ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆಗಿ 3 ತಿಂಗಳು ಕಳೆದಿದೆ
ಮೊದಲ ಬಾರಿಗೆ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ ನಟ ಉಪೇಂದ್ರ
ಈ ವಿಚಾರದಲ್ಲಿ ನಾವು ಜಡ್ಜ್‌ಮೆಂಟ್ ಕೊಡೋಕೆ ಆಗಲ್ಲ ಎಂದ ರಿಯಲ್ ಸ್ಟಾರ್
ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿ 3 ತಿಂಗಳುಗಳೇ ಕಳೆದಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಾವಾಗ ರಿಲೀಸ್ ಆಗ್ತಾರೆ. ದಾಸನಿಗೆ ಬಿಡುಗಡೆಯ ಬಾಗಿಲು ಯಾವಾಗ ತೆರೆಯುತ್ತೆ ಅನ್ನೋದು ಕಾಯುತ್ತಿದ್ದಾರೆ. ಫ್ಯಾನ್ಸ್‌ಗಳ ಒದ್ದಾಟ ಒಂದು ಕಡೆಯಾದ್ರೆ ಸ್ಯಾಂಡಲ್‌ವುಡ್‌ಗೂ ದರ್ಶನ್ ಅರೆಸ್ಟ್ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.
ಇದನ್ನೂ ಓದಿ: ದರ್ಶನ್ಗೆ ಕಾಡ್ತಿರೋದು ಅದೊಂದೇ ವಿಚಾರ; ವಿಜಯಲಕ್ಷ್ಮಿ ಭೇಟಿ ಬಳಿಕ ಕೊಂಚ ಸಮಾಧಾನಗೊಂಡ ದಾಸ
ರಿಯಲ್ ಸ್ಟಾರ್ ಉಪೇಂದ್ರ ಅವರು ನಟ ದರ್ಶನ್ ಅರೆಸ್ಟ್ ಆದ ಬಳಿಕ ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ನ್ಯೂಸ್ ಫಸ್ಟ್ ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ ಮೌನ ಮುರಿದಿರುವ ಉಪೇಂದ್ರ ಅವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್‌ವುಡ್ ಸ್ಟಾರ್ ಆಗಿ ನಟ ದರ್ಶನ್ ಅರೆಸ್ಟ್ ಬಗ್ಗೆ ನಟ ಉಪೇಂದ್ರ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಖಂಡಿತವಾಗಿ ಈ ಪ್ರಕರಣದಿಂದ ಎಲ್ಲರಿಗೂ ನೋವಾಗಿದೆ. ಸದ್ಯದಲ್ಲೇ ತೀರ್ಪು ಬರುತ್ತೆ ಕಾದು ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.
ಏನಂದ್ರೆ ಎಲ್ಲರಿಗೂ ನೋವಾಗಿದೆ. ಒಂದು ಅಂತು ಸತ್ಯ. ಇಂಡಸ್ಟ್ರಿಯಲ್ಲಿ ಇರುವವರಿಗೂ ನೋವಾಗಿದೆ. ಯಾಕಂದ್ರೆ ನಾವೆಲ್ಲಾ ಒಂದೇ ಫ್ಯಾಮಿಲಿ. ಯಾರದೇ ತಪ್ಪಾಗಲಿ, ಸರಿಯಾಗಲಿ ನೋವಂತೂ ಎಲ್ಲರಿಗೂ ಆಗುತ್ತೆ. ಜನಗಳಿಗೂ ಅದೇ ಭಾವನೆ ಇದೆ.
ಈ ಘಟನೆ ಆಗಬಾರದು ಅನ್ನೋದು ಎಲ್ಲರಲ್ಲೂ ಇದೆ. ಇನ್ನೂ ತನಿಖೆ ನಡೆಯುತ್ತಿದೆ. ಮಾಧ್ಯಮಗಳಲ್ಲಿ ತೋರಿಸುತ್ತಾ ಇರೋದನ್ನೇ ನಾವು ನೋಡುತ್ತಾ ಇದ್ದೇವೆ. ಈ ವಿಚಾರದಲ್ಲಿ ನಾವು ಜಡ್ಜ್‌ಮೆಂಟ್ ಕೊಡೋಕೆ ಆಗಲ್ಲ. ಇವ್ರು ಸರಿ ಇವ್ರು ತಪ್ಪು ಅಂತ ಹೇಳೋಕೆ ಆಗಲ್ಲ. ಸದ್ಯದಲ್ಲೇ ತೀರ್ಪು ಬರುತ್ತೆ. ನಾವೆಲ್ಲಾ ಒಪ್ಪಿಕೊಳ್ಳಲೇ ಬೇಕು. ಒಂದು ನ್ಯಾಯ ವ್ಯವಸ್ಥೆ ಇದೆ. ಕೋರ್ಟ್‌ಗೆ ನಾವು ಗೌರವ ಕೊಡಬೇಕು. ಖಂಡಿತ ಒಂದು ರಿಸಲ್ಟ್ ಹೊರ ಬರುತ್ತೆ. ಅದಕ್ಕೆ ನಾವು ಕಾಯಬೇಕು ಅದನ್ನೇ ನಾವು ಮಾಡುತ್ತಿದ್ದೇವೆ ಅಷ್ಟೇ ಎಂದು ಉಪೇಂದ್ರ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ ಚನೆ: ಎಲ್ಲಾ DTHವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ