ಬರೋಬ್ಬರಿ 12 ವರ್ಷಗಳ ನಂತರ ತವರಿನಲ್ಲಿ ಹೀನಾಯ ಸೋಲು
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಟೀಮ್ ಇಂಡಿಯಾ..!
ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಅಸಲಿ ಕಾರಣ ಏನು?
ಬರೋಬ್ಬರಿ 12 ವರ್ಷಗಳ ನಂತರ ತವರಿನಲ್ಲೇ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿದೆ. ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಅಸಲಿ ಕಾರಣ ಏನು? ಎಂದು ಮಾಜಿ ಕ್ರಿಕೆಟರ್ ಸಂಜಯ್ ಮಾಂಜ್ರೇಕರ್ ಬಿಚ್ಚಿಟ್ಟಿದ್ದಾರೆ.
ಟೀಮ್ ಇಂಡಿಯಾ ಸೋಲಿಗೆ ಇವರೇ ಕಾರಣ ಎಂದ ಸಂಜಯ್
ಭಾರತ ತಂಡದಲ್ಲಿ ಸರ್ಫರಾಜ್ ಖಾನ್ ಇದ್ದರು. ಅವರಿಗಿಂತಲೂ ಮೊದಲು ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಿದ್ದು ತಪ್ಪು. ಟೀಮ್ ಇಂಡಿಯಾ ಈ ಟೆಸ್ಟ್‌ನಲ್ಲಿ ಕೊಂಚ ಡಿಫೆನ್ಸ್ ಚೆನ್ನಾಗಿ ಆಡಬೇಕಿತ್ತು. ನಮ್ಮ ಬ್ಯಾಟರ್ಗಳು ಜವಾಬ್ದಾರಿ ಮರೆತರು. ಬ್ಯಾಟರ್ಗಳು ಸರಿಯಾಗಿ ಆಡಿದ್ರೆ, ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿತ್ತು ಎಂದರು.
ಸ್ಪಿನ್ರಗಳ ವಿರುದ್ಧ ಅಬ್ಬರಿಸದ ಟೀಮ್ ಇಂಡಿಯಾ
ಮಿಡಲ್ ಆರ್ಡರ್ ಬ್ಯಾಟರ್ ಶುಭ್ಮನ್ ಗಿಲ್ ಮತ್ತು ಓಪನರ್ ಯಶಸ್ವಿ ಜೈಸ್ವಾಲ್ ಭಾರತವನ್ನು ಗೆಲ್ಲಿಸಬಹುದು ಎಂದು ಎಲ್ಲರೂ ಭಾವಿಸಿದ್ದರು. ಭಾರತದ ಪರ ಪಂದ್ಯ ತಿರುಗಿಸಬಹುದು ಎಂದು ಅಂದಾಜಿಸಿದ್ರು. ಕೊನೆಗೂ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿ ಹೋಯ್ತು. ಗಿಲ್, ಜೈಸ್ವಾಲ್ ಸ್ಪಿನ್ ಬೌಲರ್‌ಗಳ ವಿರುದ್ಧ ಎಡವಿದ್ರು ಎಂದರು.
ಕೊಹ್ಲಿ ಬಗ್ಗೆ ಏನಂದ್ರು ಸಂಜಯ್?
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಮಿಚೆಲ್ ಸ್ಯಾಂಟ್ನರ್ ಲೆಂಥ್ ಜಡ್ಜ್ ಮಾಡಲು ಕೊಹ್ಲಿ ಎಡವಿದ್ರು. ಸ್ಪಿನ್ ಬೌಲರ್‌ಗಳ ವಿರುದ್ಧ ಆಡಲು ಟೀಮ್ ಇಂಡಿಯಾದ ಆಟಗಾರರ ಬಳಿ ಯಾವುದೇ ಶಾಟ್ಗಳು ಇರಲಿಲ್ಲ. ಭಯ ಬಿದ್ದು ಬ್ಯಾಟ್ ಮಾಡಿದ್ದಕ್ಕೆ ಸೋತರು ಎಂದರು.
113 ರನ್ಗಳಿಂದ ಸೋಲು
ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್ ಗಳಿಂದ ಸೋಲು ಕಂಡಿದೆ. ಈ ಮೂಲಕ ಭಾರತ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ. ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 259 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ತಂಡ ಕೇವಲ 156 ರನ್ಗಳಿಗೆ ಆಲೌಟ್ ಆಗುವ ಮೂಲಕ 103 ರನ್ ಗಳ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್ 255 ರನ್ ಕಲೆ ಹಾಕಿ ಆಲೌಟ್ ಆಗಿತ್ತು. ಇದರೊಂದಿಗೆ ಭಾರತಕ್ಕೆ ಗೆಲ್ಲಲು 359 ರನ್ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತ 245 ರನ್ಗಳಿಗೆ ಆಲೌಟ್ ಆಗುವ ಮೂಲಕ 113 ರನ್ ಗಳಿಂದ ಪಂದ್ಯ ಸೋತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ