲೀಡ್ ಬೌಲಿಂಗ್ ಮಾಡಿದ್ದರು. ರೈಟ್ ಲೈನ್ ಅಂಡ್ ಲೆಂಥ್ ಮೂಲಕ ಎದುರಾಳಿ ಕಂಗೆಡಿಸಿದ್ದರು. ಆದರೆ ಅದು ಟಿ20 ಆಟ. ಈಗ ಆಡಬೇಕಿರೋದು ಏಕದಿನ ಪಂದ್ಯ. ಇಲ್ಲೂ ಕೂಡ ಬೂಮ್ರಾ ಇದೇ ಖದರ್ ಮುಂದುವರೆಸಿದ್ರೆ ಟೀಮ್ ಇಂಡಿಯಾವನ್ನು ತಡೆಯೋದು ಉಳಿದವರಿಗೆ ಕಷ್ಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ