ರಿಯಲ್ ಸ್ಟಾರ್ ಉಪ್ಪಿ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲು ಬಿಗ್ ಪ್ಲಾನ್
ಅದ್ದೂರಿಯಾಗಿ ರಿಲೀಸ್ ಆಗಲು ಸಿದ್ದವಾಯಿತು 'ಬುದ್ಧಿವಂತ 2' ಸಿನಿಮಾ
ಉಪೇಂದ್ರ ಅವರಿಗೆ ಸೋನಲ್, ಮೇಘನಾ ರಾಜ್ ಜೋಡಿ ನಾಯಕಿಯರು
ಡಾ.ಟಿ.ಆರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಮತ್ತೊಂದು ಬಹುನಿರೀಕ್ಷಿತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಚಮಕ್, ಅಯೋಗ್ಯ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಡಾ.ಟಿ.ಆರ್ ಚಂದ್ರಶೇಖರ್ ಅವರು ರಿಯಲ್ ಸ್ಟಾರ್ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರ “ಬುದ್ದಿವಂತ 2” ಅದ್ಧೂರಿಯಾಗಿ ರಿಲೀಸ್ ಆಗಲು ಸಜ್ಜಾಗಿ ನಿಂತಿದೆ.
ಈ ಚಿತ್ರದ ನಿರ್ಮಾಣ ಪೂರ್ಣಗೊಂಡಿದ್ದು ಇದೀಗ ಬಿಡುಗಡೆ ಸಮಯವನ್ನು ಚಿತ್ರದ ನಿರ್ಮಾಪಕರು ಬಹಿರಂಗಗೊಳಿಸಿದ್ದಾರೆ. ಈ ಬಾರಿಯ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಚಿತ್ರವನ್ನು ಬೃಹತ್ ಪ್ರಮಾಣದಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಬುದ್ದಿವಂತ -2 ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಟೀಸರ್ ಮೂಲಕವೇ ಚಿತ್ರದ ಬಿಡುಗಡೆಯ ದಿನಾಂಕ ಕೂಡ ಘೋಷಣೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜಯರಾಮ್ ಮಾಧವನ್ “ಬುದ್ಧಿವಂತ 2” ಚಿತ್ರದ ನಿರ್ದೇಶಕರು. ಗುರುಕಿರಣ್ ಸಂಗೀತ ನೀಡಿದ್ದಾರೆ. ಎಸ್ ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಜಾಗೂ ರವಿವರ್ಮ, ವಿಕ್ರಮ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಉಪೇಂದ್ರ ಅವರಿಗೆ ನಾಯಕಿಯರಾಗಿ ಸೋನಾಲ್ ಮೊಂಟೆರೊ ಹಾಗೂ ಮೇಘನರಾಜ್ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
#Buddhivantha2 Coming Soon to Theatres in September 2023#RealStarUpendra @nimmaupendra #Upendra pic.twitter.com/yd1NY1DNuy
— Bhargavi (@IamHCB) July 1, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ