newsfirstkannada.com

2 ಶತಕ.. 4 ಅರ್ಧಶತಕ.. ಬರೋಬ್ಬರಿ 543 ರನ್​​.. ವಿಶ್ವಕಪ್​​ನಲ್ಲಿ ಕೊಹ್ಲಿ ಯಶಸ್ಸಿಗೆ ಕಾರಣವೇನು ಗೊತ್ತಾ?

Share :

10-11-2023

  2023ರ ವಿಶ್ವಕಪ್​​ನಲ್ಲಿ ಚೇಸ್​ ಮಾಸ್ಟರ್​​ ಭರ್ಜರಿ ಬ್ಯಾಟಿಂಗ್​​

  2 ಶತಕ.. 4 ಅರ್ಧಶತಕ.. 543 ರನ್​ ಚಚ್ಚಿದ ವಿರಾಟ್​​ ಕೊಹ್ಲಿ!

  ವಿರಾಟ್​​ ಕೊಹ್ಲಿ ಯಶಸ್ಸಿನ ಬ್ಯಾಟಿಂಗ್​​ಗೆ ಕಾರಣವೇನು ಗೊತ್ತಾ?

ಸದ್ಯ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ 8ಕ್ಕೆ 8 ಪಂದ್ಯ ಗೆದ್ದು ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. ಹೇಗಾದರೂ ಮಾಡಿ ಈ ಬಾರಿ ವಿಶ್ವಕಪ್​ ಗೆಲ್ಲಲೇಬೇಕು ಎಂದು ಕ್ಯಾಪ್ಟನ್​ ರೋಹಿತ್​ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮುಂದಾಗಿದೆ. ಟೀಂ ಇಂಡಿಯಾ ಇಷ್ಟು ಮ್ಯಾಚ್​ ಗೆಲ್ಲು ತಂಡದ ಸಂಘಟಿತ ಪ್ರದರ್ಶನವೇ ಕಾರಣ. ಅದರಲ್ಲೂ ಟೀಂ ಇಂಡಿಯಾದ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಗರಿಷ್ಠ ರನ್​ ಪೇರಿಸಿದ್ದು.

ಹೌದು, ಸದ್ಯ ಸಖತ್​ ಫಾರ್ಮ್‌ನಲ್ಲಿರೋ ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ 2 ಶತಕ ಸಿಡಿಸಿದ್ದಾರೆ. ಜತೆಗೆ 4 ಬಾರಿ ಅರ್ಧಶತಕ ಚಚ್ಚಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಪರ ಅತೀ ಹೆಚ್ಚು ಅಂದರೆ 543 ರನ್​ ಗಳಿಸಿದ್ದಾರೆ. ಇದಕ್ಕೆ ಕಾರಣ ವಿರಾಟ್ 14 ಗಂಟೆಗಳಿಗೂ ಹೆಚ್ಚು ಕಾಲ ಏಕಾಂಗಿಯಾಗಿ ಬ್ಯಾಟ್ ಬೀಸಿದ್ದಾರೆ. ಇದು ಒಂದು ಟೂರ್ನಿಯಲ್ಲೇ ಗರಿಷ್ಠ ಟೈಮ್​ ಆಗಿದೆ.

ಕೊಹ್ಲಿ ಜತೆಗೆ ಭಾರತದ ಆಟಗಾರರ ಪೈಕಿ ರೋಹಿತ್ ಸುದೀರ್ಘ ಬ್ಯಾಟಿಂಗ್‌ ಮಾಡಿದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ವಿಕೆಟ್‌ ಕೀಪರ್ ಕೆಎಲ್ ರಾಹುಲ್ 3ನೇ ಸ್ಥಾನದಲ್ಲಿದ್ದರೆ, ಶ್ರೇಯಸ್ ಅಯ್ಯರ್ 4ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಶುಭ್ಮನ್ ಗಿಲ್ 5ನೇ ಸ್ಥಾನದಲ್ಲಿದ್ದಾರೆ.

ಅತೀ ಹೆಚ್ಚು ಸಮಯ ಕಳೆದ ಕೊಹ್ಲಿ

ಎಂಟು ಪಂದ್ಯಗಳು ಆಡಿರೋ ಕೊಹ್ಲಿ ಒಟ್ಟು 14 ಗಂಟೆ 39 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಕಾಲ ಕಳೆದಿದ್ದಾರೆ. ಈ ಅವಧಿಯಲ್ಲಿ ಅವರು 543 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 108.60 ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಶತಕ.. 4 ಅರ್ಧಶತಕ.. ಬರೋಬ್ಬರಿ 543 ರನ್​​.. ವಿಶ್ವಕಪ್​​ನಲ್ಲಿ ಕೊಹ್ಲಿ ಯಶಸ್ಸಿಗೆ ಕಾರಣವೇನು ಗೊತ್ತಾ?

https://newsfirstlive.com/wp-content/uploads/2023/10/KOHLI_VIRAT.jpg

Load More