newsfirstkannada.com

WATCH: ಅಭಿಮಾನಿ ದೇವರುಗಳಿಗೆ ಶಾಕ್ ಕೊಟ್ಟು ಸರ್‌ಪ್ರೈಸ್‌! ರಿಯಲ್ ಸ್ಟಾರ್‌ ಉಪೇಂದ್ರ ಹೇಳಿದ್ದೇನು?

Share :

15-09-2023

    ಸೆ.18 ಗಣೇಶ್ ಹಬ್ಬದ ದಿನವೇ ಉಪ್ಪಿ ಅಭಿಮಾನಿಗಳಿಗೆ ಗುಡ್​ನ್ಯೂಸ್​

    ಯುಐ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಉಪೇಂದ್ರ ಆಹ್ವಾನ

    ಎಲ್ಲಾ ಅಭಿಮಾನಿ ದೇವರುಗಳಿಗೆ ಯುಐ ಚಿತ್ರದ ಟೀಸರ್ ಉಡುಗೊರೆ

ಇದೇ ಸೆಪ್ಟೆಂಬರ್ 18ರಂದು ರಿಯಲ್ ಸ್ಟಾರ್‌ ಉಪೇಂದ್ರ ಅವರ ಹುಟ್ಟುಹಬ್ಬ. ಈ ಬಾರಿ ಉಪೇಂದ್ರ ಅವರ ಜನ್ಮದಿನವನ್ನು ಬಹಳ ಅದ್ಧೂರಿಯಾಗಿ ಆಚರಿಸಬೇಕು ಅನ್ನೋದು ಅವರ ಅಭಿಮಾನಿಗಳ ಆಸೆಯಾಗಿತ್ತು. ಆದ್ರೆ, ಉಪೇಂದ್ರ ತಮ್ಮ ಫ್ಯಾನ್ಸ್‌ಗೆ ಶಾಕ್‌ ಕೊಟ್ಟು ಆಮೇಲೆ ಒಂದು ಸರ್‌ಪ್ರೈಸ್‌ ಕೂಡ ಕೊಡುತ್ತಿದ್ದಾರೆ. ತಮ್ಮ ಯುಐ ಚಿತ್ರದ ಟೀಸರ್​ ಬಿಡುಗಡೆಗೆ ಉಪ್ಪಿ ಭರ್ಜರಿ ತಯಾರಿ ನಡೆಸಿದ್ದಾರೆ.

ಇದನ್ನು ಓದಿ: ಮತ್ತೆ ಹುಟ್ಟಿ ಬನ್ನಿ ಅಪ್ಪ.. ಕರ್ನಲ್ ಮನ್‌ಪ್ರೀತ್ ಸಿಂಗ್ ಮಕ್ಕಳ ಸೆಲ್ಯೂಟ್‌.. ನೋಡೋರ ಕಣ್ಣೀರು ತರಿಸುತ್ತೆ ಈ ವಿಡಿಯೋ!

ಸೆಪ್ಟೆಂಬರ್ 18ರಂದು ಗಣೇಶ ಚತುರ್ಥಿ ಇರುವ ಕಾರಣ ನಟ ಉಪೇಂದ್ರ ಅವರ ನಿರ್ದೇಶನದ ‘ಯುಐ’ ಸಿನಿಮಾದ ಟೀಸರ್ ಅಂದೇ ರಿಲೀಸ್ ಆಗಲಿದೆ. ಊರ್ವಶಿ ಥಿಯೇಟರ್‌​ನಲ್ಲಿ ಅಭಿಮಾನಿಗಳ ಜೊತೆ ಯುಐ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ. ಈ ಬಗ್ಗೆ ಉಪೇಂದ್ರ ಅವರು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಅಭಿಮಾನಿ ದೇವರುಗಳಿಗೆ ಹುಟ್ಟುಹಬ್ಬದ ದಿನ ತಮ್ಮ ಮನೆ ಬಳಿ ಯಾರು ಬರದಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ನಟ ಹೇಳಿದ್ದೇನು..?

‘‘ಎಲ್ಲಾ ಅಭಿಮಾನಿಗಳಿಗೆ ನಮಸ್ಕಾರ. ಸೆಪ್ಟೆಂಬರ್ 18 ತುಂಬಾನೇ ವಿಶೇಷವಾದ ದಿನ. ಈ ವರ್ಷ ಗಣೇಶ ಚತುರ್ಥಿ ಬಂದಿದೆ. ನನ್ನ ಅಭಿಮಾನಿಗಳ ಹಬ್ಬ ಕೂಡ ಹೌದು. ಅದೇ ರೀತಿ ‘ಯುಐ’ ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 17 ರಾತ್ರಿ ಅಥವಾ ಸೆಪ್ಟೆಂಬರ್ 18ರ ಬೆಳಿಗ್ಗೆ ಕತ್ರಿಗುಪ್ಪೆ ಮನೆಯಲ್ಲಾಗಲಿ ಸದಾಶಿವ ನಗರದ ಮನೆಯಲ್ಲಾಗಲಿ ಇರುವುದಿಲ್ಲ ನಾನು. ಸೆಪ್ಟೆಂಬರ್ 18ರಂದು ಮಧ್ಯಾಹ್ನ ಊರ್ವಶಿ ಥಿಯೇಟರ್ ಬಳಿ ಬನ್ನಿ. ಅಲ್ಲಿಯೇ ಕೇಕ್ ಕತ್ತರಿಸೋಣ. ಹುಟ್ಟುಹಬ್ಬ ಆಚರಿಸೋಣ. 2 ಗಂಟೆಯಿಂದ 8 ಗಂಟೆಯವರೆಗೆ ಆಚರಣೆ ಇರುತ್ತದೆ. ಸಂಜೆ 6:30ಕ್ಕೆ ಥಿಯೇಟರ್ ಒಳಗೆ ಟೀಸರ್ ಲಾಂಚ್​ ಮಾಡುತ್ತೇವೆ’’ ಎಂದಿದ್ದಾರೆ ನಟ ಉಪೇಂದ್ರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಅಭಿಮಾನಿ ದೇವರುಗಳಿಗೆ ಶಾಕ್ ಕೊಟ್ಟು ಸರ್‌ಪ್ರೈಸ್‌! ರಿಯಲ್ ಸ್ಟಾರ್‌ ಉಪೇಂದ್ರ ಹೇಳಿದ್ದೇನು?

https://newsfirstlive.com/wp-content/uploads/2023/09/uppi.jpg

Load More