ನಡುರೋಡಲ್ಲಿ ASI ಉಲ್ಟಾ ಮಚ್ಚಲ್ಲಿ ಅಟ್ಯಾಕ್ ಮಾಡಿರೋ ಪ್ರಕರಣ
ಅಣ್ಣನ ಮಗನ ಬಾರ್ ಗಲಾಟೆಗೆ ASI ಶ್ರೀನಿವಾಸ್ ಮಚ್ಚು ಬೀಸಿದ್ರಾ?
ತಕ್ಷಣವೇ ಕೈಯಲ್ಲಿ ಮಚ್ಚು ಲಾಠಿ ಹಿಡಿದು ಓಡಿ ಬಂದಿದ್ದ ASI ಶ್ರೀನಿವಾಸ್
ಬೆಂಗಳೂರು: ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ಲಾಠಿ ಹಿಡಿದ ರಿಯಲ್ ಕ್ರೈಮ್ ಸ್ಟೋರಿ ಇದು. ನಡುರೋಡಲ್ಲಿ ASI ಉಲ್ಟಾ ಮಚ್ಚಲ್ಲಿ ಅಟ್ಯಾಕ್ ಮಾಡಿರೋ ಘಟನೆ ವಿಜಯನಗರದಲ್ಲಿ ನಡೆದಿದೆ. ಅಕ್ಟೋಬರ್ 26ರ ರಾತ್ರಿ ಯಾವ ರೌಡಿಗೂ ಕಮ್ಮಿ ಇಲ್ಲದಂತೆ ASI ಇಬ್ಬರು ಯುವಕರ ಮೇಲೆ ಮಚ್ಚು ಬೀಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಕೈಯಲ್ಲಿ ಮಚ್ಚು ಹಿಡಿದು ರೌಡಿಸಂಗಿಳಿದ ಪೊಲೀಸ್ ಬೇರೆ ಯಾರೂ ಅಲ್ಲ ಮಾಗಡಿ ರಸ್ತೆ ಪೊಲೀಸ್ ಠಾಣೆಯ ASI ಶ್ರೀನಿವಾಸ್ ಅವರಾಗಿದ್ದಾರೆ. ಕಳೆದ ಎರಡು ದಿನದ ಹಿಂದೆ ASI ಶ್ರೀನಿವಾಸ್ ಅಣ್ಣನ ಮಗನಾಗಿರುವ ಆನಂದ್ ಎಂಬುವವರು ತೇಜಸ್ವಿನಿ ಬಾರ್‌ನಲ್ಲಿ ಎಣ್ಣೆ ಹೊಡೆಯಲು ಹೋಗಿದ್ದರಂತೆ. ಆಗ ಅದೇ ಬಾರ್ ಅಲ್ಲಿ ಬಿಯರ್ ಕುಡಿಯಲು ಹೋಗಿದ್ದ ದಯಾನಂದ್ ಮತ್ತು ಶಶಿಧರ್ ಜೊತೆ ಆನಂದ್ ಮಾತಿಗೆ ಮಾತು ಬೆಳೆದಿದೆ. ಆಗ ಆನಂದ್ ಅವರು ನಿಮ್ಮಿಬ್ರದ್ದು ಯಾವ ಏರಿಯಾ ಎಂದು ಕೇಳಿದ್ದಾರೆ. ನಮ್ದು ಇದೇ ಏರಿಯಾ. ನಿಂದು ಯಾವ ಏರಿಯಾ ಎಂದು ದಯಾನಂದ್ ಕೇಳಿದ್ದಾರೆ. ನಂದು ಇದೇ ಏರಿಯಾ ಬೇಕಾದ್ರೆ ಬಾ ಮನೆ ತೋರಿಸ್ತೀನಿ ಅಂತ ಹೇಳಿದ ಆನಂದ್ ಅವರು ತನ್ನದೇ ಆಟೋದಲ್ಲಿ ಇಬ್ಬರನ್ನು ಕರೆದೊಯ್ದಿದ್ದಾರೆ.
ತೇಜಸ್ವಿನಿ ಬಾರ್‌ನಿಂದ ಆನಂದ್, ಇಬ್ಬರು ಯುವಕರನ್ನು ನೇರವಾಗಿ ತನ್ನ ಚಿಕ್ಕಪ್ಪ ಶ್ರೀನಿವಾಸ್ ಮನೆ ಬಳಿ ಕರೆತಂದಿದ್ದಾರೆ. RPC ಲೇಔಟ್ 8th ಕ್ರಾಸ್‌ನಲ್ಲಿ ASI ಶ್ರೀನಿವಾಸ್ ಅವರ ಮನೆಯಿದೆ. ಆಟೋದಿಂದ ಇಳಿದವನೇ ಜೋರಾಗಿ ಕೂಗಾಡಲು ಶುರು ಮಾಡಿದ್ದರಂತೆ. ಇವ್ರಿಬ್ರು ಕಳ್ಳರು ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಿದ್ದರಂತೆ. ತಕ್ಷಣ ಕೈಯಲ್ಲಿ ಮಚ್ಚು ಲಾಠಿ ಹಿಡಿದು ಓಡಿ ಬಂದಿದ್ದ ASI ಶ್ರೀನಿವಾಸ್ ಅವರು ಆನಂದ್ ಕೂಗಾಟ ಕೇಳಿ ಸುಮ್ಮನೆ ನಡೆದುಕೊಂಡು ಹೋಗ್ತಿದ್ದ ದಯಾನಂದ್, ಶಶಿಧರ್ ಇಬ್ಬರನ್ನು ಓಡಿ ಹೋಗಿ ಹಿಡಿದುಕೊಂಡಿದ್ದಾರೆ. ಪೊಲೀಸ್ ರೌಡಿಯ ಈ ಅಟ್ಯಾಕಿಂಗ್ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪ್ಪನ ರೌಡಿಸಂಗೆ ಮಗ ಮತ್ತು ಮಗಳು ಸಾಥ್?
ಇಬ್ಬರು ಯುವಕರನ್ನು ಏನೂ ಮಾತಾಡಲು ಬಿಡದೆ ಏಕಾಏಕಿ ಇಬ್ಬರ ಮೇಲೆ ASI ಶ್ರೀನಿವಾಸ್ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಮಚ್ಚಲ್ಲಿ ಕೈ ಕಾಲು ಕುತ್ತಿಗೆ ಭಾಗಕ್ಕೆ ಕೊಚ್ಚಲು ಶ್ರೀನಿವಾಸ್ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಏಟು ತಾಳಲಾರದೆ ಕೆಳಗೆ ಬೀಳ್ತಿದ್ದಂತೆ ಲಾಠಿಯಿಂದ ಮತ್ತೆ ಥಳಿಸಿದ್ದಾರೆ. ಅಪ್ಪ ಲಾಠಿಯಲ್ಲಿ ಹೊಡೆಯುವಾಗ ಅವರ ಮಗಳು ಮಚ್ಚು ಹಿಡಿದುಕೊಂಡಿದ್ದಾರೆ. ಅಪ್ಪನೊಂದಿಗೆ ಸೇರಿ ಮಗನೂ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕೊನೆಗೆ ಸ್ಥಳಕ್ಕೆ ಆಗಮಿಸಿದ್ದ ವಿಜಯನಗರ ಹೊಯ್ಸಳ ಸಿಬ್ಬಂದಿ, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಇಬ್ಬರು ಯುವಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ASI ಶ್ರೀನಿವಾಸ್ ವಿರುದ್ದ FIR ದಾಖಲಾಗಿದೆ. FIR ದಾಖಲಾಗ್ತಿದ್ದಂತೆ ಶ್ರೀನಿವಾಸ್ ಅವರು ಎಸ್ಕೇಪ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ