newsfirstkannada.com

ಮಚ್ಚಿನಿಂದ ಕೊಚ್ಚಿ ರೌಡಿ ಶೀಟರ್​​​ ಉಸಿರು ನಿಲ್ಲಿಸಿದ ಹಂತಕರು; ರಿವೇಂಜ್​​ ಹಿಂದಿನ ಕಾರಣ ಬಿಚ್ಚಿಟ್ರು

Share :

08-08-2023

    ರೌಡಿ ಶೀಟರ್​​ ಸಿದ್ದಾಪುರ ಮಹೇಶ್​​ ಕೊಲೆ ಕೇಸ್​​​

    ಕೇಸ್​ ಸಂಬಂಧ 14 ಮಂದಿ ಆರೋಪಿಗಳು ಅರೆಸ್ಟ್​

    ಕೊಲೆಗೆ ಸ್ಕೆಚ್​​ ಹಾಕಿದ್ದು ಹೇಗೆ? ಎಂದು ಬಿಚ್ಚಿಟ್ರು..!

ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಿದ್ದಾಪುರ ರೌಡಿ ಶೀಟರ್ ​ಮಹೇಶ್​ ಕೊಲೆ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಕೊಲೆ ಮಾಡಿ ಎರಡು ದಿನದಿಂದ ತಲೆಮರಿಸಿಕೊಂಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಬಂಧಿತರಾದ ಸಿದ್ದಾಪುರ ಸುನೀಲ್,‌ ಕಣ್ಣನ್ ವೇಲ, ಪ್ರದೀಪ್, ಮನು, ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್​​ ಪಾಪ, ಗೋಕುಲ್, ಸುರೇಶ, ಕಾರ್ತಿಕ್, ವಾಲೆ ಪ್ರವೀಣ ಸೇರಿ ಹದಿನಾಲ್ಕು ಆರೋಪಿಗಳನ್ನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಒಂದಷ್ಟು ವಿಚಾರಗಳು ಬೆಳಕಿಗೆ ಬಂದಿದೆ.

ಕೊಲೆ ಮಾಡಿದ್ದು ಯಾಕೆ?

ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್​​ನಿಂದ ಕೃತ್ಯ ನಡೆದಿದ್ದು, ಗ್ಯಾಂಗ್ ವಾರ್ ಮತ್ತು ರಿವೇಂಜ್​​ಗಾಗಿ ಕೊಲೆ ನಡೆದಿದೆ ಎನ್ನಲಾಗ್ತಿದೆ. ವಿಲ್ಸನ್ ಗಾರ್ಡನ್ ನಾಗನ ಕೊಲೆಗೆ ಮಹೇಶ್​ ಸ್ಕೆಚ್ ಹಾಕಿದ್ದ. ಹೀಗಾಗಿ ನಾಗನ ವಿರೋಧಿಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ್ದ. ಸುಮಾರು 30 ರೌಡಿಗಳ ಗ್ಯಾಂಗ್ ಮಾಡ್ಕೊಂಡು ಹತ್ಯೆಗೆ ಪ್ಲಾನ್ ಮಾಡಿದ್ದನಂತೆ. ಈ ಪ್ಲಾನ್ ಬಗ್ಗೆ ಮಾಹಿತಿ ಗೊತ್ತಾಗ್ತಿದ್ದಂತೆ ಮಹೇಶನ ಮುಗಿಸಿರೋದಾಗಿ ಪೊಲೀಸರ ಮುಂದೆ ಕೊಲೆಗೆ ಕಾರಣ ಹೇಳಿದ್ದಾರೆ ಆರೋಪಿಗಳು ಎನ್ನಲಾಗ್ತಿದೆ.

ಇನ್ನು ಈ ಗ್ಯಾಂಗ್​ನ ಮತ್ತೊಬ್ಬ ಸದಸ್ಯ ಡಬಲ್ ಮೀಟರ್ ಮೋಹನ ತಲೆಮರಿಸಿಕೊಂಡಿದ್ದು, ಆತನ ಹುಡುಕಲು ಪೊಲೀಸರು ಮುಂದಾಗಿದ್ದಾರೆ.

ಹೇಗಿತ್ತು ಆರೋಪಿಗಳ ಸ್ಕೆಚ್​

ಮಹೇಶ್​​ ಜೈಲಿನಿಂದ ಹೊರ ಬರುವ ಮಾಹಿತಿ ಪಡೆದಿದ್ದ ಹಂತಕರು, ಆತ ಕಾರು ಹತ್ತಿ ಮೈನ್​​ ರೋಡಿಗೆ ಬರೋದನ್ನೇ ಕಾಯುತ್ತಿದ್ರು. ಕಾರು ರಸ್ತೆಗೆ ಬರ್ತಿದ್ದಂತೆ ಬೈಕ್ ಮತ್ತು ಕಾರಿನಲ್ಲಿ ಫಾಲೋ ಮಾಡಿದ್ದ ನಾಗನ ಹುಡುಗರು, ಲಾಂಗು ಮಚ್ಚು ಝಳಪಿಸಿದ್ರು. ಮಹೇಶನ ಜೊತೆಗೆ ಹುಡುಗರು ಇದ್ರೂ ಬಿಡದೇ ಕೊಲೆ ಮಾಡಿದ್ರು. ನಾಗನ ಟೀಮ್​ ಸೆಕೆಂಡ್​ ಗ್ಯಾಪ್​​ ಕೂಡಾ ಕೊಡದೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು.

ರಿವೇಂಜ್​​ಗಾಗಿ ಆರೋಪಿಗಳು ಈ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಕೊಲೆಗೆ ಸ್ಕೆಚ್ ರೂಪಿಸಿದ್ದು ನಾವೇ ಅಂತಾನೂ ಹೇಳಿದ್ದಾರೆ. ನಮ್ಮಿಂದೆ ಯಾರೂ ಇಲ್ಲ. ಮದನ್​ ಮತ್ತು ಕಪಿಲ್​ ಕೊಲೆ ಮಾಡಿದ್ದ ಇವನನ್ನ ಮುಗಿಸಬೇಕು ಅಂತ ಹೀಗೆ ಮಾಡಿರೋದಾಗಿ ತಿಳಿಸಿದ್ದಾರೆ. ಅದೇನೇ ಇರ್ಲಿ ಈ ಕೊಲೆಯ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆದ್ರೆ ರಾತ್ರೋ ರಾತ್ರಿ ನಡೆದ ಬೆಳವಣಿಗೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿರೋದಂತೂ ಸತ್ಯ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ವೀಕ್ಷಿಸಿ

ಮಚ್ಚಿನಿಂದ ಕೊಚ್ಚಿ ರೌಡಿ ಶೀಟರ್​​​ ಉಸಿರು ನಿಲ್ಲಿಸಿದ ಹಂತಕರು; ರಿವೇಂಜ್​​ ಹಿಂದಿನ ಕಾರಣ ಬಿಚ್ಚಿಟ್ರು

https://newsfirstlive.com/wp-content/uploads/2023/08/Sideesha.jpg

Load More